ಅವದೂತ ದತ್ತಪೀಠ ನೆನಪಿನ ಅಂಗಳದಲ್ಲಿ: ಹಳೆ- ಹೊಸ ಭಕ್ತರ ಸಂಗಮ

Share

 

ಮೈಸೂರಿನ ಅವದೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಭಾನುವಾರದ ದಿನ ಒಂದು ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
60ರ ದಶಕದ ಹಿಂದಿನ ಹಾಗೂ ಇತ್ತೀಚಿನ ವರೆಗಿನ ಭಕ್ತಾದಿಗಳ ಒಂದು ಅಭೂತಪೂರ್ವ ಸಂಗಮವಾಗಿತ್ತು ಈ ವಿಶೇಷ ಕಾರ್ಯಕ್ರಮ .
 ಸ್ವಯಂ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅಭಿಲಾಷೆಯಂತೆ, ಮೈಸೂರಿನ ತಮ್ಮ ಕೆಸರೇ ವಾಸ್ತವ್ಯದಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಭಕ್ತರುಗಳನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದರಿಂದ ಈ ಒಂದು ಅತಿ ಅಪರೂಪದ ಕಾರ್ಯಕ್ರಮ ಕಣ್ತುಂಬಿ ಬಂದಿತ್ತು. ಸ್ವಾಮೀಜಿಯವರ ಪೂರ್ವಾಶ್ರಮದ ಕೆಸರೆಯ ಸಂದರ್ಭದಲ್ಲಿ ತಮ್ಮೊಡನೆ ಆಟವಾಡುತ್ತಿದ್ದ, ಪೂಜಾ ಕೈಯಗಳಲ್ಲಿ ನೆರವಾಗುತ್ತಿದ್ದ, ಸ್ವಾಮೀಜಿಯವರ ಪವಾಡಗಳಿಗೆ ಸಾಕ್ಷಿಭೂತರಾಗಿದ್ದ ಅಂದಿನ ಕಿರಿಯ ಹಿರಿಯ, ಅಸಂಖ್ಯಾತ ಭಕ್ತರುಗಳು ನಿನ್ನೆಯ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿಸಿದರು.
ಅಂದು ಆಶ್ರಮದ ನಿರ್ಮಾಣ ಹಂತದಲ್ಲಿ ಪಾಲ್ಗೊಂಡು ವೆಲ್ಡಿಂಗ್ ನಲ್ಲಿ ನಿರತರಾಗಿದ್ದಾಗ ತಮ್ಮ ಎರಡು ಕೈಗಳನ್ನು ರಾತ್ರಿ ಸುಟ್ಟುಕೊಂಡು  ಬೆಳಗಾಗುವುದರಲ್ಲಿ ತಮ್ಮ ಕೈಗೆ ಶ್ರೀ ಸ್ವಾಮೀಜಿಯವರು ವಿಭೂತಿ ಸವರಿದ ನಂತರ ಬೆಳಿಗ್ಗೆ ಎದ್ದಾಗ ಏನು ಆಗೇ ಇಲ್ಲವೇನೋ ಎಂಬಂತೆ ಗುಣಮುಖವಾದ ಪವಾಡ, ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಮನೆಯಿಂದ ಕೈ ಬಿಡಲಾಗಿದ್ದ  ವ್ಯಕ್ತಿ ಓರ್ವರಿಗೆ ಮುಂಜಿ ಮಾಡಲು ತಿಳಿಸಿ, ತದನಂತರ ಅವರು ಅಂದಿನಿಂದ ಇಂದಿನವರೆಗೂ  ಆರೋಗ್ಯವಾಗಿ ಮುಂದುವರೆಯುತ್ತಿರುವ ವ್ಯಕ್ತಿ ಯೋರ್ವರ ಅನುಭವ,  ಕೆಲವೊಮ್ಮೆ ಸ್ವಾಮೀಜಿಯವರಿಂದ ಪಡೆಯುತ್ತಿದ್ದ ಕಲ್ಲು, ಕಡ್ಡಿಗಳು  