ಅಭಿವೃದ್ಧಿ ಘಟಕ ಸ್ಥಾಪನೆ

ಸರಕು ಸಾಗಣೆಯನ್ನು ಹೆಚ್ಚಿಸಲು ಮೈಸೂರು ವಿಭಾಗದಿಂದ ವ್ಯಾಪಾರ ಅಭಿವೃದ್ಧಿ ಘಟಕದ ಸ್ಥಾಪನೆ.

ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲು ಮತ್ತು ವ್ಯಾಪಾರ ಮಾಡಲು ಸುಲಭವಾಗುವಂತೆ, ಮೈಸೂರು ವಿಭಾಗವು ವ್ಯವಹಾರ ಅಭಿವೃದ್ಧಿ ಘಟಕವನ್ನು (ಬಿ.ಡಿ.ಯು.) ಸ್ಥಾಪಿಸಿದೆ. ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ನಿರ್ದೇಶನದ ಅನುಸಾರ 02.07.2020 ರಂದು ಇದನ್ನು ಸ್ಥಾಪಿಸಲಾಯಿತು. ಈ ಬಹು ವಿಭಾಗಗಳ ಘಟಕದ ದ್ಯೇಯವು ಭಾರತೀಯ ರೈಲ್ವೆ ಸಾಗಿಸುವ ಸರಕುಗಳನ್ನು ದ್ವಿಗುಣಗೊಳಿಸುವುದು. ಹಿರಿಯ ವಿಭಾಗೀಯ ಕಾರ್ಯಾಚರಣಾ ವ್ಯವಸ್ಥಾಪಕ ಶ್ರೀ ವಿ.ಸತೀಶ್ ರವರು ಘಟಕದ ಮುಖ್ಯಸ್ಥರಾಗಿರುತ್ತಾರೆ. ಈ ಘಟಕವು ವಾಣಿಜ್ಯ, ಯಾಂತ್ರಿಕ ಮತ್ತು ವಿತ್ತ ಖಾತೆ ವಿಭಾಗಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ ಹೊಂದಿದೆ. ಈ ಸಮಿತಿಯು ನಿಗದಿತ ಗುರಿಯನ್ನು ಸಾಧಿಸಲು ಅಸ್ತಿತ್ವದಲ್ಲಿರುವ ಗ್ರಾಹಕರೊಂದಿಗೆ ಸಂವಹನ ನಡೆಸಲು ಮತ್ತು ಹೊಸ ಗ್ರಾಹಕರನ್ನು ತಲುಪಲು ನೋಡಲ್ ಪಾಯಿಂಟ್ (ಸಂಪರ್ಕ ಬಿಂದು)ವಾಗಿ ಕಾರ್ಯನಿರ್ವಹಿಸುತ್ತದೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನ ಸರಕು ಸಾಗಣೆ ವ್ಯವಸ್ಥಾಪಕರು ಇದರ ಉಸ್ತುವಾರಿ ವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ, ಸರಕು ಗ್ರಾಹಕರೊಂದಿಗೆ ಕಾರ್ಯತಃ ಸಭೆಯನ್ನು ಜುಲೈ 8, 2020 ರಂದು ಮೈಸೂರು ವಿಭಾಗವು ಆಯೋಜಿಸಿತ್ತು. ವಿಭಾಗದ ಪ್ರಮುಖ ಸರಕು ಸಾಗಾಣ ಗ್ರಾಹಕರು, ಅಂದರೆ, ಜೆ.ಎಸ್‌.ಡಬ್ಲ್ಯೂ., ತೋರಣಗಲ್ಲು (ಕಬ್ಬಿಣ ಮತ್ತು ಉಕ್ಕಿನ ವಲಯ) ಆರ್.ಪ್ರವೀಣ್ ಚಂದ್ರ ಕಂ. ಮತ್ತು ವೇದಾಂತ ಲಿಮಿಟೆಡ್ (ಕಬ್ಬಿಣ ಅದಿರು ವಲಯ), ಹೈಡೆಲ್ಬರ್ಗ್ ಸಿಮೆಂಟ್ (ಸಿಮೆಂಟ್ ವಲಯ) ಮತ್ತು ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (ಕೃಷಿ ವಲಯ) ಸಭೆಯಲ್ಲಿ ಭಾಗವಹಿಸಿದವು. ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರಗಳು ಮತ್ತು ಆಹಾರ ಧಾನ್ಯಗಳು – ಈ ಪ್ರಮುಖ ವಲಯಗಳ ವಸ್ತುಗಳ ಚಲನೆಯು ಜೂನ್‌ನಲ್ಲಿ ಕಂಡುಬಂದ ಬೆಳವಣಿಗೆಗೆ ಪ್ರಮುಖ ಕಾರಣಿಕರ್ತರು ಎಂದು ಬಿ.ಡಿ.ಯು. ಸಂಚಾಲಕರು ವಿವರಿಸಿದರು ಮತ್ತು ಸಾಮಾನ್ಯ ಲೋಡಿಂಗ್ ಮಾದರಿಗೆ ಸ್ಥಿತಿ ಸಿದ್ಧವಾಗುತ್ತಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಳೆದ ವರ್ಷ ಮೈಸೂರು ವಿಭಾಗವು ಗುರಿಯನ್ನು ಮೀರಿ ಸಾರ್ವಕಾಲಿಕ ಹೆಚ್ಚಿನ ಲೋಡಿಂಗ್ ದಾಖಲೆ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ವಿಭಾಗದ ನಿರೀಕ್ಷೆ ಬಹಳ ಹೆಚ್ಚಾಗಿದೆ. ಮೊದಲ ತ್ರೈಮಾಸಿಕದಲ್ಲಿನ ಕುಂಠಿತ ವೇಗವನ್ನು ಸರಿದೂಗಿಸಲು ವಿಭಾಗವು, ಇಂಡೆಂಟ್‌ಗಳನ್ನು ತ್ವರಿತಗೊಳಿಸುವ ಮೂಲಕ ಮತ್ತು ಲೋಡ್ ಮಾಡಲು ರೇಕ್ ಗಳನ್ನು ವೇಗವಾಗಿ ನೀಡುವುದರ ಮೂಲಕ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಸರಕು ಶೆಡ್‌ಗಳಲ್ಲಿಯೂ ಸಹ ಸೌಲಭ್ಯಗಳನ್ನು ಸುಧಾರಿಸಲು ವಿಭಾಗವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೇಕ್ ತಡೆಹಿಡಿಯುವಿಕೆಯು ನಿಯಂತ್ರಣದಲ್ಲಿದೆ ಮತ್ತು ಸರಕುಗಳ ರೇಕ್‌ಗಳನ್ನು ಅನುಮತಿಸಿರುವ ಗರಿಷ್ಠ ವೇಗದಲ್ಲಿ ಓಡಿಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿನ ಸರಾಸರಿಯು 25 ಕಿಲೋಮೀಟರ್ ವೇಗದಿಂದ 45 ಕಿಲೋಮೀಟರ್ ವೇಗವನ್ನು ತಲುಪಿದೆ. ‘ಸುರಕ್ಷತೆ ಮೊದಲ ಆದ್ಯತೆ’ ದ್ಯೇಯದೊಂದಿಗೆ ಎಲ್ಲಾ ಸರಕು ರೈಲುಗಳನ್ನು ಸರಾಸರಿ 50 ಕಿಲೋಮೀಟರ್ ವೇಗದಲ್ಲಿ ಓಡಿಸುವುದು ರೈಲ್ವೆಯ ಗುರಿಯಾಗಿದೆ. ಸರಕು ಸಾಗಾಣೆಯನ್ನು ರಸ್ತೆ ಮಾರ್ಗದಿಂದ ರೈಲ್ವೆ ಮಾರ್ಗಕ್ಕೆ ಬದಲಾಯಿಸಲು ಅನುವು ಮಾಡಿಕೊಡುವ ವಾತಾವರಣವನ್ನು ರೈಲ್ವೆಯು ಸೃಷ್ಟಿಸುತ್ತಿದೆ.

