ಅರಮನೆಗೆ ಮೂರು ದಿನಗಳ ನಿಷೇಧ. -ವಿಶ್ವ ಪ್ರಸಿದ್ಧ ಮೈಸೂರು ಅರಮನೆಯನ್ನು ಇಂದಿನಿಂದ ಮೂರು ದಿನಗಳ ಕಾಲ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.ಒಂಟೆಯ ಮೇಲ್ವಿಚಾರಕನ ಮಗನಿಗೆ ಕರೋನಾ ವೈರಾಣು ಅಂಟಿದೆ ಎಂದು ತಿಳಿಯುತ್ತಿದ್ದಂತೆ ಅರಮನೆಗೆ ಸೂಕ್ತ ರೀತಿಯಲ್ಲಿ ಸ್ಯಾನಿಟೈಸೆಷನ್ ಮಾಡಲು ನಿರ್ಬಂಧ ಹೇರಲಾಗಿದೆ .ಜಿಲ್ಲಾ ಆಡಳಿತವು ಇಂದು ಈ ಸ್ಯಾನಿಟೈಸೆಷನ್ ಗೆ ಕ್ರಮ ಕೈಗೊಳ್ಳಲಿದ್ದು ಮುಂದಿನ ಮೂರು ದಿನಗಳ ಕಾಲ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲು ಕ್ರಮ ಜರುಗಿಸಲಾಗಿದೆ ಎಂದು ಅರಮನೆಯ ಉಪನಿರ್ದೇಶಕರು ತಿಳಿಸಿದ್ದಾರೆ .ನಿನ್ನೆಯ ದಿನ ರಾತ್ರಿ ಮೈಸೂರು ಪತ್ರಿಕೆಯು ಇದರ ಸುದ್ದಿಯನ್ನು ಮೊದಲು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು .