ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಚಳುವಳಿ ಹಮಾಸ್ ಶನಿವಾರ ಮುಂಜಾನೆ ಇಸ್ರೇಲ್ ಮೇಲೆ ತನ್ನ ಅತಿದೊಡ್ಡ ದಾಳಿಯನ್ನು ಪ್ರಾರಂಭಿಸಿದೆ. ಗಾಜಾದಿಂದ ಸುಮಾರು 5 ಸಾವಿರ ರಾಕೆಟ್‌ಗಳ ಸುರಿಮಳೆ ಗೈದು, ಗಡಿಯುದ್ದಕ್ಕೂ ಹೋರಾಟಗಾರರನ್ನು ಕಳುಹಿಸಿದೆ ಎಂದು ವರದಿಯಾಗಿದೆ. ಇಸ್ರೇಲ್ ನ ಕಟ್ಟಡಗಳ ಮೇಲೆ ದಾಳಿ ನಡೆಸಿದೆ.
ಇಸ್ರೇಲ್ ಯುದ್ಧದ ತಳಹದಿಯಲ್ಲಿದೆ ಮತ್ತು ಗಾಜಾದಲ್ಲಿ ಹಮಾಸ್ ಗುರಿಗಳ ವಿರುದ್ಧ ತನ್ನದೇ ಆದ ದಾಳಿಯನ್ನು ಪ್ರಾರಂಭಿಸಿದೆ, ದಕ್ಷಿಣ ಇಸ್ರೇಲ್‌ನಲ್ಲಿ ಪ್ಯಾಲೇಸ್ಟಿನಿಯನ್ ಹೋರಾಟಗಾರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯನ್ನು ಇಸ್ರೇಲಿ ಮಾದ್ಯಮಗಳು ವರದಿ ಮಾಡಿದೆ.
30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಇಸ್ರೇಲ್ ವಿದೇಶಾಂಗ ಸಚಿವರು ತೀವ್ರವಾಗಿ ಖಂಡಿಸಿ ತಾವು ಯುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಮೈಸೂರು;ಮುಂದಿನ ಆಲೋಚನೆ ಇಲ್ಲದೆ ನೀತಿಗಳನ್ನು ಜಾರಿಗೊಳಿಸ ಹೊರಟ ಸರ್ಕಾರದ ನಿಲುವುಗಳಿಗೆ ವಿದ್ಯಾರ್ಥಿಗಳು ಬಲಿಪಶುವಾಗುತ್ತಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತು ಜೆಎಸ್ಎಸ್ ಮಹಿಳಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ...