ಅಯೋಧ್ಯೆ ರಾಮಜನ್ಮಭೂಮಿ: ಜಪ ಪುಸ್ತಕ ವಿತರಣೆ:

Share

ಮೈಸೂರು, ಮರ್ಯಾದ ಪುರುಷೋತ್ತಮ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಮಂದಿರ ನಿರ್ಮಾಣದ ಭೂಮಿಪೂಜೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತ ಮಂಡಳಿ ವತಿಯಿಂದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಶ್ರೀ ರಾಮ ನಾಮ ಜಪದ ಪುಸ್ತಕ ವನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಆಗಸ್ಟ್ 5ನೇ ತಾರೀಖು ಎಲ್ಲರೂ ಮನೆಯಲ್ಲೇ
ರಾಮನಾಮ ಜಪ ಮಾಡಬೇಕು ಎಂದು ಪುಸ್ತಕ ನೀಡಿ ಮನವಿ ಮಾಡಿಕೊಂಡರು
ನಂತರ ಮಾತನಾಡಿದ ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್ ಮರ್ಯಾದ ಪುರುಷೋತ್ತಮ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 5ನೇ ತಾರೀಖು ಮಂದಿರ ನಿರ್ಮಾಣದ ಪೂಜೆ ನಡೆಯುತ್ತಿರುವುದು ಎಲ್ಲರೂ ತನು ಮನ ಧನದಿಂದ ಸಹಾಯ ಮಾಡಬೇಕು ,
ಆಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ ರಾಮಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರು ಜಾತಿ ಧರ್ಮ ಪಂಥದ ಭೇದಭಾವ ಮರೆತು ತನು ಮನ ಧನದೊಂದಿಗೆ ನೆರವು ನೀಡಲು ಮುಂದೆ ಬರಬೇಕೆಂದು ಮನವಿ ಮಾಡಿಕೊಂಡರು
ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಲೌಕಿಕ ಪ್ರಯತ್ನ ದ ಜೊತೆಗೆ ಆಧ್ಯಾತ್ಮಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡಬೇಕಾಗಿದೆ ಅದರಿಂದ ಎಲ್ಲರೂ ಶ್ರೀರಾಮ ನಾಮ ಜಪ ಮಾಡಬೇಕು ರಾಮ ಎರಡು ಬದಲಾದರೆ ರಾ,ಮಾ ಹಾಗೂ ರಾಮ ಹೀಗೆ ಮೂರು ಮಂತ್ರಗಳ ಆ ನಾಮದಲ್ಲಿ ಅಡಗಿರುವುದರಿಂದ ಎಲ್ಲರೂ ರಾಮನಾಮ ಜಪ ಮಾಡಬೇಕು ಈ ನಿಟ್ಟಿನಲ್ಲಿ ದೇಶ ವಿದೇಶದಲ್ಲಿರುವ ಭಾರತೀಯರು ಎಲ್ಲ ಜಾತಿ ಜನಾಂಗದವರು ರಾಮ ಮಂತ್ರ ಪಠಣೆ ಮಾಡಿ ಮಂದಿರ ನಿರ್ಮಾಣಕ್ಕೆ ಆಧ್ಯಾತ್ಮಿಕ ಮಂತ್ರ ಶಕ್ತಿಯನ್ನು ತುಂಬಬೇಕು
ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೇರವೇರಿಸಿದ್ದಾರೆ ದೇಶದ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಆದರೆ ಇದೀಗ ಕೋರೋನಾ ಮಹಾಮಾರಿ ಹಾವಳಿ ಹೆಚ್ಚಾಗಿರುವುದರಿಂದ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಶ್ರೀ ರಾಮ ನಾಮ ಜಪ ಮಾಡಿ ಮಂತ್ರ ಶಕ್ತಿಯನ್ನು ಮಂದಿರ ನಿರ್ಮಾಣಕ್ಕೆ ಧಾರೆ ಎರೆಯಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಬಿಜೆಪಿ ಎನ್ಆರ್ ಯುವ ಮೋರ್ಚಾ ಅಧ್ಯಕ್ಷರಾದ ಲೋಹಿತ್ ,ಶ್ರೀ ರಾಮ ಭಕ್ತ ಮಂದಿರದ ಸದಸ್ಯರುಗಳಾದ ಪಂಕಜ್ ಪರೀಕ್. ಮಲಮ್ ಸಿಂಗ್ ರಥೋಡ್.. ಮನೋಹರ್ ಸಿಂಗ್.. ಪ್ರೀತವಿ ಸಿಂಗ್ ಹಾಗೂ ಇನ್ನಿತರರು ಹಾಜರಿದ್ದರು


Share