ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ಕಾರ್ಯಕ್ರಮ

Share

 

 

ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ಕಾರ್ಯಕ್ರಮವು ವಿಶ್ವದಾದ್ಯಂತ ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ವಿಜ್ಞಾನ ಆಸಕ್ತ ಜನರು ಸೇರಿ ಮಾಡುವ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಉದ್ದೇಶ ವಿಜ್ಞಾನವನ್ನು ಸಂಭ್ರಮಿಸುವುದು ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದಾಗಿದೆ. ಈ ಕಾರ್ಯಕ್ರಮದ ರ್‍ಯಾಲಿಯನ್ನು ಮೈಸೂರಿನ ವಿಜ್ಞಾನ ಆಸಕ್ತರು ಕೂಡ ಏಕಲವ್ಯ ವೃತ್ತದಿಂದ ಗನ್ ಹೌಸ್ ಹತ್ತಿರವಿರುವ ಕುವೆಂಪು ವನದವರೆಗೆ ರ್‍ಯಾಲಿಯ ಮುಖಾಂತರ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಮಳೆಯ ಕಾರಣದಿಂದ ಏಕಲವ್ಯ ವ್ರತದಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಳೆ ಇದ್ದರೂ ವಿದ್ಯಾರ್ಥಿಗಳು ಹಾಗೂ ಮೈಸೂರಿನ ವಿಜ್ಞಾನ ಆಸಕ್ತ ಜನರು ತುಂಬಾ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಜಿ ಉಪಕುಲ ಕುಲಪತಿಗಳಾದ ಪ್ರೊಫೆಸರ್ ವೆಂಕಟರಾಮಯ್ಯರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಪ್ರಸ್ತಾವಿಕವಾಗಿ ಮಾತನಾಡಿದ ಪ್ರೊಫೆಸರ್ ವೆಂಕಟರಮಾಯ್ಯರವರು ವಿಜ್ಞಾನ ಮತ್ತು ತಂತ್ರಜ್ಞಾನ ದೇಶದಲ್ಲಿ ಬೆಳೆದಿದ್ದರೂ ಕೂಡ ಮೂಡನಂಬಿಕೆ ಕೂಡ ಹಾಗೇ ಉಳಿದಿರುವುದರಿಂದ ವಿಜ್ಞಾನವನ್ನು ಹೆಚ್ಚು ಪ್ರಚಾರ ಗೊಳಿಸಬೇಕು ಹಾಗೂ ಆ ನಿಟ್ಟಿನಲ್ಲಿ ಇಂಡಿಯ ಮಾರ್ಚ್ ಫಾರ್ ಸೈನ್ಸ್ ತುಂಬಾ ಪ್ರಮುಖವಾಗುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಹಾಗೂ ಯುವಕರು ವೈಜ್ಞಾನಿಕ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ನಿರಂಜನ್ ಹಿರೇಮಠ್ ರವರು ಮಾರ್ಚ್ ಫಾರ್ ಸೈನ್ಸ್ ಕಾರ್ಯಕ್ರಮದ ಕುರಿತು ಮಾತನಾಡಿದರು. ವಿಜ್ಞಾನವನ್ನು ಉಳಿಸಲು ಹಾಗೂ ವಿಜ್ಞಾನಕ್ಕೆ ಹೆಚ್ಚು ಪ್ರಚಾರ ಕೊಡಲು ಈ ರೀತಿಯ ಕಾರ್ಯಕ್ರಮಗಳು ತುಂಬಾ ಪ್ರಮುಖವಾಗುತ್ತವೆ ಎಂದು ಹೇಳಿದರು
BARC ನ . ನಿವೃತ್ತ ವಿಜ್ಞಾನಿಯಾದ ಶಿವಪ್ರಕಾಶ್ ರವರು ಸಸ್ಯಗಳು ಪಕ್ಷಿಗಳ ಕುರಿತು ಒಟ್ಟಾರೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಹಾಗೂ ಸಂರಕ್ಷಣೆಯಲ್ಲಿ ಜನರ ಜವಾಬ್ದಾರಿ ಕುರಿತು ಮಾತನಾಡಿದರು.
ದೀಪ್ತಿ.ಬಿ,ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ರಾಜ್ಯ ಕಾರ್ಯದರ್ಶಿಗಳು ಸಮಾಜದಲ್ಲಿ ವೈಜ್ಞಾನಿಕ ಮನೋಭಾವದ ಮಹತ್ವದ ಕುರಿತು ಮಾತನಾಡಿದರು. ವೈಜ್ಞಾನಿಕ ಮನೋಭಾವವನ್ನು ತರಗತಿಗಳು ಮತ್ತು ಪ್ರಯೋಗಾಲಯಗಳಲ್ಲಿ ಮಾತ್ರವಲ್ಲದೆ ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡಬೇಕು ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ತರಗತಿಗಳು ಮತ್ತು ಮನೆಯಲ್ಲಿ “ಏಕೆ” ಮತ್ತು “ಹೇಗೆ” ಎಂದು ಕೇಳಲು ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಸಶಕ್ತ ಸಮಾಜ ಕಟ್ಟಲು ಮತ್ತು ಪ್ರಗತಿ ಕಡೆಗೆ ಸಮಾಜವನ್ನು ಕೊಂಡೊಯ್ಯಲು ಅವರಲ್ಲಿ ಸದೃಢ ಮನಸ್ಥಿತಿ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಪ್ರಚಾರಕರಾದ ಶಶಿಧರ್ ಡೋಂಗ್ರೆ , ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಶಂಕರ್, ಶ್ರೀ ಆನಂದ್ ರಾಜ್ ಅಧ್ಯಕ್ಷರು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ, ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Share