ನವರಾತ್ರಿ : ಸುಮಂಗಲಿಯರ ಸಮಾಲೋಚನೆ

7724
Share

603, Panchamantra Rd, Kuvempu Nagara, Mysuru, Karnataka 570023 phone number:9945046203
ನಾಡಿನ ಸಮಸ್ತ ಜನತೆಗೆನವರಾತ್ರಿಯ ಶುಭಾಶಯಗಳು. ನಾಡದೇವತೆ ಚಾಮುಂಡಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ……
ಶ್ರೀ ಡಿ.ಟಿ.ಪ್ರಕಾಶ್ ಅಧ್ಯಕ್ಷರು. ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣರ ಸಂಘ ಮೈಸೂರು.

ಹಿಂದೂ ಪಂಚಾಂಗ ರೀತಿಯ ಆಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುವುದೇ ದಸರಾ. ಜಗನ್ಮಾತೆಯಾದ ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುವುದೇ, ನವರಾತ್ರಿಯ ವಿಶೇಷ, ಹತ್ತನೆಯ ದಿನ ವಿಜಯದಶಮಿ. ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ, ಬನ್ನಿಯನ್ನು ವಿನಿಯೋಗಿಸುವುದು ನಮ್ಮ ರಾಜ್ಯದಲ್ಲಿ ಆಚರಿಸಿಕೊಂಡು ಬರುತ್ತಿರುವ ಒಂದು ವಿಶೇಷ. ಅದರಲ್ಲೂ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆ ದಸರಾ ಉತ್ಸವದ ವಿಶೇಷ ಹಾಗೂ ಜಗತ್ ಪ್ರಸಿದ್ಧ. ಮಾರ್ಕಂಡೇಯ ಋಷಿ ಬರೆದಿರುವ ದುರ್ಗಾಸಪ್ತಶತಿ ಗ್ರಂಥದಲ್ಲಿ ಹೇಳಿರುವಂತೆ ನವದುರ್ಗಿಗಳ ಹೆಸರು ಈ ರೀತಿ ಇರುತ್ತದೆ, ಶೈಲಪುತ್ರಿ, ಬ್ರಹ್ಮಚಾರಿಣಿ’, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ, ಹೀಗೆ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಭಾರತದಾದ್ಯಂತ ನವರಾತ್ರಿಯನ್ನು ವಿಶಿಷ್ಟ ವೈಶಿಷ್ಟ್ಯತೆಯಿಂದ ಹಲವಾರು ಹೆಸರಿನಿಂದ ಆಚರಿಸಲ್ಪಡುವ ಸಂಪ್ರದಾಯ ಇದೆ.

ಈ ವರ್ಷದ ದಸರೆಯು ಶನಿವಾರ 17-10-2020 ರಿಂದ ಭಾನುವಾರ 25-10-2020 ರ ವರಗೆ ವಿಜೃಂಭಣೆಯಿಂದ ನಡೆಯಲಿದೆ. ‘ಮೈಸೂರುಪತ್ರಿಕೆ’ಯು ಈ ನವರಾತ್ರಿಯ ಅಂಗವಾಗಿ ನವ ಮಾತೆಯರಿಂದ ಆಯಾ ದಿನದ ದೇವಿಯ ಪೂಜೆಯ ವಿಶೇಷತೆಗಳನ್ನು ತಿಳಿಸುವ ಪ್ರಯತ್ನ ಮಾಡಿದೆ …

ಮೊದಲ ದಿನ-

ಗೌರಿ ಅಥವಾ ಶೈಲಪುತ್ರಿ ಪ್ರಧಾನ ದೇವತೆ.
ಸರ್ವರನ್ನು ಸಮಭಾವದಿಂದ ಕಾಣುವ ದೇವಿ, ಜ್ಞಾನದ ಸಂಕೇತ, ಪ್ರಕೃತಿ ವಿಕೃತಿ ಪುರುಷ ಎಂದು ಪೂಜನೀಯಳು.

