ಮೈಸೂರು-ಸಂಗೀತ ಕಲಾವಿದರಿಗೆ ಸಂಗೀತ ಕಲಾ ಸಾರಥಿ ಪ್ರಶಸ್ತಿ ಪ್ರದಾನ

230
Share

 

*ಯೋಗ ದೇಹಕ್ಕೆ ಸಂಗೀತ ಮನಸ್ಸಿಗೆ:ಡಾ॥ ವೈ ಡಿ ರಾಜಣ್ಣ*

ಮೈಸೂರಿನಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ “ಸಂಗೀತದಿಂದ ಆರೋಗ್ಯ” ವಿಚಾರಮಂಥನ ಕಾರ್ಯಕ್ರಮ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಂಗೀತ ಕಲಾವಿದರಿಗೆ ಸಂಗೀತ ಕಲಾ ಸಾರಥಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು,

ಕಲಾಸಾರಥಿ ಪ್ರಶಸ್ತಿ ಭಾಜನರಾದ
1)ಡಾ, ದೀಪಿಕಾ ಪಾಂಡುರಂಗಿ… ದಾಸ ಸಾಹಿತ್ಯ, ಶಾಸ್ತ್ರೀಯ ಸಂಗೀತ ಗಾಯಕರು, ಭಾರತ ನಾಟ್ಯ ದಲ್ಲಿ A… Grade ಪಡೆದವರು..
2)ವಿದ್ವಾನ್, R. K ಪದ್ಮನಾಭ ವೀಣೆಯಲ್ಲಿ ಪಾಂಡಿತ್ಯ.
ದೇಶ ವಿದೇಶದಲ್ಲಿ ಕಾರ್ಯಕ್ರಮ ನೀಡಿರುತ್ತಾರೆ.
3)ವಿಧೂಷಿ C. S. ನಾಗರತ್ನ.. ಖ್ಯಾತ ಪಿಟೀಲು ವಾದಕರು.
4)ವಿದ್ವಾನ್.. V. S. ರಮೇಶ್..
ತಾಳವಾದ್ಯ ಪ್ರವೀಣರು..
ಮೃದಂಗ, ಮೊರ್ಚಿಂಗ್, ಘಟ.. ವಾದಕರು.
5)ವಿದ್ವಾನ್..H. P. ಕಿರಣ್.. (Blind )
ಕರ್ನಾಟಿಕ್ ಶಾಸ್ತ್ರೀಯ ಗಾಯಕರು ಮತ್ತು ಕೀಬೋರ್ಡ್ ವಾದಕರು.
6)ವಿದ್ವಾನ್ ಯಧುಕುಮಾರ್…ಸ್ಯಾಕ್ಸೋಫೋನ್ ವಾದಕರು, ಮೈಸೂರು ಅರಮನೆ ವಿದ್ವಾಂಸರು.
ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು

ಇದೇ ಸಂಧರ್ಭದಲ್ಲಿ ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು ಎಂದರೇ ಸಂಗೀತದ ಶಕ್ತಿಯೇ ಕಾರಣ,
ಸಂಗೀತಾಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ, ಶಂಖನಾದ ಶ್ವಾಸಕೋಶ ಶುದ್ಧಿ ಮಾಡುತ್ತದೆ, ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ, ವೇದಮಂತ್ರ ಮೆದುಳಿನ ಶಕ್ತಿ ಹೆಚ್ಚಿಸುತ್ತದೆ, ಹಿಂದೂಸ್ತಾನಿ ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ, ಕಟ್ಟುನಿಟ್ಟಿನ ಸಂಗೀತ ಪ್ರಕಾರದಿಂದ ಅರೋಗ್ಯ ವೃದ್ಧಿಯಾಗುತ್ತದೆ, ಮಕ್ಕಳನ್ನು ಕಡ್ಡಾಯವಾಗಿ ಸಂಗೀತಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ, ಹಿಂದಿನಕಾಲದಲ್ಲಿ ಆಕಾಶವಾಣಿ ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಜನಸಾಮನ್ಯರು ಅವಲಂಬಿತರಾಗಿದ್ದರು ಆರೋಗ್ಯದ ಮನಃಶಾಂತಿ ಹೆಚ್ಚಾಗಿ ಸಿಗುತ್ತಿದ ಕಾಲ ಎಂದು ಸ್ಮರಿಸಿದರು

ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ ಸಂಗೀತ ಕಾರ್ಯಕ್ರಮಗಳು ಕಲಾಭಿಮಾನಿಗಳಿಗೆ ನೆಮ್ಮಿದಿಯ ಔಷಧಿ ನೀಡುತ್ತದೆ, ದೇವರನಾಮ ಭಜನೆ ಸುಗಮಸಂಗೀತದಿಂದ ಹಿರಿಯ ನಾಗರೀಕರಿಗೆ ಬದುಕಿನ ಶಕ್ತಿ ಸಿಗುತ್ತದೆ, ಆಕಾಶವಾಣಿ, ದೂರದರ್ಶನ, ಸಂಗೀತ ವಿಶ್ವವಿದ್ಯಾನಿಯಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಾಮಾಜಿಕ ಜಾಲಾತಾಣದ ಮೂಲಕ ಕಲಾವಿದರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದು ಕಲಾಭಿಮಾನಿಗಳಿಗೆ ಪರಿಚಯಿಸಲು ಯೋಜನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ
ಡಾ ವೈ ಡಿ ರಾಜಣ್ಣ ಮಾತನಾಡಿ
ಯೋಗ ದೇಹದ ಆರೋಗ್ಯಕ್ಕೆ ಸಂಗೀತ ಮನಸಿನ ಆರೋಗ್ಯಕ್ಕೆ
ಚೈತನ್ಯ ನೀಡುವಂತದ್ದು.ಹಾಗಾಗಿ ಯೋಗ ಮತ್ತು ಸಂಗೀತ ಅಭ್ಯಾಸ ಮನುಷ್ಯನ ವಿಕಾಸ ಬಯಸುವಂತವು.ಇವುಗಳ ಅಭ್ಯಾಸದ ಮೂಲಕ ದೈನಂದಿನ ಜೀವನದ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು
ಸಂಗೀತಕ್ಕಿರುವ ಇಂತಹ ಅಗಾಧ ವ್ಯಾಪ್ತಿ ಮತ್ತು ಪ್ರಭಾವಗಳ ನೆಲೆ ಹಿನ್ನೆಲೆಯಲ್ಲಿ ಸರ್ಕಾರ ವಿಶ್ವ ಸಂಗೀತ ದಿನಾಚರಣೆಯನ್ನು ಕೂಡ ಆಚರಿಸಬೇಕು.ಆ ಮೂಲಕ ಯುವಕರಲ್ಲಿ ಸಾಂಸ್ಕೃತಿಕ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಅರ್ಥೈಸಿದರು

ಲೇಖಕಿ ಹಾಗೂ ಗಾಯಕಿ
ಶ್ವೇತಾ ಮಡಪ್ಪಾಡಿ ಮಾತನಾಡಿ
ಕಲಾಸಾರಥಿ ಎನ್ನುವ ಪ್ರಶಸ್ತಿ ಕಲಾವಿದರನ್ನ ಗುರುತಿಸಿ ಸಂಗೀತ ದಿನಾಚರಣೆಯಂದು ನೀಡಿರುವುದು ಅರ್ಥಪೂರ್ಣವಾದುದು, ಸಂಗೀತದ ಶಿಕ್ಷಣಕ್ಕೆ ಮತ್ತು ಅಭ್ಯಾಸಕ್ಕೆ ಎಲ್ಲೂ ಅಂತ್ಯವಿಲ್ಲ ಸಂಸ್ಕಾರ ಶ್ರದ್ದೆಯಿಂದ ಕಲಿತರೆ ಶಾರದೆ ಸರಸ್ವತಿ ಒಲಿಯುತ್ತಾಳೆ, ಸಂಗೀತವನ್ನ ಕಲಿತರೆ ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ ಇದರ ಕಡೆ ವೈಜ್ಞಾನಿಕವಾಗಿ ಸರ್ಕಾರಗಳು ಚಿಂತಿಸಬೇಕಿದೆ

ಸನ್ಮಾನ ಸ್ವೀಕರಿಸಿದ ಕಲಾವಿದೆ ವಿದೂಷಿ ದೀಪಿಕಾ ಪಾಂಡುರಂಗಿ ಮಾತನಾಡಿ ಸಂಗೀತ ಬೆಳೆಯುವಲ್ಲಿ ಮೈಸೂರಿನ ಕಲಾವಿದರ ಪಾತ್ರ ಮಹತ್ವವಾದುದು, ಯೋಗ ದಿನಾಚರಣೆ ಮತ್ತು ಸಂಗೀತ ಎರಡು ಒಂದೇ ದಿನದಂದೇ ಆಚರಿಸುತ್ತೇವೆ, ಸರ್ಕಾರ ಸಂಗೀತ ಕಲಾವಿದರನ್ನ ಗುರುತಿಸಿ ಮುಖ್ಯವಾಹನಿಗೆ ತರಲು ಡಿಜಿಟಲ್ ಮಾಧ್ಯಮ ವೇದಿಕೆಗಳನ್ನ ಹೆಚ್ಚಾಗಿ ಬಳಸಿಕೊಳ್ಳಬೇಕು, ಕಲಾವಿದರು ಜೀವನೋಪಾಯಕ್ಕೆ ಸಂಗೀತ ಕ್ಷೇತ್ರದ ಮೇಲೆ ಅವಲಂಭಿತರಾಗಿರುವವರು ಸಾಕಷ್ಟಿದ್ದಾರೆ ಹಾಗಾಗಿ ಕಲಾವಿದರ ಗಣತಿ ಅವಶ್ಯಕವಿದೆ ಇದರ ಕಡೆ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯೋನ್ಮುಖರಾಗಬೇಕು ಎಂದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ವೈ ಡಿ ರಾಜಣ್ಣ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,
ಲೇಖಕರು ಹಾಗೂ ಗಾಯಕರಾದ ಶ್ವೇತಾ ಮಡಪ್ಪಾಡಿ ,
ಪ್ರಸಾದ್ ಸ್ಕೂಲ್ ಆಫ್ ರಿದಮ್ ಸಂಸ್ಥೆಯ ಮುಖ್ಯಸ್ಥರಾದ ರಾಘವೇಂದ್ರ ಪ್ರಸಾದ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ , ಪ್ರಧಾನ ಕಾರ್ಯದರ್ಶಿ ಅಜಯ್ ಶಾಸ್ತ್ರಿ , ವಿನಯ್ ಕಣಗಾಲ್ ,ಸುಚೀಂದ್ರ ,ಚಕ್ರಪಾಣಿ ,ನವೀನ್ ಕೆಂಪಿ,
ನಾಗಶ್ರೀ ಸುಚೀಂದ್ರ,ಹಾಗೂ ಇನ್ನಿತರರು ಹಾಜರಿದ್ದರು


Share