ಸರ್ಕಾರಿ ನೌಕರರೆಂದು ಪರಿಗಣಿಸಿ’
ದೇಶಕ್ಕೆ ಕೊರೊನಾ ಕಾಲಿಟ್ಟಾಗಿನಿಂದ ವಿಶ್ರಾಂತಿ ಪಡೆಯದೆ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಸರ್ಕಾರಕ್ಕೆ ಮನವಿ
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ರೋಗ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯವಾದುದ್ದು. ಸರ್ಕಾರ ಈ ಕೂಡಲೇ ಇವರ ಸೇವೆಗಳನ್ನು ಗುರುತಿಸಿ ಸರ್ಕಾರದ ಹಲವು ಸವಲತ್ತುಗಳನ್ನು ನೀಡಬೇಕು ,
ಮುಖ್ಯಮಂತ್ರಿಗಳು ಈ ಕುರಿತು ಗಂಭಿರ ಚಿಂತನೆ ನಡೆಸಿ ಆಶಾ ಕಾರ್ಯಕರ್ತೆರನ್ನು ಕಾಯಂಗೊಳಿಸಬೇಕು, ಮಾಸಿಕ ಕನಿಷ್ಟ ₹15 ಸಾವಿರ ವೇತನ ನೀಡಬೇಕು, ₹50 ಲಕ್ಷ ಜೀವ ವಿಮೆ ಸೌಲಭ್ಯ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು
ಇಂತಿ
ವಿಕ್ರಂ ಅಯ್ಯಂಗಾರ್ ಸಾಮಾಜಿಕ ಹೋರಾಟಗಾರರು