ಇಂದಿನ ಮೈಸೂರು ಹೈಲೈಟ್ಸ್

Share

ಮನೆಯಿಂದ ಹೊರಗೆ ಹೋಗಬೇಕಾದ್ರೆ ಮಾಸ್ಕ್ ಹಾಕದಿದ್ದರೆ ದಂಡ‌ಕಟ್ಟಬೇಕಾಗುತ್ತೆ ಜೋಕೆ…!

ಮಾಸ್ಕ್ ಬಳಸದೇ‌ ಸಂಚರಿಸುತ್ರಿದ್ದ ಸಾರ್ವಜನಿಕರಿಗೆ ಸರ್ಕಲ್ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ ರವರಿಂದ ಬಿತ್ತು ದಂಡ

‌ದೇಶಾದ್ಯಂತ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಇದನ್ನು ತಡೆಗಟ್ಟಲು ಸಾರ್ವಜನಿಕರಿಗೆ ಪೋಲಿಸ್ ಇಲಾಖೆ ಕಟ್ಟು ನಿಟ್ಟಾಗಿ ಯಾವುದೇ .ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರು ಮಾಸ್ಕ್ ಹಾಕುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು .ಆದರಂತೆ ಸಾರ್ವಜನನಿಕರು ರಸ್ತೆಯಲ್ಲಿ ಸಂಚರಿಸಬೇಕಾದರೆ ಮಾಸ್ಕ್ ಬಳಸಬೇಕು ಎಂದು ತಿಳಿಸಿದ್ದು. ಬಳಸದಿದ್ದಲ್ಲಿ ಪ್ರತಿಯೊಬ್ಬರಿಗೆ ದಂಡ ಹಾಕುವಂತೆ ಆದೇಶ ಹೊರಡಿಸಿದ್ದಾರೆ .ಅದರಂತೆ ಹೆಚ್ ಡಿ‌ ಕೋಟೆ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿರವರು ಮಿಂಚಿನ ಕಾರ್ಯಚರಣೆಯನ್ನು ಆರಂಭಿಸಿ ಮಾಸ್ಕ್ ಬಳಸದೇ ಇದ್ದ ಸಾರ್ವಜನಿಕರಿಂದ ದಂಡ ವಸೂಲಿಯನ್ನು ಮಾಡಿದರು..ಇನ್ನು ಕಾರ್ಯಚರಣೆಯಲ್ಲಿ ನಂದೀಶ್ ರೇವಣ್ಣ ಶಿವಕುಮಾರ್ ಸುರೇಶ್ ಇನ್ನಿತರು ಭಾಗಿಯಾಗಿದ್ದರು..
…….ಮೈಸೂರು ಕಾಂಗರು ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಗರದ ಕಾಳಿದಾಸ ರಸ್ತೆಯ ವಿಜಯನಗರದ ಒಂದನೇ ಹಂತದಲ್ಲಿ ಕಾರ್ಯ ಪ್ರಾರಂಭಿಸಲಿದೆ ಎಂದು ಡಾಕ್ಟರ್ ಸುಬ್ಬಯ್ಯ ಅವರು ತಿಳಿಸಿದರು ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಎರಡನೇ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಹೊಸದಾಗಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಪ್ರಸವಪೂರ್ವ ಸ್ಕ್ಯಾನ್ಗಳು ಮತ್ತು ಬ್ರೂಣ ಔಷಧಿ ಹೆಚ್ಚಿನ ಅಪಾಯದ ಗರ್ಭಧಾರಣೆ ಮತ್ತು ಹೆರಿಗೆ ಗಳು ಇತ್ಯಾದಿ ಸೇವೆ ಲಭ್ಯವಿರುತ್ತದೆ ಎಂದು ವಿವರ ನೀಡಿದರು.
……. ಮೈಸೂರು ನಗರದ ಜಿಲ್ಲಾಧಿಕಾರಿ ವರ್ಗಾವಣೆ ವಿರೋಧಿಸಿ ನಾಳೆ ಪುರಭವನದ ಮುಂದೆ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
…… ಉತ್ತರಪ್ರದೇಶದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಸಂಬಂಧ ಎಐಡಿಎಸ್ಒ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
….. ಜಿಲ್ಲಾಧಿಕಾರಿ ಶರತ್ ಅವರನ್ನು ಮೈಸೂರಿನಿಂದ ವರ್ಗಾವಣೆ ವಿರೋಧಿಸಿ ಕನ್ನಡಪರ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
…ಮೈಸೂರು ಮೈಸೂರು-ನಂಜನಗೂಡು ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಜನ ಆರೋಪಿಯನ್ನು ಬಂಧಿಸಿ 86 ಕೆಜಿ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲೆಯ ಎಸ್ಪಿ ಯಶ್ವಂತ್ ತಿಳಿಸಿದರು
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಆಂಧ್ರಪ್ರದೇಶದ ರಾಜ್ಯದಿಂದ ಕೇರಳ ರಾಜ್ಯಕ್ಕೆ ಬೆಂಗಳೂರು ಮೈಸೂರು ನಂಜನಗೂಡು ಮಾರ್ಗವಾಗಿ ಬುಲೆರೋ ವಾಹನದಲ್ಲಿ ತೆರಳುತ್ತಿದ್ದರು ಎಂದು ಅವರು ತಿಳಿಸಿದರು.


Share