ಆಂಧ್ರದವರಿಗಾಗಿ ಕನ್ನಡಿಗರಿಗೆ ಅವಮಾನ ಮಾಡಿದ ಸರ್ಕಾರ : ಶಾಸಕ ಸಾ.ರಾ.ಮಹೇಶ್ ಕಿಡಿ

Share

ಆಂಧ್ರದವರಿಗಾಗಿ ಕನ್ನಡಿಗರಿಗೆ ಅವಮಾನ ಮಾಡಿದ ಸರ್ಕಾರ : ಶಾಸಕ ಸಾ.ರಾ.ಮಹೇಶ್ ಕಿಡಿ

ಮೈಸೂರು: ಆಂಧ್ರದ ಮಹಿಳೆಯನ್ನ‌ ಜಿಲ್ಲಾಧಿಕಾರಿಯಾಗಿ ನೇಮಕ ಮಾಡುವ ಏಕೈಕ ಉದ್ದೇಶದಿಂದ ಕನ್ನಡದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು
ಶರತ್ ಅವರನ್ನ ಮೈಸೂರಿಗೆ ಪೋಸ್ಟಿಂಗ್ ಮಾಡಬಾರದಿತ್ತು.
ಮಾಡಿದ ಬಳಿಕ ಇದೀಗಾ ಅವಮಾನ ಮಾಡಿದಾಗೆ ಆಯ್ತು.ಒಬ್ಬ ಡಿಸಿಯಾಗಿ ಅವರ ಮನಸ್ಸು ಎಷ್ಟು ನೋವು ಅನುಭವಿಸಿರತ್ತೆ. ಕನ್ನಡದಲ್ಲಿ IAS ಮಾಡುವವರ ಸಂಖ್ಯೆಯೇ ವಿರಳ.ಅಂತಹದಲ್ಲಿ ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ ಮಾಡ್ತಿದ್ದಾರೆ. ರಾಜ್ಯದಲ್ಲಿ ಆಂಧ್ರ ಸಿಎಂ ಸರ್ಕಾರ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಕಾಡ್ತಿದೆ? ಎಂದು ಮಾಜಿ ಸಚಿವ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರು ಹಠಕ್ಕೆ ಬಿದ್ದಿದ್ದಾರೆ.ನಾನು ಡಿಸಿ ಹಾಗೆ ಇರಬೇಕು ಎಂದಿಕೊಂಡಿದ್ದಾರೆ.ಅದಕ್ಕೆ ಹಾಸನದಲ್ಲಿ ಮೂರು ಬಾರಿ ಕೇಸ್ ಹಾಕಿ ಜಿಲ್ಲಾಧಿಕಾರಿಯಾಗಿ, ‘ ಇದೀಗಾ ಮೈಸೂರಿಗೆ ಬಂದಿದ್ದಾರೆ.ಜಿಲ್ಲಾ ಮಂತ್ರಿಗಳಿಗೆ ಮಾಹಿತಿ ಇಲ್ಲದೇ ವರ್ಗಾವಣೆ ಆಗಿದೆಯಾ?ಆಗಿದ್ರೆ ನೀವೂ ಹೆಲ್ಪ್ ಲೆಸ್ ಹಾ’ ಸಚಿವರೇ.?ಇದಕ್ಕೆ ಎಸ್.ಟಿ.ಸೋಮಶೇಖರ್ ಅವರೇ ಉತ್ತರ ಕೊಡಬೇಕು?
ಎಂದು ಉಸ್ತುವಾರಿ ಸಚಿವ ಸೋಮಶೇಖರ್‌ಗೆ ಸಾರಾ ಮಹೇಶ್ ಪ್ರಶ್ನೆ ಮಾಡಿದ್ದಾರೆ.


Share