ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನೇರಪ್ರಸಾರ

Share

ಅಯೋಧ್ಯೆ ಶತಶತಮಾನಗಳ ಹಿಂದುಗಳ ಕನಸು ಇಂದು ನೆನಸಾಯಿತು.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶಿಲಾನ್ಯಾಸ ಮಾಡುವುದರ ಮೂಲಕ ಹಿಂದುಗಳ ಕನಸನ್ನು ನೆನಸು ಮಾಡಿದರು.
ಇಂದು ಬೆಳಗ್ಗೆ 11:30 ರ ಅಭಿಜಿನ್ ಶುಭಲಗ್ನದಲ್ಲಿ 40 ಕೆಜಿಯ 5 ಬೆಳ್ಳಿ ಇಟ್ಟಿಗೆ ನೀಡುವುದರ ಮೂಲಕ ಶಿಲಾನ್ಯಾಸ ಕಾರ್ಯಕ್ರಮ ಪ್ರಧಾನಿ ಮೋದಿ ಅವರು ನೆರವೇರಿಸಿದರು.
ಮಂತ್ರಘೋಷಗಳೂಂದಿಗೆ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾಧು ಸಂತರುಗಳ ಸಮ್ಮುಖದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದೆ ನೆರವೇರಿತು. ಶಿಲಾನ್ಯಾಸ ಕಾರ್ಯಕ್ರಮದ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿತಾಯಿಗೆ ನಮಸ್ಕರಿಸಿ ನಂತರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತೊಡಗಿದರು.
ಹಿಂದುಗಳ ಭಾವನಾತ್ಮಕ ಕಾರ್ಯಕ್ರಮವಾಗಿತ್ತು ಇದು.
ಇಂದು ಭಾರತದಾದ್ಯಂತ ರಾಮಭಕ್ತರು ಹರ್ಷ ವ್ಯಕ್ತಪಡಿಸುವುದು ವಿವಿಧ ರೀತಿಯಲ್ಲಿ ಮುಗಿಲುಮುಟ್ಟಿದೆ.
ಇಂದಿನ ಕಾರ್ಯಕ್ರಮ ನಡೆಯಲು ಹಲವಾರು ರಾಮಭಕ್ತರು, ಕರಸೇವಕರು ತಮ್ಮ ಬಲಿದಾನವನ್ನು ಮಾಡಿದ್ದಾರೆ. ರಾಮಮಂದಿರ ಕನಸ್ಸನ್ನು ಹುಟ್ಟುಹಾಕಿದ ಅಶೋಕ್ ಸಿಂಗಾಲ್ ಅವರನ್ನು ವೇದಿಕೆಯ ಮೇಲಿದ್ದ ಗಣ್ಯರೆಲ್ಲರೂ ನೆನೆಸಿಕೊಂಡರು.
ರಾಮ ಮಂದಿರದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂಚೂಣಿಯಲ್ಲಿದ್ದ ಲಾಲ್ ಕೃಷ್ಣ ಆದ್ವಾನಿ ಯವರು ತಮ್ಮ ಮನೆಯಲ್ಲೇ ಕುಳಿತು ನೇರಪ್ರಸಾರದ ಕಾರ್ಯಕ್ರಮವನ್ನು ವೀಕ್ಷಿಸಿ ಕಣ್ತುಂಬಿಕೊಂಡರು.
ಆಡ್ವಾಣಿಯವರು ನೆನ್ನೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನದಲ್ಲಿ ಮಾತನಾಡುತ್ತಾ ಇಲ್ಲಿಯವರೆಗೂ ನಾನು ಬದುಕಿದ್ದು ಇಂದು ನನ್ನ ಜನ್ಮ ಸಾರ್ಥಕ ವಾಯಿತು ಎಂದು ಆನಂದಬಾಷ್ಪ ದೊಡನೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ರಾಮಮಂದಿರದ ಇಂದಿನ ಕಾರ್ಯಕ್ರಮ ನೆನಸಾಗಲಿ ನಾವು ಮಾಡಿದ ಹೋರಾಟ ಫಲ ಸಿಕ್ಕಿದೆ ಎಂದು ಆರೆಸ್ಸೆಸ್
ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿಕೆ ನೀಡಿದ್ದಾರೆ. ಇಂದಿನ ಕಾರ್ಯಕ್ರಮ ಸುಗಮವಾಗಿ ನೆರವೇರಲು ಮುಂದೆ ನಿಂತ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಮಹಾಪುರುಷ ಎಂದು ವೇದಿಕೆಯಲ್ಲಿದ್ದ ಗಣ್ಯರು ತಮ್ಮ ಭಾಷಣದಲ್ಲಿ ಬಣ್ಣಿಸಿದರು.
ರಾಮಮಂದಿರ ನಿರ್ಮಾಣ ಸಂಬಂಧ ಮುರಳಿ ಮನೋಹರ್ ಜೋಷಿ ಎಲ್ಕೆಆಡ್ವಾಣಿ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿರುವುದರಿಂದ ಇಂದು ಅಯೋಧ್ಯೆ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ ಸರ್ಕಾರದಿಂದ ನಗರದಲ್ಲಿ ಇಂದು ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೊಡುಗೆಯಾಗಿ ಕೋದಂಡರಾಮ ಪ್ರತಿಮೆ ಅರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಮನಿಗೆ ಜೈಕಾರ ಕೂಗಿದ ಪ್ರಧಾನಿ ಇಂದು ರಾಮನ ಘೊಷ ವಾಕ್ಯ ಕೇಳಿಬರುತ್ತಿದೆ ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ದೇಶದ ಎಲ್ಲಾ ರಾಮ ಭಕ್ತರಿಗೂ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದ ತಿಳಿಸಿದರು. ವಿಶ್ವದಾದ್ಯಂತ ಇಂದು ರಾಮನ ಘೋಷವಾಕ್ಯ ಕೇಳಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು ಪ್ರಧಾನಿ ನರೇಂದ್ರ ಮೋದಿಯವರು.
ಸರಿಯೂ ನದಿಯ ತೀರದಲ್ಲಿ ಇಂದು ಹೊಸ ಸುವರ್ಣ ಅಧ್ಯಾಯ ಪ್ರಾರಂಭವಾಗಿದೆ.
ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಗೆ ಅವಕಾಶ ಮಾಡಿಕೊಟ್ಟ ರಾಮಜನ್ಮಭೂಮಿ ಟ್ರಸ್ಟ್ ಗೆ ವಂದನೆ ಸಲ್ಲಿಸಿದರು. ಇಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವಂಥ ಅವಕಾಶ ನನಗೆ ಸಿಕ್ಕಿರುವ ಪುಣ್ಯ ಎಂದರು.
ಅಯೋಧ್ಯೆಯಲ್ಲಿ ಸಂಘರ್ಷ ಮತ್ತು ಸಂಕಲ್ಪ ಎರಡು ಇತ್ತು ಅಂದಿನ ಸಂಕಲ್ಪದಿಂದಲೇ ಇಂದು ಕನಸು ನನಸಾಗಿದೆ ಎಂದರು ಪ್ರಧಾನಿ.


Share