ಅಂತಾರಾಜ್ಯ ಗಡಿಯಿಂದ 12025 ವಲಸಿಗ ಕಾರ್ಮಿಕರ ಆಗಮನ

ಅಂತರ ರಾಜ್ಯ ಗಡಿಯಿಂದ 12025 ವಲಸಿಗ ಕಾರ್ಮಿಕರ ಆಗಮನ
-ಶರತ್ ಬಿ.

ಕಲಬುರಗಿ.ಮೇ-14(ಕ.ವಾ): ಕೊರೋನಾ ಲಾಕ್ ಡೌನ್ 3.0 ಸಡಿಲಿಕೆ ಹಿನ್ನೆಲೆಯಲ್ಲಿ ಮೇ-13ರ ಸಂಜೆ ವರೆಗೆ ಬೇರೆ ರಾಜ್ಯದಲ್ಲಿ ಸಿಲುಕಿದ ಜಿಲ್ಲೆಯ 12025 ಜನ ವಲಸಿಗ ಕಾರ್ಮಿಕರು ಜಿಲ್ಲೆಯ ಅಂತರ ರಾಜ್ಯ ಗಡಿಗಳಿಂದ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಖಜೂರಿ, ಹೀರೊಳ್ಳಿ, ಕಿಣ್ಣಿಸಡಕ್, ಬಳ್ಳೂರಗಿ, ಮಿರಿಯಾಣ ಹಾಗೂ ರಿಬ್ಬನಪಲ್ಲಿ ಗಡಿಗಳ ಮೂಲಕ ಈ ವಲಸಿಗರು ಆಗಮಿಸಿದ್ದು, ಇವರೆಲ್ಲರಿಗೂ ಗಡಿಯಲ್ಲಿಯೆ ಆರೋಗ್ಯ ತಪಾಸಣೆ ಮಾಡಿ ವಲಸಿಗರ ಊರು ಸಮೀಪದಲ್ಲಿಯೆ ಸರ್ಕಾರಿ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಕಳೆದ ಮೇ-11ರ ರಾತ್ರಿ ಮುಂಬೈನಿಂದ ಶ್ರಮಿಕ್ ರೈಲಿನ ಮೂಲಕ 1181 ಜನ ವಲಸಿಗ ಕಾರ್ಮಿಕರು ಆಗಮಿಸಿದ್ದು, ಇದರಲ್ಲಿ ಯಾದಗಿರಿ ಇಲ್ಲೆಯ 242 ಮತ್ತು ವಿಯಪುರ ಇಲ್ಲೆಯ 22 ವಲಸಿಗರು ಸೇರಿದ್ದಾರೆ. ಹೊರ ಜಿಲ್ಲೆಯವರಿಗೆ ಆರೋಗ್ಯ ತಪಾಸಣೆ ಮಾಡಿ ಬಸ್ ಮೂಲಕ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಡಿ.ಸಿ. ಶರತ್ ಬಿ. ಹೇಳಿದರು.

ಜಿಲ್ಲೆಯಲ್ಲಿ ಇದೂವರೆಗೆ 36900 ವಲಸೆ ಕಾರ್ಮಿಕ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಆಹಾರಧಾನ್ಯಗಳ ಕಿಟ್ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

45 ಜನ ಗುಣಮುಖ: ಜಿಲ್ಲೆಯಲ್ಲಿ ಇದೂವರೆಗೆ ಪತ್ತೆಯಾದ 81 ಕೊರೋನಾ ಸೋಂಕು ಪ್ರಕರಣದಲ್ಲಿ 45 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