ವಿಗ್ರಹ ರೂಪಕ್ಕೆ ಅಥವಾ ಇನ್ಯಾವುದೋ ವಸ್ತು ರೂಪಕ್ಕೆ ಮರಳುವಂತಹ ಅಪೂರ್ವ ಪವಾಡ ಪ್ರಸಂಗಗಳಿಗೆ ಸಾಕ್ಷಿ ಆದಂತ ಕೆಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ವಿವಿಧ ರೀತಿ ಸೇವೆ ಮಾಡುತ್ತಿದ್ದ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಭಕ್ತರ ಹೃದಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರ ಸಂಕ್ಷಿಪ್ತ ವಿವರ :
ಶ್ರೀ ಸ್ವಾಮಿಜಿ ಅವರಿಗೆ ಪೂಜೆಗೆ ಹಾಲನ್ನು ನೀಡುತ್ತಿದ್ದ ಬಾಯಮ್ಮ ಕುಟುಂಬ, ನಂಜನಗೂಡು ರಸ್ತೆಯಲ್ಲಿ ಆಶ್ರಮದಲ್ಲಿ ಚಪ್ಪರ ನಿರ್ಮಾಣದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟಕೃಷ್ಣಯ್ಯನವರ ಕುಟುಂಬ, ಸ್ವಾಮೀಜಿಯವರು ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮೇಲಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರಾಮಸ್ವಾಮಿಯವರ ಕುಟುಂಬ, ಶ್ರೀ ಸ್ವಾಮೀಜಿಯವರು  ಮೊದಲ ಬಾರಿಗೆ ಪಾದ ಪೂಜೆಗೆ ತೆರಳಿದ್ದ ಕುಟುಂಬ, ಶ್ರೀ ಸ್ವಾಮೀಜಿಯವರಿಗೆ ಹೂವು ನೀಡುತ್ತಿದ್ದ ಕುಟುಂಬ , ಶ್ರೀ  ಸ್ವಾಮೀಜಿಯವರಿಗೆ ಹೋಮಕ್ಕೆ ಬೇಕಾದ ಪರಿಕರಗಳನ್ನು ಸರಬರಾಜು ಮಾಡುತ್ತಿದ್ದ ಕುಟುಂಬ, ಸ್ವಾಮೀಜಿಯವರಿಗೆ ಮೊದಲು ಸೀರೆ ನೀಡಿದ ಕುಟುಂಬ, ಹೋಮ ಮಾಡಲು ಸ್ಥಳ ನೀಡಿದ ಕುಟುಂಬ, ಭಿಕ್ಷೆ ಮಾಡಿ ಕೊಡುತ್ತಿದ್ದ ಕುಟುಂಬ , ಸ್ವಾಮೀಜಿಯವರ ಭಿಕ್ಷಾ ಪಾತ್ರೆಗಳನ್ನು ತೊಳೆದು ಸ್ಥಳ ಸ್ವಚ್ಛ ಮಾಡುತ್ತಿದ್ದ ಕುಟುಂಬ, ಪೂಜ್ಯರನ್ನು ಸೈಕಲ್ಲಿನಲ್ಲಿ ಕರೆದೊಯ್ಯುತ್ತಿದ್ದ ಕುಟುಂಬ, ಆಶ್ರಮದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ, ನೀಡುತ್ತಿರುವ ವೈದ್ಯರು, ಸ್ವಾಮೀಜಿವರಿಂದ ಯೋಗ ಕಲಿತವರು, ಕ್ರೀಡೆಯಾಡುತ್ತಿದ್ದವರು, ಸ್ವಾಮೀಜಿಯವರು ಪಂಚಾಂಗ ನೋಡಲು ಹೋಗುತ್ತಿದ್ದ ಕುಟುಂಬ ಹೀಗೆ ಬಂದವರೆಲ್ಲರೊಂದಿಗೆ ಶ್ರೀ ಸ್ವಾಮೀಜಿಯವರು ಅವಿನಾಭಾವ ಸಂಬಂಧ ಹೊಂದಿದ್ದರು.
