ಶ್ರೀ ಗುರು ಗೀತ – ಭಾಗ 15
ಗುರು ಆರಾಧನೆಯನ್ನು ಏಕೆ ಮಾಡಬೇಕು ಎಂಬುದನ್ನು ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ. ಬನ್ನಿ ಏಕಾಗ್ರತೆ ಕೇಳೋಣ.
ಯಾರು ತನ್ನ ಮನಸ್ಸಿನಲ್ಲಿ ಸೇರಿ ಚೈತನ್ಯವಾಗಿದ್ದಾರೋ ಅಂತಹ ಗುರುವಿಗೆ ನಮಸ್ಕಾರ. ಜಡವನ್ನು ಸಹ ಪರಮ ಚೈತನ್ಯವಾಗಿ ಮಾಡುವ ಗುರುವಿಗೆ ನಮಸ್ಕಾರ.
ಯಾರ ಬಗ್ಗೆ ಜ್ಞಾನ ಉಂಟಾದರೆ ಭೇದ ಬುದ್ಧಿ ನಾಶವಾಗಿ ಕೇವಲ ಸತ್ವ ಸ್ವರೂಪ ವಾಗಿ ಉಳಿಯುತ್ತದೋ ಅಂತಹ ಗುರುವಿಗೆ ನಮಸ್ಕಾರ.
ಯಾರು ಮಾಯಾ ರೂಪವಾಗಿ ಕಾಣುತ್ತಿದ್ದರೂ ಕಾರ್ಯಾಕಾರಣ ರೂಪಕ್ಕೆ ಅತೀತವಾಗಿರುವಂತಹ ಗುರುವಿಗೆ ನಮಸ್ಕಾರ.
ಜ್ಞಾನ ಸ್ವರೂಪಿ, ಶಕ್ತಿ ಸ್ವರೂಪಿ, ಭುಕ್ತಿ ಮುಕ್ತಿದಾತನೂ ಆದ ಗುರುವಿಗೆ ನಮಸ್ಕಾರ.
ಜ್ಞಾನ ವೆಂಬಅಗ್ನಿ ಪ್ರಭಾವ ದಿಂದ ಜನ್ಮಾಂತರದಿಂದ ಅಂಟಿಕೊಂಡಿರುವ ಶಿಷ್ಯನ ಪಾಪವನ್ನು ಭಸ್ಮ ಮಾಡುವ ಗುರುವಿಗೆ ನಮಸ್ಕಾರ.
ಗುರುವನ್ನು ಮೀರಿದ ತತ್ವವಿಲ್ಲ, ತಪಸ್ಸಿಲ್ಲ, ಜ್ಞಾನ ವಿಲ್ಲ. ಅಂತಹ ಗುರುವಿಗೆ ನಮಸ್ಕಾರ.
ವಿಷಮ ಸ್ಥಿತಿಗಳು ಉಂಟಾದಾಗ ಗುರುವೊಬ್ಬರೇ ನಿಜವಾದ ಬಂಧು. ಅಂತಹ ಗುರುವಿಗೆ ನಮಸ್ಕಾರ.
ಗುರುವು ವಿಶ್ವ ರೂಪನೂ ಹೌದು, ರೂಪ ರಹಿತನೂ ಹೌದು ಎಂಬುದನ್ನು ಗಣೇಶ-ಸುಬ್ರಹ್ಮಣ್ಯ ರ ಕಥೆಯೊಂದಿಗೆ ವಿವರಣೆ ನೀಡಿದ್ದಾರೆ ಶ್ರೀ ಸ್ವಾಮೀಜಿ ಯವರು.
ಜೈಗುರುದತ್ತ