ಅಂದು ಪ್ಲೇಗ್,ಇ೦ದು ಕೊರೋನಾ ಶ್ರೀಮತಿ ರುಕ್ಮಿಣಮ್ಮ ಅವರಿಂದ ತಿಳಿಯೋಣ.

ಮೇಲುಕೋಟೆ, (ಮಂಡ್ಯ )ಮೇಲುಕೋಟೆ ನಿವಾಸಿಗಳಾದ ವಯೋವೃದ್ಧರಾದ ಶ್ರೀಮತಿ ರುಕ್ಮಿಣಮ್ಮ ರಾಮಶಾಸ್ತ್ರಿ ಅವರು ಪ್ಲೀಗ್, ಬಂದಿದ್ದ ಸಮಯದಲ್ಲಿ ಅವರು ಅನುಭವಿಸಿದ ಮಾತುಗಳನ್ನು ಅವರಿಂದಲೇ ಕೇಳಿ ತಿಳಿಯೋಣ.
ಶ್ರೀಮತಿ,
ರುಕ್ಮಿಣಮ್ಮ ಅವರು ಮೇಲುಕೋಟೆಯ ಮೊದಲ ಮಹಿಳಾ ಪುರಸಭಾ ಅಧ್ಯಕ್ಷರು ಆಗಿದ್ದರು.

ಅಂದು ಪ್ಲೇಗ್ ಇಂದು ಕರೋನ.
ನಾವೆಲ್ಲರೂ ಕೇಳಿರುವಂತೆ ಭಾರತದಲ್ಲಿ 1898 ರಿಂದ 1920 ತನಕ ಪ್ಲೇಗ್ ಕಾಯಿಲೆ ಹಬ್ಬಿಕೊಂಡಿತ್ತು,
ಇಂದು ಕೋವಿಡ್ ಇವೆರಡರಲ್ಲಿಯೂ ಸಾಮ್ಯತೆ ವ್ಯತ್ಯಾಸಗಳೇನು? ಅದು ಸಾಂಕ್ರಾಮಿಕ ರೋಗ ಇದು ಸಾಂಕ್ರಾಮಿಕ ರೋಗ, ಅಂದಿನ ಮೈಸೂರು ಪ್ರಾಂತ್ಯದ ಜನಸಂಖ್ಯೆ 60 ಲಕ್ಷ ಇಂದಿನ ಕರ್ನಾಟಕದ ಜನಸಂಖ್ಯೆ 6.9 ಕೋಟಿ. ಸಾಮ್ಯತೆಯ ಕಡೆ ಸ್ವಲ್ಪ ಗಮನ ಹರಿಸೋಣ
ಅಂದೂ ಕಂಟೈನ್ಮೆಂಟ್ ಝೂನ್ ಇತ್ತು, ಇಂದು ಗೃಹ ಬಂದನ ಆಗಿದೆ, ಅಂದು ಕ್ವಾರಂಟೈನ್ ಮಾಡಿದ್ದರು. ಅಂದು ಪ್ರಯಾಣಕ್ಕೆ ನಿರ್ಬಂಧವಿತ್ತು ಇಂದು ಅದೇ ರೀತಿ ಆಗುತ್ತಿದೆ. ಅಂದು ಪ್ರಯಾಣ ಮಾಡಬೇಕಿದ್ದರೆ ಜನರು ಯೋಗ್ಯತಾ ಪತ್ರವನ್ನು ಹಾಜರುಪಡಿಸಿದ ಮೇಲಷ್ಟೇ ಪ್ರಯಾಣ ಮಾಡಲು ಅವಕಾಶವಿತ್ತು. ಪ್ರಯಾಣ ಮಾಡಿ ಬಂದವರಿಗೆ ರೈಲ್ವೆ ನಿಲ್ದಾಣದಲ್ಲಿ ಬಿಸಿನೀರಿನಿಂದ ಸ್ನಾನ ಮಾಡಿ ನಂತರ ಹೊರ ಹೋಗಲು ಅನುಮತಿ ಇತ್ತು. ಜನಸಂಖ್ಯೆ 59 ಲಕ್ಷ ಮೈಸೂರಿನ ಪ್ರಾಂತಕ್ಕೆ ಇಂದಿನ ಜನಸಂಖ್ಯೆ ಬರೋಬರಿ 6.9 ಕೋಟಿ ಕರ್ನಾಟಕ ರಾಜ್ಯದ್ದು ಅದಕ್ಕೆ ಹತ್ತು ಪಟ್ಟು ಅಧಿಕ.
ಅಂದು ಜನರಿಂದ ಜನಕ್ಕೆ ವಿಷಯ ತಿಳಿಸಲು ಸಾಕಷ್ಟು ಸಮಯ ಬೇಕಿತ್ತು. ಅಂದು ಅನುಕೂಲಗಳು ಬಹಳ ಕಡಿಮೆ ಇತ್ತು, ಸಾಮಾಜಿಕ ಕಟ್ಟುಪಾಡುಗಳು ಬಹಳಷ್ಟು ಇತ್ತು. ಆದರೆ ಇಂದು ಆ ಕ್ಷಣ ಮಾತ್ರದಲ್ಲಿ ಇಡೀ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ಆದರೆ ವಿಪರ್ಯಾಸವೆಂದರೆ ಬಹಳಷ್ಟು ಜನರು ಏನೇ ವಿಷಯ ತಿಳಿದುಕೊಂಡಿದ್ದರು ಅದಕ್ಕೆ ತಕ್ಕಂತೆ ಜಾಗೃತಿ ಹೊಂದುತ್ತಿಲ್ಲ. ಎಚ್ಚರಿಕೆಯಿಂದಿರಲು ತಮಗೆ ಒಬ್ಬರಿಗೆ ಬಿಟ್ಟು ಪ್ರಪಂಚಕ್ಕೆಲ್ಲ ಅನ್ವಯಿಸುತ್ತದೆ ಅನ್ನುವಂತಿದೆ ಜನರ ನಡುವಳಿಕೆ.
ಮೂರು ವಿಷಯದಲ್ಲಿ ಜಾಗೃತಿ ಹೊಂದಿದಲ್ಲಿ ಜನರು ಬಹು ಸುಲಭವಾಗಿ ಕೊರೋನವನ್ನು ಗೆಲ್ಲಬಹುದು. ಅನುಭವದ ಮಾತೊಂದಿದೆ, ಯಾವುದೇ ವ್ಯಕ್ತಿಯಾಗಲಿ, ಯಾವುದೇ ಸಂದರ್ಭದಲ್ಲಾಗಲಿ “ನಾವು ಹೆದರಿಕೊಂಡರೆ ಅದು ನಮ್ಮನ್ನು ಹೆದರಿಸುತ್ತದೆ, ನಾವು ಹೆದರಿಸಿದರೆ ಅದು ಹೆದರಿಕೊಂಡು ಹೋಗುತ್ತದೆ” ಈ ತತ್ವವನ್ನು ಅಳವಡಿಸಿಕೊಂಡು ಸಾಮಾಜಿಕ ಅಂತರವನ್ನು ಪಾಲಿಸುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಈ ಮೂರನ್ನು ಪಾಲಿಸಿದಲ್ಲಿ ಕೊರೋನ ಗೆಲ್ಲುವುದು ಕಷ್ಟದ ಕೆಲಸವಲ್ಲ. ಅಂದು ಅನುಕೂಲತೆ ಮತ್ತು ತಿಳುವಳಿಕೆ ಇರುವ ಜನ ಬಹಳ ಕಡಿಮೆ ಇದ್ದರೆ ಜನಕ್ಕೆ ನಂಬಿಕೆ ಹಾಗೂ ದೃಢತೆ ಇತ್ತು ಇಂದಿನ ಜನರಲ್ಲಿ ಇರುವ ಕೊರತೆ ಇದೇ. ತಮಗೆ ತಿಳುವಳಿಕೆ ಇರುವುದಿಲ್ಲ, ಇರುವವರಲ್ಲಿ ತಿಳಿದುಕೊಳ್ಳುವುದಿಲ್ಲ ವ್ಯವಧಾನವಿಲ್ಲ ನಂಬಿಕೆ ಮೊದಲೇ ಇಲ್ಲ ಎಲ್ಲದರಲ್ಲೂ ಉದಾಸೀನ ಮನೋಭಾವ.
ಅಂದು ಪ್ಲೇಗ್ ಮಹಾಮಾರಿಯನ್ನು ಹೊಡೆದೋಡಿಸಿದ ಪೀಳಿಗೆಯವರು ದೊರಕುವುದು ವಿರಳ. ಅಂದಿನ ಪೀಳಿಗೆಯವರು ಕೆಲವರು, ಇನ್ನು ಕೆಲವರು ತಮ್ಮ ಹಿರಿಯರಿಂದ ತಿಳಿದುಕೊಂಡಿರುವವರೊಂದಿಗೆ ಮೈಸೂರು ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿ ಅವರ ಅನುಭವ ತಿಳುವಳಿಕೆಯ ಮಾತನ್ನು ಹೇಳಿ, ಇಂದಿಗೆ ಬೇಕಾಗಿರುವ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾರೆ. ಅದರಂತೆ ನಡೆಯಲು ಪ್ರಯತ್ನಿಸೋಣ. ಕೊರೋನವನ್ನು ಹಿಮ್ಮೆಟ್ಟಿಸಲು ಸರ್ಕಾರದ ನೀತಿ-ನಿಯಮ, ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಿಲ್ಲ, ಅದಕ್ಕೆ ಜನರ ಸಹಕಾರ ಹತ್ತು ಪಟ್ಟು ಅಧಿಕ ವಾಗಿರಬೇಕು. ಇದರಿಂದ ಲಾಭ-ನಷ್ಟ ಎರಡು ಸರ್ಕಾರಕ್ಕೆ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಕುಟುಂಬಕ್ಕೂ ಅನ್ವಯವಾಗುತ್ತದೆ.
ಸರ್ಕಾರ ಹಾಗೂ ಪ್ರಜೆಗಳು ಒಟ್ಟಾಗಿ ಕೈ ಜೋಡಿಸಿದಲ್ಲಿ ಕೊರೋನವನ್ನು ಆದಷ್ಟು ಬೇಗ ಮೆಟ್ಟಿ ನಿಲ್ಲಬಹುದು.