9 ಕ್ವಾರಂಟೈನ್ ಸೆಂಟರ್: ಕಲಬುರಗಿ ನಗರದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಮತ್ತು ಎರಡನೇ ಸಂಪರ್ಕದಲ್ಲಿ ಬಂದಿರುವವರನ್ನು ಸರ್ಕಾರಿ ಕ್ವಾರಂಟೈನ್ ಮಾಡಲು 9 ಕ್ವಾರಂಟೈನ್ ಸೆಂಟರ್ ತೆರೆಯಲಾಗಿದ್ದು, ಪ್ರಸ್ತುತ 296 ಜನ ಇಲ್ಲಿದ್ದಾರೆ. ಇವರಿಗೆಲ್ಲ ಊಟ ಸೇರಿದಂತೆ ಸಾಮಾನ್ಯ ಮೂಲಭೂತ ಸೌಲಭ್ಯಗಳು ಕಲ್ಪಿಸಲಾಗಿದೆ. ಶೀಘ್ರದಲ್ಲಿಯೆ ಈ ಸೆಂಟರ್‍ನಲ್ಲಿ ಮನೋರಂಜನೆಗೆ ಟಿ.ವಿ. ಅಳವಡಿಸಲಾಗುವುದು ಎಂದರು.

23 ಫೀವರ್ ಕ್ಲಿನಿಕ್: ನೆಗಡಿ, ಕೆಮ್ಮು, ಶೀತ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಗಿ ಸಾರ್ವಜನಿಕರು ತಪಾಸಣೆ ಮಾಡಿಕೊಳ್ಳಲು ಕಲಬುರಗಿ ಜಿಲ್ಲೆಯಲ್ಲಿ 23 ಫೀವರ್ ಕ್ಲೀನಿಕ್ ಸ್ಥಾಪಿಸಲಾಗಿದೆ.

ಗುರುವಾರ ರಾತ್ರಿ ಮತ್ತೊಂದು ರೈಲು ನಗರಕ್ಕೆ: ಗುರುವಾರ (ಮೇ-14) ರಾತ್ರಿ ಮುಂಬೈನಿಂದ ಮತ್ತೊಂದು ಶ್ರಮಿಕ್ ಎಕ್ಸ್‍ಪ್ರೆಸ್ ರೈಲು ಸುಮಾರು 1200 ಜನ ವಲಸಿಗರನ್ನು ಹೊತ್ತಿಕೊಂಡು ಕಲಬುರಗಿ ನಗರಕ್ಕೆ ಬರುತ್ತಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.

144 ನಿಷೇಧಾಜ್ಞೆ ಮುಂದುವರಿಕೆ: ಕೊರೋನಾ ನಿಯಂತ್ರಣಕ್ಕಾಗಿ ಪ್ರಸ್ತುತ ಜಿಲ್ಲೆಯಲ್ಲಿ ಆರಿಯ್ಲಲಿರುವ 144 ನಿಷೇಧಾಜ್ಞೆಯು ಮೇ-17ರ ವರೆಗೆ ಮುಂದುವರೆಯಲಿದೆ. ತದನಂತರವು ಮುಂದುವರೆಸುವ ಚಿಂತನೆಯಿದ್ದು, ಈ ಬಗ್ಗೆ 3.0 ಲಾಕ್ ಡೌನ್ ಮುಗಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು.
ಸ್ಯಾಂಪಲ್ಸ್ ಪಡೆದವರ ಕೈಗೆ ಸೀಲ್: ಕೋವಿಡ್-19 ಪರೀಕ್ಷೆಗೆ ಸ್ಯಾಂಪಲ್ಸ್ ನೀಡಿದವರಿಗೆ ಮುಂದಿನ ದಿನದಲ್ಲಿ ಕೈಗೆ ಸೀಲ್ ಹಾಕಲಾಗುವುದು.

ಸಿ.ಎಂ.ಪರಿಹಾರ ನಿಧಿಗೆ 2.19 ಕೋಟಿ ರೂ.: ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2,19,76000 ರೂ. ಮತ್ತು ಪಿ.ಎಂ.ಕೇರ್ ನಿಧಿಗೆ 8.76 ಲಕ್ಷ ರೂ. ದೇಣಿಗೆ ನೀಡಲಾಗಿರುತ್ತದೆ.