ಕಳೆದ ಆರ್ಥಿಕ ವರ್ಷದ ಹೋಲಿಕೆಯಲ್ಲಿ ಈ ಸಲದ ಕಡಿಮೆ ಬೇಡಿಕೆಯು ತಮ್ಮ ಲೋಡಿಂಗ್ ಮೇಲೆ ಪರಿಣಾಮ ಬೀರಬಹುದು ಎಂದು ಕಬ್ಬಿಣದ ಅದಿರಿನ ಗ್ರಾಹಕರು ಹೇಳಿದ್ದಾರೆ. ಮೈಸೂರು ವಿಭಾಗದ ಸಾಸಲುಗೆ ಹೋಲಿಸಿದರೆ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿನ ಉನ್ನತ ದರ್ಜೆಯ ಅದಿರಿನ ಲಭ್ಯತೆ ಮತ್ತು ವೈಜಾಗ್‌ನ ಸಾಮೀಪ್ಯ, ಪ್ರಶಸ್ತ ಪರ್ಯಾಯವಾಗಿರುವುದರ ಬಗ್ಗೆ ಅವರು ಗಮನಸೆಳೆದರು; ಲೋಡ್ ಮಾಡಲು ಸಮರ್ಪಕ ವ್ಯಾಗನ್‌ಗಳನ್ನು ನೀಡುವುದು, ಡೆಮುರೇಜ್ ಶುಲ್ಕ ವಿಧಿಸುವುದನ್ನು ಕಡಿತಗೊಳಿಸುವುದು, ಲೋಡಿಂಗ್ ಪಾಯಿಂಟ್‌ಗಳಲ್ಲಿ ಉತ್ತಮ ಪರಿಸ್ಥಿತಿ ನಿರ್ಮಾಣ, ಸ್ಪರ್ಧಾತ್ಮಕ ದರಗಳು, ಹೊಸದಾಗಿ ಮಾರ್ಪಡಿಸಿದ ಸರಕು ವ್ಯಾಗನ್‌ಗಳ ಪೂರೈಕೆ ಇತ್ಯಾದಿ ಸೇರಿದಂತೆ ಕೆಲವು ವಿಷಯಗಳನ್ನು ಪರಿಹರಿಸಬೇಕಾಗಿದೆ.

