ಮೈಸೂರು . ಪರಿವಾರ ಮತ್ತು ತಳವಾರ ನಾಯಕ ಸಮಾಜದ ಪರ್ಯಾಯ ಪದವೇ ವಿನಹ ಅಂಬಿಗರ ಸಮಾಜ ಪರ್ಯಾಯ ಪದ ವಲ್ಲ ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ರಾದ ದೇವರಾಜ್ ಕಾಟೂರು ಅವರು ತಿಳಿಸಿದ್ದಾರೆ
ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಉಪಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಕಾರಜೋಳ ಅವರು ಬಿಜಾಪುರದಲ್ಲಿ st ಸೇರ್ಪಡೆಯಾದ ತಳವಾರ ಸಮುದಾಯ ಶೇಕಡ 90ರಷ್ಟು ಅಂಬಿಗರ ಅನುಕೂಲವಾಗಿರುತ್ತದೆ ಅಂಬಿಗರ ತಳವಾರ ಜಾತಿ ಪ್ರಮಾಣ ಪತ್ರ ಪಡೆಯಲು ಕಾನೂನು ವಿರುದ್ಧವಾಗಿ ಹೇಳಿರುವುದನ್ನು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಖಂಡಿಸುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಶನ್ ನೋಡಿ ನಾಯಕ ಸಮಾಜ ಪರಿವಾರ ಮತ್ತು ತಳವಾರ ಸಮುದಾಯದವರು ಯಾವ ಜಿಲ್ಲೆಗಳಲ್ಲಿ ಇದ್ದಾರೆ ಅದನ್ನು ವರದಿಯಲ್ಲಿ ಪರಿಶೀಲಿಸಿ ಅಲ್ಲಿ ಅವರ ಜಾತಿ ಪತ್ರವನ್ನು ನೀಡಲು ಸೂಚಿಸಬೇಕೆಖಕೇ ವಿನಹ ಇತರ ಜಾತಿಯಲ್ಲಿರುವ ತಳವಾರ ಸಮಾಜದವರಿಗೆ ಪ್ರಮಾಣ ಪತ್ರ ನೀಡುವುದನ್ನು ತಡೆದು ನಿಜವಾದ ನಾಯಕ ಪರಿವಾರ ಮತ್ತು ತಳವಾರ ದವರಿಗೆ ಅನ್ಯಾಯವಾಗದಂತೆ ನ್ಯಾಯ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷರಾದ ದೇವರಾಜ್ ಅವರು ಆಗ್ರಹಿಸಿದ್ದಾರೆ.