ಆಮ್ ಆದ್ಮಿ ಪಕ್ಷ: ಕರ್ನಾಟಕದ ನೂತನ ಉಸ್ತುವಾರಿಯಾಗಿ ಕಪಿಲ್ ಭಾರದ್ವಾಜ್ ನೇಮಕ.

ಆಮ್ ಆದ್ಮಿ ಪಕ್ಷ ಕರ್ನಾಟಕದ ನೂತನ ಉಸ್ತುವಾರಿಯಾಗಿ ಕಪಿಲ್ ಭಾರದ್ವಾಜ್ ನೇಮಕ
ದೆಹಲಿ 30.ಚುನಾವಣಾ ವಿಜಯದ ನಂತರ ಆಮ್ ಆದ್ಮಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಹೊರಟಿದ್ದು, ಇದರ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿನ ಘಟಕಗಳಲ್ಲಿ ಸಂಘಟನೆಯ ಪುನರ್ರಚನೆ ಮಾಡುತ್ತಿದೆ. ಅಂತೆಯೇ ಆಮ್ ಆದ್ಮಿ ಪಕ್ಷ ಕರ್ನಾಟಕದ ನೂತನ ರಾಜ್ಯ ಉಸ್ತುವಾರಿಯಾಗಿ ಆಮ್ ಆದ್ಮಿ ಪಕ್ಷದ ಭರವಸೆಯ ಯುವ ನಾಯಕ, ಚುನಾವಣಾ ತಂತ್ರಜ್ಞ, ದೆಹಲಿಯ ಗ್ರಾಹಕ ಸಹಕಾರ ಸಂಘದ ಅಧ್ಯಕ್ಷರಾದ ಕಪಿಲ್ ಭಾರದ್ವಾಜರನ್ನು ಪಕ್ಷದ ರಾಷ್ಟೀಯ ವ್ಯವಹಾರಗಳ ಸಮಿತಿ ನೇಮಿಸಿದೆ.
ಕಪಿಲ್ ಭಾರದ್ವಾಜ್ ರವರು ಯುಎಸ್ಎಯಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ಕೆಲವು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ, ತಮ್ಮದೇ ಆದ ಸಾಫ್ಟ್ವೇರ್ ಉದ್ಯಮವನ್ನು ಆರಂಭಿಸಿದ್ದಾರೆ. ೨೦೧೫ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಸಮಿತಿ ಹಾಗೂ ಬೂತ್ ಮ್ಯಾನೇಜ್ಮೆಂಟ್ ನ ಉಸ್ತುವಾರಿಯಾಗಿದ್ದರು. ನಂತರ ೨೦೧೭ ಪಂಜಾಬ್ ವಿಧಾನಸಭೆ ಚುನಾವಣೆ ಹಾಗೂ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು. ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮತ್ತು ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಪಕ್ಷದ ಗೆಲುವಿನ ರೂವಾರಿಯಾಗಿದ್ದರು.
ಕಪಿಲ್ ಭಾರದ್ವಾಜ್ ರವರ ನೇಮಕವನ್ನು ಹರ್ಷದಿಂದ ಸ್ವಾಗತಿಸಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು, ದೆಹಲಿಯ ಜನಪರ ಆಡಳಿತದ ಮಾದರಿಯು ನಮ್ಮ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಈ ಕನಸು ಕೈಗೂಡಲು ಕಪಿಲ್ ಭಾರದ್ವಾಜ್ ಜೊತೆಗೆ ಪಕ್ಷವು ಶ್ರಮಿಸಲಿದೆ ಎಂದು ಹಾರೈಸಿದರು.
ನೇಮಕಾತಿಯ ನಂತರ ಕನ್ನಡಲ್ಲೇ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ ಕಪಿಲ್, ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಆಡಳಿತದಲ್ಲಿ ಮತ್ತು ಕೋವಿಡ್ ೧೯ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಕೇವಲ ಲೂಟಿಯೊಂದೇ ಗುರಿಯಾಗಿಟ್ಟುಕೊಂಡಿರುವ ಈ ಸರಕಾರವು ಕರ್ನಾಟಕದ ಹೆಸರನ್ನು ಹಾಳುಗೆಡವುತ್ತಿದೆ ಎಂದರು. ಈ ಬಾರಿ ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ದರ್ಶನ್ ಜೈನ

Kapil Bhardwaj named as the new in-charge For AAP Karnataka
After the spectacular electoral win in Delhi, AAP now strives to make an impact at the national level and has started restructuring its state units. In this backdrop, AAP’s Committee on National Affairs, has appointed Kapil Bhardwaj, the party’s trusted youth leader, election strategist, and chairman of the Delhi Consumers’ Cooperative (GNCT -Delhi) as Karnataka’s new in-charge
Kapil Bhardwaj completed his education in USA and worked in a few multi-national Companies and then set up his own business. In the run-up to the 2015 Vidhanasabha elections, he was campaign manager as well as in charge of booth management. He was also a key member of the election think-tank for the 2017 Punjab Vidhanasabha elections and Delhi MCD elections. He held similar responsibilities for the Delhi Legislative Assembly election in February
AAP Karnataka Convener Prithvi Reddy welcomed this decision wholeheartedly and emphasized the need to replicate Delhi’s citizen friendly model of governance in Karnataka. He said the state unit was committed to make this dream a reality with the guidance of Kapil Bhardwaj.
Immediately after the announcement of this appointment, Kapil Bhardwaj tweeted in Kannada and expressed his gratitude for being given this responsibility and said he was happy to take it up. Speaking to the party workers, he highlighted the abject failure of the BJP state government in managing the Covid 19 crisis. He accused the party of being solely focused on profiteering during the crisis and ruining the reputation of the state. He expressed confidence that AAP will win the BBMP elections this time, having focused all its efforts and committing to do what it takes to secure this win and serve the citizens of the state.

With thanks,
Darshan Jain
State Joint Secretary
Aam Aadmi Party Karnataka