 ಸ್ವಾಮೀಜಿಯವರ ಪೂರ್ವಾಶ್ರಮದಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರೊಂದಿಗೆ ಸಹವರ್ತಿಗಳಾಗಿದ್ದಂತಹ, ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಅಂದರೆ ಈಗಿನ  ಭವ್ಯ ಆಶ್ರಮದ  ಹಿಂದಿನ ಚಪ್ಪರದ ಕಟ್ಟಡದಲ್ಲಿ ನಡೆಯುತ್ತಿದ್ದ ಹೋಮ, ಹವನ, ಭಜನೆ ನಾಟಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಂತಹ ಭಕ್ತಾದಿಗಳು, ಕಲಾವಿದರು ಆಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಸೇವಕರುಗಳು, ಪುರೋಹಿತರು, ವಾಹನ ಚಾಲಕರು ಆಶ್ರಮದ ಅಭಿವೃದ್ಧಿಗೆ ಸಹಕರಿಸಿದ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹೀಗೆ ಹತ್ತು ಹಲವು ರೀತಿಯ ಭಕ್ತಾದಿಗಳು ಅದರಲ್ಲೂ ಕನ್ನಡಿಗರೇ ಬಹುಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಂತ ಯಶಸ್ವಿಯಾಗಿ ಶ್ರೀ ಗಳಿಗೂ ಮೆಚ್ಚುಗೆ ಆಗುವಂತೆ ಅವರ ಅನುಭವಗಳನ್ನು ಹಂಚಿಕೊಂಡಿದ್ದು, ಇಂದಿನ ಭಕ್ತ ಸಮೂಹಕ್ಕೆ ಒಂದು ಮಾದರಿ ಕಾರ್ಯಕ್ರಮವಾಗಿತ್ತು.
ಹಲವಾರು ಭಕ್ತರುಗಳು ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ಒಬ್ಬರಿಗೊಬ್ಬರು ಚರ್ಚಿಸುತ್ತಾ ಕುಳಿತಿದ್ದಂತಹ ಈ ಕಾರ್ಯಕ್ರಮ ಅತ್ಯಂತ ಮನ ಸೆಳೆಯುತ್ತಿತ್ತು. ವಿವಿಧ ಕಾರಣಗಳಿಂದಾಗಿ ಹಲವಾರು ಪ್ರದೇಶಗಳಿಗೆ ಹಂಚಿ ಹೋಗಿರುವ, ಈಗಾಗಲೇ ಇಹಲೋಕ ತ್ಯಜಿಸಿರುವ, ಅಂದಿನಿಂದ ಇಂದಿನವರೆಗೂ ಸ್ವಾಮೀಜಿಯವರ ಸಂಪರ್ಕದಲ್ಲಿರುವ, ಸ್ವಾಮೀಜಿಯವರ ಪೂರ್ವಾಶ್ರಮದ ಪ್ರಾಧ್ಯಾಪಕರುಗಳು ವೈದ್ಯರು ಹೀಗೆ ಎಲ್ಲರನ್ನೂ ಶ್ರೀಗಳು ತಮ್ಮ ಅನುಗ್ರಹ ಭಾಷಣದಲ್ಲಿ ನೆನೆಯುತ್ತಾ , ತಮ್ಮ ಭಕ್ತಾದಿಗಳು ಯಾರೂ ಕೂಡ ಪರಕಿಯರು ಎಂಬ ಭಾವನೆ ಬೆಳೆಸಿಕೊಳ್ಳದೆ, ಆಶ್ರಮದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ.
 ಇದು ತಮ್ಮದೇ ಆಶ್ರಮ, ತಮ್ಮದೇ ಮನೆ ಎಂಬಂತೆ ಭಾವನೆಯಿಂದ ಆಶ್ರಮಕ್ಕೆ ಬರುತ್ತಿರಬೇಕು, ಮುಂದಿನ ಪೀಳಿಗೆಗಳಿಗೆ ಮಾದರಿಯಾಗಬೇಕು, ಒಮ್ಮೆ ದತ್ತಾತ್ರೇಯನ ದರ್ಶನ ಮಾಡಿದರೆ ಸಾಕು, ಆಯಾ ಭಕ್ತರ ಏಳು ಜನ್ಮಗಳ ವರೆಗೆ ಅನ್ನದ ಕೊರತೆಯೇ ಇರುವುದಿಲ್ಲ. ಅಂತಹ ಭಕ್ತಿಯ ತಾಣವಿದು.
 ಇದು ನಿಮ್ಮ ಆಶ್ರಮ ಎಲ್ಲರಿಗೂ ಸದಾ ತೆರೆದ ಆಹ್ವಾನವಿರುವುದು ಎಂದು ತಿಳಿಸುತ್ತಿದ್ದಾಗ ಅನೇಕರ ಕಣ್ಣುಗಳಲ್ಲಿ ಆನಂದಭಾಷ್ಮ ಹರಿಯುತ್ತಿದ್ದದ್ದು , ಗುರು ಶಿಷ್ಯರ ಭಕ್ತಿ ಏನೆಂದು ಸಾರಿ ಹೇಳುತ್ತಿತ್ತು. ಎಂದು ಭಕ್ತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಗುರುವಿನ ತತ್ವಕ್ಕಿಂತ ಮೇಲೆ ಮಿಗಿಲಾದದು ಯಾವುದು ಇರುವುದಿಲ್ಲ ಗುರುವೇ ಮುಖ್ಯ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಮನ ಬಿಚ್ಚಿ   ಹಿರಿಯರಾದ ಜಯಣ್ಣ ಎಂಬುವರು ತಿಳಿಸಿದ್ದಾರೆ
ಮತ್ತೊಬ್ಬ ಹಿರಿಯ ಭಕ್ತರು ಮಾತನಾಡುತ್ತಾ ಆಶ್ರಮ ಮಠಗಳಿಗೆ ಹಣದ ಹೊಳೆ ಹರಿದು ಬರುತ್ತಿದ್ದರು ಅಲ್ಲಿಗೆ ಬರುವ ಭಕ್ತರಿಗೆ ಒಂದು ಬಿಡಿಗಾಸು ಕೊಡುವ ಮನಸ್ಥಿತಿ ಇರುವುದಿಲ್ಲ ಹಾಗೂ ವಿಶಾಲ ಮನೋಭಾವ ಅಂತೂ ಇರುವುದೇ ಇಲ್ಲ ಇದು ನಾನು ಕಂಡಿರುವ ಒಂದು ಸತ್ಯ, ಹೀಗಿರುವಾಗ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಇವತ್ತು ಭಕ್ತರನ್ನು ನೋಡಿ ಸಂತೋಷಗೊಂಡು ಪ್ರಸಾದವನ್ನು ನೀಡಿರುವುದು ಆಶ್ರಮದ ಇತಿಹಾಸಕ್ಕೆ ಮೈಲಿಗಲ್ಲು. ಅರ್ಥ ಪ್ರಸಾದ ನೀಡಿದರು ಎಂದು ಮೈಲಿಗಲ್ಲಿನ ಸ್ಥಾನಕ್ಕೆ ಆಶ್ರಮ ಕೊಂಡೊಯ್ದರು ಎನ್ನುವುದು ಅಲ್ಲ ಆಶ್ರಮ ಪ್ರಸಾದ ಈ ರೀತಿಯಲ್ಲಿ ಕೊಡುವಂತ ಒಂದು ಮನಸ್ಥಿತಿ ಹೊಂದಿರುವುದು ನಮಗೆ ಸಂತೋಷ ಕಂಡು ಬರುತ್ತಿದೆ ಎಂದು ಇತರೆ ಮಠದಲ್ಲಿ ಸಂಪರ್ಕ ಹೊಂದಿರುವ ಭಕ್ತರೊಬ್ಬರು ತಿಳಿಸುತ್ತಾ ಕಣ್ಣೀರಿಟ್ಟರು. ಮಠದಲ್ಲಿ ಸಂಪರ್ಕ ಹೊಂದಿರ್ತಕಂತ
ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರರು, ನೆರೆದಿದ್ದ ಎಲ್ಲಾ  ಭಕ್ತರನ್ನು ಅನುಗ್ರಹಿಸಿದರು. ಕಾರ್ಯದರ್ಶಿ ಎಚ್‌.ವಿ. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಸ್ಥಳವಾದ ನಾದಮಂಟಪ ಕಿಕ್ಕರಿದು ತುಂಬಿ ತಮ್ಮ ತಮ್ಮ ಅನುಭವ ರಸಾಮೃತ ಹಾಗೂ ಪುಷ್ಕಳ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

Share