ಬಣ್ಣ -ಅರಿಶಿಣದ ಸಂಕೇತದ ಹಳದಿ.
ಅರ್ಚನೆ -ಹರಿದ್ರಾ .
ನೇವೇದ್ಯ- ಕ್ಷೀರಾನ್ನ, ಹುಗ್ಗಿ .

ಎರಡನೆಯ ದಿನ-

ರಾಜರಾಜೇಶ್ವರಿ ಅಥವಾ ಬ್ರಹ್ಮಚಾರಿಣಿ ಎಂದು ಪೂಜನೀಯಳು. ಮನುಷ್ಯರಿಗೆ ಯಾವಾಗ ಏನು ಬೇಕೋ ಅದನ್ನು ಬೇಡಿದವರಿಗೆ ಕರುಣಿಸುವ ಕರುಣಾಮಯಿ ಪ್ರೀತಿಯನ್ನು ಉಳಿಸಿ ದ್ವೇಷವನ್ನು ದೂರ ಮಾಡುವ ಜಗದಾಯಿನಿ.
ಬಣ್ಣ -ಕೆಂಪು.
ಅರ್ಚನೆ -ರವಿಕೆ ಕಣ
ನೈವೇದ್ಯ- ಮುದ್ಗಾಅನ್ನ.

ಮೂರನೇ ದಿನ-

ದುರ್ಗಿಲಕ್ಷ್ಮಿ /ಚಂದ್ರ ಘಂಟಾ- ಶಾಂತಿ ,ಪ್ರಶಾಂತತೆ ಹಾಗೂ ಸಮೃದ್ಧಿಯ ಸಂಕೇತ. ಸವಾಲುಗಳನ್ನು ಎದುರಿಸಲು ಧೈರ್ಯ ತುಂಬುವ ಶಕ್ತಿ ಶಾಲಿನಿ.
ಬಣ್ಣ -ಗುಲಾಬಿ
ಅರ್ಚನೆ -ಕುಂಕುಮ. ನೈವೇದ್ಯ- ಕೊಬ್ಬರಿ ಅನ್ನ .

ನಾಲ್ಕನೇ ದಿನ-

ವಿಶಾಲಾಕ್ಷಿ/ ಕೂಷ್ಮಾಂಡಾ. ಶಾಂತಿ ಜ್ಞಾನ ಸ್ವರೂಪಿಣಿ ,ಒಳಗಿನ ಆಸೆಗಳನ್ನು ಪೂರೈಸುವ ಮತ್ತು ರಕ್ಷಿಸುವ ದಾಯಿನಿ.
ಬಣ್ಣ -ಹಸಿರು.
ಅರ್ಚನೆ -ಪುಷ್ಪಾ. ನೈವೇದ್ಯ -ಕದಂಬ

ಐದನೇ ದಿನ-

ಪರಾಶಕ್ತಿ /ಸ್ಕಂದ ಮಾತೆ.
ಶಿವಶಕ್ತಿ ರೂಪಿಣಿ, ಸದ್ಗುಣಮನಸ್ಸು ,ಧಾರ್ಮಿಕ ಜೀವನ ಪ್ರೇರೇಪಿಣಿ.
ಬಣ್ಣ -ನೀಲಿ.
ಅರ್ಚನೆ -ನಿಂಬೆ ಹಣ್ಣು
ನೇವೇದ್ಯ- ನಿಂಬೆಹಣ್ಣಿನ ಚಿತ್ರಾನ್ನ .

ಆರನೇ ದಿನ

ವಿಶಾಲಾಕ್ಷಿ/ ಕಾತ್ಯಾಯಿನಿ. ಅನ್ನಪೂರ್ಣೇಶ್ವರಿ ಹಾಗು ಒಳ ಮತ್ತು ಹೊರ ಕಣ್ಣನ್ನು ತೆರೆಸುವ ಜ್ಞಾನದಾಯಿನಿ. ಬಣ್ಣ -ಹಸಿರು.
ಅರ್ಚನೆ -ವಿಳ್ಳೆದೆಲೆ. ನೇವೇದ್ಯ -ಸಿಹಿ ಹುಗ್ಗಿ/ಸಕ್ಕರೆ ಪೊಂಗಲ್.