ಸಣ್ಣ ಉದ್ರೇಕಕಾರಿ ಅಂಶಗಳನ್ನು ಸಹ ತೆಗೆದುಹಾಕಲು ಮತ್ತು ಎಲ್ಲಾ ಲೋಡಿಂಗ್ ಪಾಯಿಂಟ್‌ಗಳಲ್ಲಿ ಅತ್ಯಂತ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ರೈಲ್ವೆಯು ಹೇಳಿದೆ. ಪರಿಹಾರಕ್ಕಾಗಿ ಗ್ರಾಹಕರು ತಮ್ಮ ಪ್ರಮಾಣಿಕವಾದ ಕುಂದುಕೊರತೆಗಳನ್ನು ಮುಂದಿಡಲು ಕೇಳಿಕೊಳ್ಳಲಾಗಿದೆ. ವಿಭಾಗಗಳು ತಿಳಿಸುವ ಎಲ್ಲಾ ಕಾರ್ಯನೀತಿ ಸಮಸ್ಯೆಗಳನ್ನು ಗರಿಷ್ಠ ಒಂದು ವಾರದ ಅವಧಿಯಲ್ಲಿ ಪರಿಹರಿಸಲು ರೈಲ್ವೆ ಮಂಡಳಿಯು ಸಹ ಸಮಿತಿಯನ್ನು ರಚಿಸಿದೆ.

South Western Railway

Mysuru Division constitutes Business Development Unit to boost freight traffic.

To give a push to Freight traffic and enable ease of doing business, Mysuru Division has set up a Business Development Unit (BDU). This was set up on 02.07.2020 subsequent to the directives from Ministry of Railways (Railway Board). The focus of this multi disciplinary unit will be to double the freight carried by Indian Railways. Senior Divisional Operations Manager Mr. V. Satish will head the Unit. The Unit also has officers from Commercial, Mechanical and Accounts departments as its members. The committee will act as a nodal point for interacting with existing customers and will reach out to new customers for achieving the stated goal. At South Western Railway, headquarters/Hubballi the Chief Freight Transportation Manager will be in-charge.

In this backdrop, a virtual meeting with freight customers was organized by Mysuru division on 8th July 2020. Major freight customers of the Division, viz., JSW, Tornagallu (Iron and Steel sector) R Praveen Chandra Co., & Vedanta Ltd (Iron Ore sector) Heidelberg Cement (Cement Sector) and Gujarat Ambuja Exports Ltd (Agri sector) took part in the meeting The Convenor of BDU explained that the movement of items from the core sector–coal, cement, fertilizers- as well as food grains have been the key drivers for the growth witnessed in June and expressed confidence that stage is getting set for normal loading pattern. Last year Mysuru division had surpassed the target and achieved all time high loading. With this background, expectation of Division is very high. Division is making all efforts to make good the decline in first quarter by fast-tracking indents and expediting placement of rake for loading. Division is also taking measures to improve facilities in Goods Sheds. Detention has been under control and Goods rakes are being run at Maximum Permissible Speed. In the past one month average speed has reached 45 Kmph as against 25 Kmph earlier. Target is to run all Goods trains at an average speed of greater than 50 Kmph. with ‘Safety First Approach’. Railways are creating enabling environment to make a shift of freight traffic from Road sector to Rail sector.

Iron Ore customers stated that poor demand could affect their loading vis-a-vis last fiscal year. They pointed out availability of higher grade material in Odisha & Jharkhand and proximity to Vizag as an ideal alternative in comparison to Sasalu in Mysuru Division; Offering fit wagons for loading, relaxations in levy of demurrage charges, better conditions in loading points, competitive rates, supply of New Modified Goods wagons, etc.are some of issues which needs to be addressed.

The Railways have said that every effort would be made to remove even minor irritants and create a very conducive environment at all loading points. Customers have been asked to put forward their genuine grievances for redressal. Railway Board has also set up a Committee to resolve all policy issues raised by Divisions in maximum one weeks’ time.

Kindly arran

ಪ್ರಿಯಾ ಶೆಟ್ಟಿ