ಮೈಸೂರು, 2.40 ಕೋಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

199
Share

 

*ಶಾಸಕರಿಂದ ಕೃಷ್ಣರಾಜ ಕ್ಷೇತ್ರದ ಶ್ರೀರಾಂಪುರ, ಅರವಿಂದನಗರ, ವಿವೇಕನಂದಾನಗರದ ವಾಡ್೯ ಗಳಲ್ಲಿ 2.40 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

59 64 ಮತ್ತು 65 ರ ವಾರ್ಡ್ ಗಳಲ್ಲಿ ವಿಶೇಷವಾಗಿ ಮೇಯರ್ ರವರ ವಿಶೇಷ ಅನುದಾನದಲ್ಲಿ ಎರಡು ಕಾಮಗಾರಿಗಳನ್ನು ಮತ್ತು ನಗರೋತ್ಥಾನದ ವ್ಯವಸ್ಥೆಯಲ್ಲಿ ಒಂದು ಕಾಮಗಾರಿಗಳಾದ ಉದ್ಯಾನವನ ಅಭಿವೃದ್ಧಿ,ರಸ್ತೆ ಡಾಂಬರೀಕರಣ,ಮಳೆನೀರು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಸೇಫ್ಟಿ ರೋಡ್ ಸೇಫ್ಟಿ ಕಾನ್ಸ್ಟಿಟ್ಯುಎನ್ಸಿಯಾ ದೃಷ್ಟಿಯಲ್ಲಿ ರಸ್ತೆಗಳ ಅಭಿವೃದ್ಧಿಗಳು ಅದರಲ್ಲೂ ವಿಶೇಷವಾಗಿ ಒಳಚರಂಡಿ ಸಮಸ್ಯೆ ಇರುವಂತ ವಿವೇಕಾನಂದರ ಭಾಗದಲ್ಲಿ ಮುಂದಿನ 50 ವರ್ಷಗಳ ಕಾಲ ಯಾವುದೇ ಸಮಸ್ಯೆಬಾರದಂತ ವಿಚಾರವನ್ನು ತೆಗೆದುಕೊಂಡು ಎಸ್.ಡಿ.ಪಿ ಸಿಸ್ಟಮ್ ಅಡಿಯಲ್ಲಿ 5 ಕ್ರಾಸ್ ಗಳಲ್ಲಿ ನೂತನವಾಗಿ ಒಳಚರಂಡಿ ಪೈಪ್ ಲೈನ್ ಅಳವಡಿಸಲಾಗಿದೆ. ಈಕಾಮಗಾರಿಯು ನಗರಪಾಲಿಕೆ ವ್ಯಾಪ್ತಿಯಲ್ಲಿ ಮೊದಲಬಾರಿಗೆ ನಾವು ಪ್ರಾರಂಭ ಮಾಡುವುದು ಅದರ ಜೊತೆಯಲ್ಲೇ ಇಂದು ಆ ಕಾಮಗಾರಿ ಆಗಿರುವ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆಯನ್ನು ಕಾರ್ಯವನ್ನು ನೆರವೇರಿಸಲಾಯಿತು. ಅದೇ ರೀತಿನಲ್ಲಿ ಪೂಜ್ಯ ಮಹಾಪೌರರ ವೀವೇಕನಂದಾನಗರ ಒಟ್ಟು 8 ಕ್ರಾಸ್ ಗಳಿಗೂ ಮರುಡಾಂಬರೀಕರಣ ಕಾಮಗಾರಿಗೆ 90 ಲಕ್ಷ ರೂಪಾಯಿಗಳ ಅನುದಾನದಲ್ಲಿ ಪ್ರಾರಂಭ ಮಾಡಲಾಯಿತು. ಶ್ರೀರಾಂಪುರ ಭಾಗದ 65ನೇ ವಾರ್ಡಿನಲ್ಲಿ 50 