ಏಳನೇ ದಿನ-

ಸರಸ್ವತಿ -ಅಜ್ಞಾನದ ಪೊರೆಯನ್ನು ತೆಗೆಸುವ ಜ್ಞಾನದಾಯಿನಿ.
ವಿದ್ಯಾರ್ಥಿಗಳಿಗೂ ಐಶ್ವರ್ಯವಂತರೀಗೂ ಜ್ಞಾನನೀಡುವ
ಮಹಾತಾಯಿನಿ .
ಬಣ್ಣ -ಶ್ವೇತಾ /ಬಿಳಿ
ಅರ್ಚನೆ -ವಡೆ. ನೇವೇದ್ಯ- ಕ್ಷೀರಾನ್ನ,ಎರಿಯಪ್ಪ

ಎಂಟನೇ ದಿನ

ಚಂಡಿ ಶಕ್ತಿ /ದುರ್ಗಿ. ರಾಕ್ಷಸತ್ವ ಮರ್ದಿನಿ’ ಪೈಶಾಚಿಕ ಶಕ್ತಿ ಭಾವನೆ ಹೋಗಲಾಡಿಸಿ ಕರುಣೆ ಪ್ರವಹಿಸುವ ಶಕ್ತಿ ದಾಯಿನಿ.
ಅರ್ಚನೆ -ನಾಣ್ಯ -ನೇವೇದ್ಯ- ಗುಡಾನ್ನ

ಒಂಬತ್ತನೇ ದಿನ-

ಶಕ್ತಿ ದುರ್ಗಿ/ ಸಿದ್ಧಿದಾತ್ರಿ .ಶಾಂತಿ, ಐಶ್ವರ್ಯ, ಸತ- ಚ್ಚಿತ್- ಆನಂದ ವನ್ನುಂಟು ಮಾಡುವ ಶಕ್ತಿದಾಯಿನಿ.
ಯಂತ್ರ ,ವಾಹನ ಆಯುಧ ಪೂಜೆ- ಇಂದಿನ ವಿಶೇಷ.

ಹತ್ತು ನೇ ಹಾಗೂ ಕೊನೆಯ ದಿನ

ಪೂರ್ಣ ಕಲಾ ರಾಜೇಶ್ವರಿ/ ವಿಜಯದಶಮಿ. ಹೆಸರೇ ಹೇಳುವಂತೆ ಆಂತರಿಕ ಬಾಹ್ಯ ವೈರಿ ನಾಶ ಮಾಡಿ ವಿಜಯವನ್ನು ಉಂಟು ಮಾಡುವ ದಿನ,ಬನ್ನಿ ಪೂಜೆ ಮಾಡುವುದರಿಂದ ದುಷ್ಟ ಶಕ್ತಿ ವಿರುದ್ಧ ವಿಜಯ ಸಾಧಿಸುವ ದಿನ.ಎಲ್ಲ ಸತ್ಕಾರ್ಯಗಳಿಗೂ ಶುಭ/ವಿಜಯದ ದಿನ.
ಈ ಶ್ಲೋಕವನ್ನು ಪಠಿಸಿ …..
॥ಶಮಿ ಕ್ಷಮಯತೆ ಪಾಪಂ ಶಮಿ ಪಾಪ ವಿನಾಶಿಣಿ ಅರ್ಜುನಸ್ಯ ಧನೂರ್ತಾಯೇ ರಾಮಸ್ಯೆ ಪ್ರಿಯದರ್ಶಿನಿ ॥ ಮಾಹಿತಿ ಸಂಗ್ರಹ , ಶ್ರೀಮತಿ ಭಾಗ್ಯಲಕ್ಷ್ಮಿ ರಾಮನ್


Share