MP-ಟಾಕ್ ಜವಾಬ್ದಾರಿ- ಜಾಗೃತಿ

923
Share

 

 

ಮೈಸೂರು ಪತ್ರಿಕೆಯ ಎಲ್ಲಾ ವೀಕ್ಷಕರಿಗೂ ಓದುಗರಿಗೂ ಜಾಹೀರಾತುದಾರರಿಗೂ ಸಂಕ್ರಾಂತಿಯ ಶುಭಾಶಯಗಳೊಂದಿಗೆ ಇಂದಿನ ಎಂಪಿ ಟಾಕ್ ಜವಾಬ್ದಾರಿ -ಜಾಗೃತಿ ಎಂಬ ವಿಷಯದ ಮೇಲೆ ಬೆಳಕನ್ನು ಚೆಲ್ಲಲು ಹೊರಟಿದೆ.
ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ನಿಬಂಧನೆಗಳನ್ನು ನಮ್ಮ ಮೇಲೆ ಹೇರಿದೆಯಾದರೂ ಇದನ್ನು ನಾವು ಅರಿತು ಜವಾಬ್ದಾರಿಯಿಂದ ಮತ್ತಷ್ಟು ಜಾಗರೂಕರಾಗಬೇಕಾಗಿದೆ.
ಕರೋನ ನಾಗಾಲೋಟದಲ್ಲಿ ಓಡುತ್ತಿದ್ದ ರೂ ಹೆಚ್ಚಿನ ಜನರಲ್ಲಿ ಸೋಂಕು ಕಂಡು ಬರುತ್ತಿದ್ದರೂ ಆತಂಕ ಪಡುವಂತಹ ಪರಿಸ್ಥಿತಿ ಉದ್ಭವಿಸಿಲ್ಲ. ಇದು ಸ್ವಲ್ಪ ಮಟ್ಟಿಗೆ ಜನರಲ್ಲಿ ಉಂಟಾಗಿರುವ ಜಾಗೃತಿ ಎಂದೇ ಹೇಳಬಹುದು. ಜನರು ಮತ್ತಷ್ಟು ಮಗದಷ್ಟು ಜಾಗೃತರಾದರೆ ದೃಢ ಸಂಕಲ್ಪದಿಂದ ಈಗಿನ ಪರಿಸ್ಥಿತಿಯನ್ನು ಎದರಿಸಬಹುದು ಎಂಬುದೇ ಇಂದಿನ ಎಂಪಿ ಟಾಕ್ ನ ವಿಶೇಷ.
#ಸಂಕ್ರಾಂತಿಯು_ಉತ್ತರಾಯಣ_ಪುಣ್ಯಕಾಲ_ಹೇಗೆ?#ಜನವರಿ_15ರಂದು_ವಿಶೇಷತೆಗಳೇನು??*
ಸಂಕ್ರಾಂತಿಯು ಸೂರ್ಯಾರಾಧನೆಯ ಹಬ್ಬವಾಗಿದೆ. ಸೂರ್ಯದೇವರು ವಿಶ್ವದ ಆತ್ಮ,ಜಗತ್ತಿನ ಕಣ್ಣು ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ. ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು.
ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು.
ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.
ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲಾಗುತ್ತದೆ.
ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನ ಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಲಾಗುವುದು.
ಕರ್ನಾಟಕದಲ್ಲಿ ಎಳ್ಳು, ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯವಿದೆ.
ಈ ಹಬ್ಬದ ಒಂದು ವಿಶೇಷವೆಂದರೆ ದನಕರುಗಳಿಗೆ ಮೈ ತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು(ಕಿಡಿ ದಾಟಿಸುವುದು) ನೆಗೆದು ದಾಟಿಸುವುದು ಉಂಟು.
#ಉತ್ತರಾಯಣ_ಪುಣ್ಯ_ಕಾಲ*
ದಕ್ಷಿಣಾಯನ ಪ್ರಾರಂಭದಂದು ನಿದ್ರೆಗೆ ಜಾರುವ ಶ್ರೀಮನ್ನಾರಾಯಣರು ಉತ್ತರಾಯಣದಲ್ಲಿ ಎಚ್ಚರಗೊಳ್ಳುವರು ಎಂಬ ಪ್ರತೀತಿ ಇದೆ. ಈ ಬಾರಿ ಪೌಷ್ಯ ಮಾಸದಲ್ಲಿ ಬರುವ ಅಂದರೆ ಜನವರಿ 15ರಂದು ಮಕರ ಸಂಕ್ರಾಂತಿ ಯನ್ನು ಉತ್ತರಾಯಣ ಪುಣ್ಯ ಕಾಲವೆಂದು ಕರೆಯುತ್ತಾರೆ.
ಕೇವಲ ಬದುಕುವುದಕ್ಕೆ ಮಾತ್ರವಲ್ಲ ಕೈವಲ್ಯವನ್ನು ಪಡೆಯಲು ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮಪಿತಾಮಹಾರು ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು.
ಉತ್ತರಾಯಣ, ದೇವತೆಗಳ ಕಾಲವಾದರೆ ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡುವುದಲ್ಲದೆ ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಸೂರ್ಯನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.


Share