ಆಹಾರ ಪದಾರ್ಥ ವಿತರಣೆ

43ನೇ ದಿನದ ಕೋವಿಡ್ ಸೇವಾ ಕಾರ್ಯ -ಎಂ ಕೆ ಸೋಮಶೇಖರ್. ಕುಂಬಾರರು ಹಾಗೂ ನಯನಕ್ಷತ್ರಿಯ ಸಮಾಜದ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ – ಎಂ ಕೆ ಸೋಮಶೇಖರ್.
ಕೋವಿಡ್ 19 ಹಿನ್ನೆಲೆ ಕುಂಬಾರಿಕೆ ವಸ್ತುಗಳಾದ ಮಣ್ಣಿನ ಮಡಿಕೆ,ಕುಡಿಕೆ,ದೀಪ,ವಿಗ್ರಹಗಳು ಮಾರಾಟವಾಗದೆ ಹಾಗೂ ನಯನಕ್ಷತ್ರಿಯ ಸಮಾಜದ ಬಂಧುಗಳಿಗೆ ಅಂಗಡಿಗಳನ್ನು ತೆರೆಯಲಾಗದೆ ಜೀವನ ನಿರ್ವಹಣೆಯೂ ಕಷ್ಟ ಎಂಬುದನ್ನ ಅರಿತ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ನೂರಾರು ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.ಈ ಸಂಧರ್ಭದಲ್ಲಿ ಕುಂಬಾರ ಸಮಾಜದ ನಂಜುಂಡ,ನಯನ ಕ್ಷತ್ರಿಯ ಸಮಾಜದ ಎಂ ರಾಜಣ್ಣ,ವಿಶ್ವ,ರಮೇಶ್ ಮತ್ತಿತರರು ಉಪಸ್ಥಿತರಿದ್ದರು.