ಲಕ್ಷ ರೂಪಾಯಿಗಳಲ್ಲಿ ಅನುದಾನದಲ್ಲಿ ದೇವಯ್ಯನಹುಂಡಿ ಸ್ಮಶಾನದ ರಸ್ತೆಗಳನ್ನು ಡಾಂಬರೀಕರಣ ಮತ್ತು ಬೆಮಲ್ ಗಣಪತಿ ಉದ್ಯಾನವನದ ಅಭಿವೃದ್ಧಿಯ ದೃಷ್ಟಿಯಿಂದ ನರೇಗಾದಲ್ಲಿ 1 ಕೋಟಿ 6 ಲಕ್ಷ ರೂಪಾಯಿಗಳ ಕಾಮಗಾರಿಗೆ ಭೂಮಿಪೂಜೆ ನೇರವೇರಿಸುವ ಮೂಲಕ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು. ವಿಶೇಷವಾಗಿ ಉದ್ಯಾನವನಗಳ ನೋಡಿಕೊಳ್ಳಲು ಕ್ಷೇತ್ರದಲ್ಲಿ ಬರುವ ಎಲ್ಲಾ ಉದ್ಯಾನವನಗಳಿಗೂ 7 ಜನರ ಅಭಿವೃದ್ಧಿ ಸಮಿತಿಯನ್ನು(ಕಮಿಟಿ)ಮಾಡಲು ಈಗಾಗಲೇ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ ಮತ್ತು ಪಾರ್ಕ್ ಗಳ ಮೆಂಟೆನೆನ್ಸ್ ಗಳನ್ನು ಖಾಸಗಿಯವರು ಸಂಸ್ಥೆಗಳು ಅವರ ಸಿಎಸ್ಆರ್ ಮತ್ತು ಬೇರೆ-ಬೇರೆ ಸೇವಾಕ್ಷೇತ್ರದಲ್ಲಿರುವಂತರು ನಿಧಿ (ಫಂಡ್) ನೀಡಬೇಕೆಂಬ ದೃಷ್ಟಿಯಲ್ಲಿ ಕೂಡ ನಿರ್ಣಯ ಕೈಗೊಂಡಿದೆ ನಮ್ಮಲ್ಲಿರುವ 120 ಉದ್ಯಾನವನಗಳನ್ನು ಅಭಿವೃದ್ಧಿಯನ್ನು ಕೂಡ ನವಂಬರ್ ತಿಂಗಳ ಒಳಗಡೆ ಬಹುತೇಕ ಪೂರ್ಣ ಆಗುವಂತ ಎಲ್ಲಾ ವ್ಯವಸ್ಥೆಗಳು ಜೋಡಿಸಲಾಗಿರುತ್ತದೆ.
ಈ ಸಂದರ್ಭದಲ್ಲಿ ಪೂಜ್ಯ ಮಹಾಪೌರರಾದ ಸುನಂದ ಪಾಲನೇತ್ರರವರು ಸ್ಥಳೀಯ ನಗರಪಾಲಿಕೆ ಸದಸ್ಯರುಗಳಾದ ಗೀತಾಶ್ರೀ ಯೋಗಾನಂದರವರು, ಚಂಪಕರವರು ಹಾಗೂ ಮುಖಂಡರುಗಳಾದ ಗಿರೀಶ್, ಪ್ರಸಾದ್ ಬಾಬು, ಪ್ರಸಾದ್ ಪಚ್ಚು, ಸತೀಶ್, ಜಯಂತಿ, ರೂಪ, ರವೀಂದ್ರ,ಕೃಷ್ಣ,ಸಾಗರ್, ಗೋಪಾಲ್, ಸಂಪತ್, ಶ್ರೀಧರ್, ಗೀತಾ, ಪ್ರಫುಲ್ಲಾ, ವಿಜಯಲಕ್ಷ್ಮಿ, ಉಮಾಕಾಂತ್, ರೋಹೀತ್, ಗಿರೀಶ್,ಶಿವರಾಜ್,ಅನಿಲ್ ಮತ್ತು ನಿವಾಸಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆ ಮುಖಂಡರು ಹಾಜರಿದ್ದರು.


Share