ಅಪ್ಪು ನಿಜ ಜೀವನದಲ್ಲೂ ನಾಯಕರಾಗಿದ್ದರು

Share

 

ಅಪ್ಪು ನಿಜ ಜೀವನದಲ್ಲೂ ನಾಯಕರಾಗಿದ್ದರು :

ಪುನೀತ್‌ ರಾಜ್‌ಕುಮಾರ್ ಅವರು ಸಿನಿಮಾ ಪರದೆ ಹಾಗೂ ನಿಜ ಜೀವನದಲ್ಲೂ ನಾಯಕರಾಗಿದ್ದರು ಎಂದು ಕಾಂಗ್ರೆಸ್ ಮುಖಂಡ ಹರೀಶ್ ಗೌಡ ಹೇಳಿದರು.

ನಗರದ ಅರಮನೆ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಜನ್ಮದಿನಾಚರಣೆ ಅಂಗವಾಗಿ ಕರುನಾಡ ಸೇವಕರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ
80 ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು ಆನಂತರ ಅಭಿಮಾನಿಗಳಿಗೆ ಅನ್ನದಾನ ವಿತರಿಸಿ ಮಾತನಾಡಿದವರು

ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುನೀತ್ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ, ಒಂದು ಶಕ್ತಿಯಾಗಿದ್ದರು. ಪ್ರಚಾರಕ್ಕಾಗಿ ಸಮಾಜಸೇವೆ ಮಾಡದೆ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದರು. ಅನೇಕರ ಬಾಳಿಗೆ ದೀಪವಾಗಿದ್ದರು. ಅವರ ಜನ್ಮದಿನದಂದು ಯುವಕರು ಉತ್ಸಾಹದಿಂದ ಸ್ವಯಂ ಪ್ರೇರಿತ ರಕ್ತದಾನ ಮಾಡಿರುವುದು ಶ್ಲಾಘನೆಯ ಎಂದು ಹೇಳಿದರು

ಇದೆ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಗೋಪಿ, ರಮಣಿ, ಮಾಜಿನಗರ ಪಾಲಿಕೆ ಸದಸ್ಯರಾದ ಅಜ್ಜು, ಯುವ ಮುಖಂಡರಾದ ಪ್ರದೀಪ್ ಸಿಂಗ್, , ಯೋಗೇಶ್ ಕರುನಾಡು ಸೇವಕರು ಅಧ್ಯಕ್ಷರಾದ ವಿನಯ್ ಕುಮಾರ್, ಉಪಾಧ್ಯಕ್ಷರು ರಘುವೀರ್ ಗೌಡ, ಸಲ್ಮಾನ್ ಸಲ್ಲು, ಮಂಜುನಾಥ್ ಜಿ, ರಾಕೇಶ್ ಗೌಡ, ಹಾಗೂ ಇನ್ನಿತರರು ಭಾಗಿಯಾಗಿದ್ದರು


Share