ಭಾರತದ ರಾಷ್ಟ್ರ ಧ್ವಜ ಹೊತ್ತ ಅಜಾದಿ ಸೈಟ್ ನಾಳೆ ಉಡಾವಣೆ

268
Share

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018ಆಗಸ್ಟ್ 15 ರಂದು ನವದೆಹಲಿಯ ಕೆಂಪು ಕೋಟೆಯಲ್ಲಿ ಪ್ರಕಟಿಸಿ ದ್ದಂತೆ ಭಾರತದ ರಾಷ್ಟ್ರ ಧ್ವಜ ಹೊತ್ತ ಸ್ವದೇಶಿ ಉಪಗ್ರಹ ನಾಳೆ ಬಾಹ್ಯಾಕಾಶಕ್ಕೆಹಾರಲಿದೆ .ಭಾರತದಾದ್ಯಂತ 75ಸರ್ಕಾರಿ ಶಾಲೆಗಳ 750 ಶಾಲಾ ವಿದ್ಯಾರ್ಥಿಗಳೇ ತಯಾರಿಸಿರುವ 75 ಕೆಜಿ ತೂಕದ ಈ ಉಪಗ್ರಹವನ್ನು ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ರಾಷ್ಟ್ರಧ್ವಜ ದೊಂದಿಗೆ ಉಡ್ಡಯನ ಗೊಳ್ಳಲಿದೆ .ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಎಸ್ಸೆಸ್ಸೆಲ್ವಿ ವಾಹನವು ಇದನ್ನು ನಾಳೆ ಬೆಳಿಗ್ಗೆ 9.18ಬಾಹ್ಯಾಕಾಶಕ್ಕೆ ಹೊತ್ತು ಹೋಗಲಿದೆ.ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡ್ಡಯಿಸಲು ಇಸ್ರೋ ಸಜ್ಜಾಗಿರುವುದರಿಂದ ಮುಂದಿನ ದಿನಗಳಲ್ಲಿ ಮಹತ್ವಾಕಾಂಕ್ಷೆ ಬೆಳವಣಿಗೆ ಕಾಣಬಹುದು.ಸಣ್ಣ ಸಣ್ಣ ಉಪಗ್ರಹಗಳನ್ನು ಹಾರಿಸಲು ಇನ್ನು ಮುಂದೆ ಒಳ್ಳೆಯ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಇಸ್ರೋದ ಹಾಲಿ ಚೇರ್ಮನ್ ಎಸ್ ಸೋಮನಾಥ್ ತಿಳಿಸಿದ್ದಾರೆ.

* ಸಾಂದರ್ಭಿಕ ಚಿತ್ರ


Share