ಅಂಬೇಡ್ಕರ್” ಅವರ ಬೃಹತ್ ಭಾವಚಿತ್ರವನ್ನು ಬಿಡಿಸುವ ಮೂಲಕ ಸಂವಿಧಾನ ಜಾಗೃತಿ ಜಾಥಾ

55
Share

 

*ಅಂಬೇಡ್ಕರ್” ಅವರ ಬೃಹತ್ ಭಾವಚಿತ್ರವನ್ನು ಬಿಡಿಸುವ ಮೂಲಕ ಸಂವಿಧಾನ ಜಾಗೃತಿ ಜಾಥಾ*

ಮೈಸೂರು ಫೆ.20  ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಇಂದು ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರವನ್ನು ಬಿಡಿಸಿ ಅದರ ಮೇಲೆ ದೀಪಗಳನ್ನು ಇಡಲಾಗುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ
ರಂಗೇಗೌಡ ಅವರು ಚಾಲನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಸುಮಾರು 20ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರು ಭಾವಚಿತ್ರವನ್ನು ಬಿಡಿಸಿದರು. ನಂತರ ಅದರ ಮೇಲೆ ದೀಪಗಳನ್ನು ಇಡುವ ಮೂಲಕ ಸಂವಿಧಾನ ಜಾಗೃತಿ ಮೂಡಿಸಲಾಯಿತು.

ಅರಮನೆ ವೀಕ್ಷಣೆಗೆ ಬಂದಂತಹ ಜನರು ಹಾಗೂ ಸಾರ್ವಜನಿಕರು ಇದನ್ನು ನೋಡಿ ಆನಂದಿಸಿದರು.

ಈ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆಯ ಚಿತ್ರ ಕಲೆ ಶಿಕ್ಷಕರಾದ ಮುರುಳಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Share