MP ಟಾಕ್- ಕಾರಣ V/S ರಾಜಕಾರಣ – ವೀಕ್ಷಿಸಿ

1836
Share

 

MP-ಟಾಕ್ ಕಾರ್ಯಕ್ರಮದಲ್ಲಿ ಶ್ರೀಮತಿ ಭಾನು ಮೋಹನ್ ಮತ್ತು ನಿವೃತ್ತ ಅಧಿಕಾರಿ ನಟರಾಜ್ ಪರಿಸರದ ಬಗ್ಗೆ ಚರ್ಚಿಸಿದ್ದಾರೆ

ಮೈಸೂರು : ಮೈಸೂರು ನಗರದಲ್ಲಿ ಇತ್ತಿಚೆಗೆ ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದೆ , ಒಂದು ಕಡೆ ರಸ್ತೆ ಅಭಿವೃದ್ಧಿ ನೆಪದಲ್ಲಿ ಸಾಲು  ಸಾಲು ಮರಗಳ ಹನನ , ಇನ್ನೊಂದು ಕಡೆ ಉದ್ಯಾನವನದಲ್ಲಿ ಹಸಿರು ನಾಶ ಮಾಡಿ ಕಾಂಕ್ರಿಟ್ ಮಯ ಮಾಡಲು ಹೊರಟಿದ್ದಾರೆ ಯಾರಿಗೂ ಪರಿಸರದ ಬಗ್ಗೆ ಕಾಳಜಿ ಇಲ್ಲ , ಮತ್ತು ಕಾನೂನಿನ ಅರಿವು ಇಲ್ಲ , ಇದ್ದರೂ ಕಾನೂನಿನ ನಿಯಮವನ್ನ ಉಲ್ಲಂಘಸಿ ಕಾಮಗಾರಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀವು ಮಾಡುತ್ತಿರುವ ಕಾಮಗಾರಿ ತಪ್ಪು ನಿಲ್ಲಿಸಿ , ಇಲ್ಲವಾದರೆ ನಾವು ನ್ಯಾಯಲಕ್ಕೆ ದಾವೆ ಸಲ್ಲಿಸುತ್ತವೆ ಎಂದರೆ ಅದಕ್ಕೂ ಸಿದ್ಧ ಎಂದು ಬೇಜವಬ್ದಾರಿ ಉತ್ತರ ನೀಡುತ್ತಾರೆ , ಹಾಗಾಗಿ ಪರಿಸರದ ಅರಿವು ಇಲ್ಲದ ಅಧಿಕಾರಿಗಳು ಕೂಡಲೆ ಈ ಕಾಮಗಾರಿಗಳನ್ನು ನಿಲ್ಲಿಸದಿದ್ದರೆ ನಾವು ನ್ಯಾಯಲಯದಲ್ಲಿ ದಾವೆ ಹೂಡುತ್ತವೆ . ಉದ್ಯಾನವನದಲ್ಲಿ 5 ಎಕರೆ ಮೇಲ್ಪಟ್ಟು ಇದ್ದರೆ 5 % , ಅಂದರೆ 10 X 10 ಪರಿಸರಕ್ಕೆ ಸಂಬಂಧಪಟ್ಟ ಕಾಮಾಗಾರಿ ಮಾಡಬೇಕು , ಅದರೆ ಇವರುಗಳು 5 % ಅನನ್ನ ತೋರಿಸಿ ಗ್ರಂಥಲಾಯ , ವಿಶ್ರಂತಿಯ ತಾಣ , ಯೋಗ ಮಂದಿರ , ಗೆಜಬ್ ವೇದಿಕೆ ಹೀಗೆ ಹಲವಾರು ಕಾಮಾಗಾರಿಗಳನ್ನ ಮಾಡುತ್ತಿದ್ದಾರೆ , ಇದನ್ನು ನಿಲ್ಲಿಸಬೇಕು , ಉದ್ಯಾನವನ ಯಥಾಸ್ಥಿತಿ ಕಾಪಾಡಬೇಕು , ಮರಗಳ ನಿರ್ವಹಣೆ ಸಸಿಗಳನ್ನು ನೆಟ್ಟು ಕಾಪಾಡಬೇಕು ಇದನ್ನ ಬಿಟ್ಟು , 16 ಉದ್ಯಾನವನದಲ್ಲಿ 24 ಕೋಟಿ ಖರ್ಚು ಮಾಡಿ ಹೈಟೆಕ್ ಉದ್ಯಾನವನ ಕಾಮಾಗಾರಿ ಮಾಡುತ್ತಿರುವುದು ಪರಿಸರವಾದಿಗಳು ವಿರೋಧಿಸುತ್ತಿವೆ , KR ಶಾಸಕರು ಈ ಕಾಮಗಾರಿಯನ್ನು ಯಾವುದಾದರೂ CA ನಿವೇಶನದಲ್ಲಿ ಮಾಡಲ್ಲಿ ನಮ್ಮ ಅಭ್ಯಂತರವಿಲ್ಲ , ಅದನ್ನು ಬಿಟ್ಟು ಉದ್ಯಾನ ವನದಲ್ಲಿ ಕಾಮಗಾರಿ ಮಾಡಿದರೆ ನಾವುಗಳು ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ , ಮತ್ತೆ ನ್ಯಾಯಲಯದಲ್ಲಿ ದಾವೆ ಹೂಡುತ್ತೇವೆ , ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು , ನೀವುಗಳು ಇದಕೆ ಅದ ನಷ್ಟವನು ತಾವುಗಳು ಭರಿಸಬೇಕಾಗುತ್ತದೆ , ಸಾರ್ವಜನಿಕರ ಹಣ ತಮ್ಮ ಇಷ್ಟದಂತೆ ಎಲ್ಲೊ ಸುರಿಯುವುದಲ್ಲ , ಪರಿಸರದ ಕಾಳಜಿವಹಿಸಬೇಕು , ಪಕ್ಷಿಗಳಿಗೆ ಬದುಕಲು ಬಿಡಬೇಕು , ಸಾರ್ವಜನಿಕರಿಗೆ ಒಳ್ಳೆಯ ವಾತಾವರಣ ನೀಡಬೇಕು , ಮತ್ತೆ ಉದ್ಯಾನವನದಲ್ಲಿ ಯಾವುದೇ ವ್ಯಕ್ತಿಯ ಪ್ರತಿಮೆ ಇಡುವಂತಿಲ್ಲ ಸರ್ವೋಚ ನ್ಯಾಯಲಯದ ಅದೇಶವಿದೆ , ಅದರೂ ನಿರ್ಮಿಸುತ್ತಾರೆ , ಇದನ್ನು ನಿಲ್ಲಿಸಬೇಕು ಎಂದು ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಭಾನ ಮೋಹನ್ ಅವರು ನಮ್ಮ ಎಂಪಿಟಾಕ್ ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ತಿಳಿಸಿದರು


Share