ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ

205
Share

 

ಮೈಸೂರು, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರ ರವರು ಹಾಗೂ ವಾರ್ಡ ನಂ-21ರ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ವೇದಾವತಿ ಹಾಗೂ ವಾರ್ಡ ನಂ-06 ರ ಶ್ರೀ ಎಸ್.ಬಿ.ಎಂ. ಮಂಜು ರವರೊಂದಿಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೈಗೊಂಡಿರುವ 24.1 ಅನುದಾನದಲ್ಲಿ ಮೈಸೂರು ಬೋಗಾದಿ ಮುಖ್ಯರಸ್ತೆ ಗಂಗೋತ್ರಿ ಬಡಾವಣೆ) ವಾರ್ಡ್-21 ರ ವ್ಯಾಪ್ತಿಯ ಮೈಸೂರು – ಬೋಗಾದಿ ಮುಖ್ಯ ರಸ್ತೆಯ ಗಂಗೋತ್ರಿ ಬಡಾವನೆ ಬಳಿ ರೂ.25.00ಲಕ್ಷದ ತಡೆಗೋಡೆ ಕಾಮಗಾರಿಗೆ & ಗಂಗೋತ್ರಿ ಬಡಾವಣೆ EWS ಮನೆಗಳ ಬೀದಿಯಲ್ಲಿ ರೂ.20.00ಲಕ್ಷದ ವೆಚ್ಚದಲ್ಲಿ ಚರಂಡಿ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗೆ ಹಾಗೂ ವಾರ್ಡ್ ನಂ-6 ರಲ್ಲ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಯನ್ನು ರೂ:8.50 ಲಕ್ಷ ವೆಚ್ಚದ ಕಾಮಗಾರಿಗಳಿಗಾಗಿ ಒಟ್ಟು ಮೊತ್ತ ರೂ.53.00 ಲಕ್ಷ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು*, ಈ ಕಾರ್ಯಕ್ರಮದ ಮಾಹಿತಿಯನ್ನು ತಮ್ಮ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂದು ತಮ್ಮನ್ನು ಕೋರಲು ಮಾನ್ಯ ಶಾಸಕರಿಂದ ನಿರ್ದೇಶಿತನಾಗಿದ್ದೇನೆ.

ಗಂಗೋತ್ರಿ ಬಡಾವಣೆಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಚಿಕ್ಕವೆಂಕಟುರವರು, ಚಾಮರಾಜ ಕ್ಷೇತ್ರದ ಭಾ.ಜ.ಪ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ & ಪುನೀತ್, ಬಿ.ಎಲ್.ಎ-1 ದಿನೇಶ್ ಗೌಡ, ಯುವ ಮೋರ್ಚಾದ ಪ್ರಜ್ವಲ್ ಶ್ರೀವತ್ಸ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ, ಮುಖಂಡರುಗಳಾದ ಚೌಡಪ್ಪ, ಮಂಜುನಾಥ್, ಶ್ರೀನಿವಾಸ್, ಶಿವಶಂಕರ್ ಬಾಬು, ಸೋಮಶೇಖರ ರಾಜೇ ಅರಸ್, ಗುರು ದತ್ತ, ಶಿವಲಿಂಗೇಗೌಡ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಮೀನಮ್ಮ, ಮಹೇಶ್ ಕುದೇರು, ಈರಣ್ಣ, ರಘು, ವಾಸು, ಯತೀಶ್, ವೆಂಕಟೇಶಯ್ಯ ಮುಂತಾದವರು ಹಾಜರಿದ್ದರು.

ಗೋಕುಲಂ ಬಡಾವಣೆಯ ಭೂಮಿ ಪೂಜೆ ಕಾರ್ಯಮದಲ್ಲಿ ರಾಜ್ಯ ಪರಿಷತ್ ಸದಸ್ಯ ನಂಜಪ್ಪ, ಆಶ್ರಯ ಸಮಿತಿ ಸದಸ್ಯ ಮಹೇಶ್, ಬಿ.ಎಲ್.ಎ-1 ದಿನೇಶ್ ಗೌಡ, ಭಾ.ಜ.ಪ ಉಪಾಧ್ಯಕ್ಷ ಜಯಣ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ, ಮುಖಂಡರುಗಳಾದ ಅಶೋಕ, ಭರತ್, ಸುಬ್ಬಣ್ಣ, ಜನಾರ್ಧನ್, ನಿತಿನ್, ಪ್ರಕಾಶ್, ನಾಗ, ಮಾಧವರಾವ್, ದಶರಥ, ಪೇಪರ್ ಪ್ರಕಾಶ್, ಫಾಲ್ಕನ್ ಪ್ರಸನ್ನ, ಶಿವು, ಮಹೇಶ್ ಕುದೇರು, ಮುಂತಾದವರು ಹಾಜರಿದ್ದರು


Share