46.9 ಕೋಟಿ ರೂ. ರೈತರ ಖಾತೆಗೆ: ಲಾಕ್ ಡೌನ್‍ನಿಂದ ಸಂಕಷ್ಟದಲ್ಲಿರುವ ಜಿಲ್ಲೆಯ 236630 ರೈತರಿಗೆ 46.96 ಕೋಟಿ ರೂ. ಪರಿಹಾರವಾಗಿ ಖಾತೆಗೆ ಮಾ ಮಾಡಲಾಗಿದೆ. ಇದಲ್ಲದೆ ಜನಧನ ಯೋನೆಯಡಿ ಮಹಿಳಾ ಫಲಾನುಭವಿಗಳ 221282 ಬ್ಯಾಂಕ್ ಖಾತೆಗೆ 11.06 ಕೋಟಿ. ರೂ. ಇದೂವರೆಗೆ ಮಾಡಲಾಗಿದೆ ಎಂದರು.
7227 ವಾಹನಗಳು ಜಪ್ತಿ: ಜಿಲ್ಲೆಯಲ್ಲಿ ಸಿ.ಆರ್.ಪಿ.ಸಿ. 144 ನಿಷೇಧಾಜ್ಞೆ ಉಲ್ಲಂಘಿಸಿದಕ್ಕಾಗಿ 119 ಪ್ರಕರಣಗಳು ದಾಖಲಿಸಲಾಗಿದ್ದು, ಅನಗತ್ಯ ಸಂಚಾರ ಮಾಡಿದ 7227 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

21 ಸಕ್ರೀಯ ಕಂಟೇನ್‍ಮೆಂಟ್ ಝೋನ್: ಜಿಲ್ಲೆಯ ಕೊರೋನಾ ಸೋಂಕು ಪ್ರಕರಣಗಳು ಕಂಡುಬಂದ ತಕ್ಷಣ ಆ ಪ್ರದೇಶವನ್ನು ತೀವ್ರ ನಿಗಾ ಇಡಲು ಕಂಟೇನ್‍ಮೆಂಟ್ ಜೋನ್ ಘೋಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ ಗೊಷಿಸಿದ 28ರ ಪೈಕಿ 21 ಮಾತ್ರ ಸಕ್ರೀಯ ಕಂಟೇನ್‍ಮೆಂಟ್ ಝೋನ್ ಇವೆ. ಕಳೆದ 28 ದಿನಗಳಿಂದ ಯಾವುದೇ ಕೊರೋನಾ ಕೇಸ್ ಪತ್ತೆಯಾಗದ ಕಾರಣ ಕಲಬುರಗಿ ನಗರದ ಆದರ್ಶ ನಗರ ಮತ್ತು ಇಸ್ಲಾಮಾಬಾದ ಕಾಲೋನಿ, ಕಲಬುರಗಿ ತಾಲೂಕಿನ ಕವಲಗಾ ಮತ್ತು ಚಿತ್ತಾಪುರ ತಾಲೂಕಿನ ವಾಡಿ ಕಂಟೇನ್‍ಮೆಂಟ್ ಝೋನ್ ಪ್ರದೇಶವನ್ನು ಡಿ-ನೋಟಿಫೈ ಮಾಡಿದ್ದು, ಇವು ಇದೀಗ ಸಾಮಾನ್ಯ ಪ್ರದೇಶಗಳಾಗಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ನಗರ ಪೆÇಲೀಸ್ ಆಯುಕ್ತ ಎನ್. ಸತೀಶ್ ಕುಮಾರ, ಎಸ್.ಪಿ.ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಡಿ.ಸಿ.ಪಿ ಕಿಶೋರ್ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ, ಐ.ಎ.ಎಸ್. ಪೆÇ್ರಬೇಷನರ್ ಅಧಿಕಾರಿ ಡಾ. ಗೋಪಾಲಕೃಷ್ಣ ಬಿ. ಇದ್ದರು.