ಆಯುರ್ವೇದ ಮಂಡಳಿಗೆ ಡಾಕ್ಟರ್ ಲೇಖನಾ ಪಂಡಿತ್ ನೇಮಕ

Share

 

*ಆಯುರ್ವೇದ ಮಂಡಳಿಗೆ ಡಾಕ್ಟರ್ ಲೇಖನ್ ಪಂಡಿತ್ ನೇಮಕ*

ಮೈಸೂರು: ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿ ಆಯುರ್ವೇದ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ಗುಂಡುರಾವ್ ನಗರ ನಿವಾಸಿ ಹಾಗೂ ಜೆಎಸ್ಎಸ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಡಾಕ್ಟರ್ ಲೇಖನ ಪಂಡಿತ್ ಅವರು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯಮಂಡಳಿಯ ನಾಮನಿರ್ದೇಶಕ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಆಯುರ್ವೇದ ವೈದ್ಯಕೀಯ ಪದ್ಧತಿಯಡಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ. ಡಾ. ಲೇಖನ ಪಂಡಿತ ಅವರ ಸೇವೆ ಮತ್ತು ಅನುಭವ ಪರಿಗಣಿಸಿ ಸರ್ಕಾರ ಅವರನ್ನು ಮಂಡಳಿಯ ನಾಮ ನಿರ್ದೇಶಕ ಸದಸ್ಯರಾಗಿ ನೇಮಕ ಮಾಡಿದೆ. ಈ ನೇಮಕಾತಿಯಿಂದ ಆಯುರ್ವೇದ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ ಎಂದು ಲೇಖನ್ ಪಂಡಿತ್ ಹರ್ಷ ವ್ಯಕ್ತಪಡಿಸಿದ್ದಾರೆ.


Share