MP ಟಾಕ್ : ‘ ಮತ್ತೆ ಮುಖ್ಯಮಂತ್ರಿ ‘ – ರಂಜನೆ ಮತ್ತು ಮನೋಚಿಂತನೆ

404
Share

 

 

ಮತ್ತೆ ಮುಖ್ಯಮಂತ್ರಿ-ಇದೊಂದು ರಾಜಕೀಯ ಆತ್ಮಾವಲೋಕನದ ನಾಟಕ . … ಮತ್ತೆ ಮುಖ್ಯಮಂತ್ರಿ ಹೊಸ ನಾಟಕ ಪ್ರಪ್ರಥಮ ಪ್ರದರ್ಶನ ಮೈಸೂರಿನಿಂದ ಆರಂಭವಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಅವರು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಕಳೆದ ರಾಜಕೀಯ ವ್ಯವಸ್ಥೆಯನ್ನು ಇದೊಂದು ರಾಜಕೀಯ ಆತ್ಮಾವಲೋಕನದ 75 ವರ್ಷಗಳಿಂದ ನಡೆದು ಬರುತ್ತಿರುವ ಅರ್ಥಮಾಡಿಕೊಳ್ಳಲು ನಡೆಸಿರುವ ಪ್ರಯತ್ನವಿದು . ಕನ್ನಡ ಭಾಷೆಯಲ್ಲಿ ರಾಜಕೀಯ ವಸ್ತುವನ್ನು ನಾಟಕವಾಗಿಸಿರುವ ಹಲವು ಯಶಸ್ವಿ ಉದಾಹರಣೆಗಳು ಇವೆ . ಕಲಾಗಂಗೋತ್ರಿ ನಲ್ವತ್ತು ವರ್ಷಗಳಿಂದ ಪ್ರದರ್ಶಿಸುತ್ತಿರುವ ಮುಖ್ಯಮಂತ್ರಿ ನಾಟಕ ಇಂದಿಗೂ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದೆ . ಈಗ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿವೆ . ಕಳೆದ ಏಳು ದಶಕಗಳಲ್ಲಿ ನಮ್ಮದೇಶ ಒಂದು ಪರಿಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಪರಿವರ್ತನೆಯಾಗಬೇಕಿತ್ತು ಎನ್ನುವ ಅಪೇಕ್ಷೆ ಇನ್ನೂ ನಿಜಗೊಂಡಿಲ್ಲ . ಪ್ರಪಂಚದಲ್ಲಿಯೇ ಅತ್ಯಂತ ಸಮಗ್ರವಾದ ಸಂವಿಧಾನವನ್ನು ನಾವು ಅಳವಡಿಸಿಕೊಂಡಿದ್ದರೂ ಶತಮಾನಗಳಿಂದ ನಮ್ಮನ್ನು ಕಾಡಿಸುತ್ತಿರುವ ಸಾಮಾಜಿಕ ಧಾರ್ಮಿಕ ಹಾಗೂ ಆರ್ಥಿಕ ಸಮಸ್ಯೆಗಳಿಂದ ನಾವು ಮುಕ್ತರಾಗಿಲ್ಲ . ನಮ್ಮ ಆಶಯಗಳಲ್ಲಿ ದೋಷವಿಲ್ಲ ಆದರೆ ನಮ್ಮ ಆಚರಣೆಗಳು ಮಾತ್ರ ತರತಮಗಳನ್ನು ಬಿತ್ತಿ ಬೆಳೆಯುತ್ತವೆ . ಇದಕ್ಕೆ ಕಾರಣವೇನು ಎಂಬ ವಿಷಯ ನಮ್ಮನ್ನು ನಿರಂತರವಾಗಿ ಕಾಡುತ್ತಿದೆ . ರಾಜಕಾರಣ ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿದೆ ಎಂಬ ಆರೋಪ ನಿತ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ . ರಾಜಧರ್ಮವನ್ನು ಪಾಅಸುವ , ಸತ್‌ಚಾರಿತ್ಯವುಳ್ಳ , ಸಹಿಷ್ಣುವಾದ ನಾಯಕನ / ಳ ಆಗಮನದಿಂದ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ . ದೇಶದ ಸಾಮಾನ್ಯ ಪ್ರಜೆಗಳ ಜೀವನದಲ್ಲ ಪ್ರಗತಿಕಾಣುತ್ತದೆ ಎನ್ನುವ ಭರವಸೆಯಂತೂ ಇನ್ನೂ ಜೀವಂತವಿದೆ . ಈ ಹಿನ್ನೆಲೆಯಲ್ಲಿ ಒಂದು ವೇಳೆ ನಾವು ಕಾಣ ಬಯಸುವ ಒಬ್ಬ ಉದಾತ್ತ ನಾಯಕ ನಮ್ಮ ಮುಖ್ಯಂತ್ರಿಯಾಗಿದ್ದರೆ ? ಎನ್ನುವ ಕಲ್ಪನೆಯ ಕಥಾನಕವೇ ಮತ್ತೆ ಮುಖ್ಯಮಂತ್ರಿ . ನಾಟಕ , ಭ್ರಷ್ಟಾಚಾರ , ಸ್ವಾರ್ಥ , ಹಗೆತನಗಳಿಂದ ತುಂಬಿಕೊಂಡಿರುವ ರಾಜಕೀಯ ವರ್ತಮಾನದಲ್ಲಿ ಪ್ರಜೆ – ಪಜಾಪ್ರತಿನಿಧಿ – ಪ್ರಭುತ್ವಗಳಲ್ಲಿ ಸ್ವಲ್ಪ ಮಟ್ಟಿಗಿನ ಪಾಪಪ್ರಜ್ಞೆಯನ್ನು ಜಾಗೃತಗೊಳಿಸುವ ಆಶಯದಿಂದ ಈ ನಾಟಕವನ್ನು ರೂಪಿಸಿಲಾಗಿದೆ . ಕನ್ನಡ ಪ್ರೇಕ್ಷಕರನ್ನು ಮನರಂಜಿಸುತ್ತಲೇ ಮನೋಚಿಂತನೆಗೆ ಹಚ್ಚುವ ಪ್ರಯತ್ನ ಇದಾಗಿದೆ .
……..ವಿನ್ಯಾಸ – ನಿರ್ದೇಶನ : ಡಾ . ಬಿ.ವಿ. ರಾಜಾರಾಂ 50 ವರ್ಷಗಳ ರಂಗಾನುಭವ , 200 ಕ್ಕೂ ಹೆಚ್ಚಿನ ನಿರ್ದೇಶಕ , ಸಂಘಟಕ ನಾಟಕಗಳ ನಟ , ಮತ್ತು ರಂಗತಂತ್ರಜ್ಞ , ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ . ಚಲನಚಿತ್ರ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ನಟನೆ . ಖ್ಯಾತ ಅಜಿತನ ಸಾಹಸಗಳು ಧಾರಾವಾಹಿಯ ಅಜಿತ್ . ಸಂಘಟನೆ : ಕರ್ನಾಟಕದ ಪ್ರಮುಖ ಹವ್ಯಾಸಿ ತಂಡ ಕಲಾಗಂಗೋತ್ರಿಯ ಸ್ಥಾಪಕ ಅಧ್ಯಕ್ಷ ಮತ್ತು ಸಂಚಾಲಕ , ಸ್ಥಾಪನೆ 1971. 50 ವರ್ಷಗಳ ನಿರಂತರ ರಂಗಚಟುವಟಿಕೆ . ನಿರ್ದೇಶನ : ಪ್ರಮುಖ ನಾಟಕಗಳು ಅಚಲಾಯತನ , ಮುಖ್ಯಮಂತ್ರಿ -775 ಪ್ರದರ್ಶನಗಳು , ಮೂಕಜ್ಜಿಯ ಕನಸುಗಳು -75 ಕ್ಕೂ ಹೆಚ್ಚು ಪ್ರದರ್ಶನಗಳು , ಮೈಸೂರು ಮಲ್ಲಿಗೆ -300 ಕ್ಕೂ ಹೆಚ್ಚು ಪ್ರದರ್ಶನಗಳು , ಮಂದ್ರ -80 ಕ್ಕೂ ಹೆಚ್ಚು ಪ್ರದರ್ಶನಗಳು , ಕುವೆಂಪು ನಾಟಕಗಳು , ಕೈಲಾಸಂ ನಾಟಕಗಳು , ಶ್ರೀರಂಗರ ನಾಟಕಗಳು , ಸಂಸರ ನಾಟಕಗಳು , ಡಾ . ಶಿವರಾಮ ಕಾರಂತರ ನಾಟಕಗಳು , ಸಂಸ್ಕೃತ ನಾಟಕಗಳು , ಡಾ . ಚಂದ್ರಶೇಖರ ಕಂಬಾರ , ಡಾ . ಗಿರೀಶ್ ಕಾರ್ನಾಡ್ , ಪಿ . ಲಂಕೇಶ್ , ಡಾ . ಹೆಚ್.ಎಸ್ . ವೆಂಕಟೇಶಮೂರ್ತಿ , ಡಾ . ಹೆಚ್.ಎಸ್ . ಶಿವಪ್ರಕಾಶ್ , ಪರ್ವತವಾಣಿ , ಪ್ರೊ . ಬಿ . ಚಂದ್ರಶೇಖರ , ಪ್ರಸನ್ನ , ಜಡಭರತ ಮುಂತಾದವರ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ . ಮೈಸೂರು ವಿಶ್ವವಿದ್ಯಾಲಯದ ಡಾ . ಗುಬ್ಬಿ ವೀರಣ್ಣ ಪೀಠದ ಅಧ್ಯಕ್ಷರಾಗಿದ್ದರು . ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರು , ರಂಗಾಯಣ , ಮೈಸೂರು ಮಾಜಿ ನಿರ್ದೆಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ . ಹಾಗೂ


Share