ಉಚಿತ ಕ್ಯಾಬ್ ವ್ಯವಸ್ಥೆಗೆ ಶಾಸಕ ರಾಮದಾಸ್ ಚಾಲನೆ

480
Shareಕರೋನಾ ಮಹಾಮಾರಿ ಇಡೀ ವಿಶ್ವವನ್ನು ಆಕ್ರಮಿಸಿ ಎಲ್ಲಾ ದೇಶಗಳಲ್ಲೂ ಕೂಡಾ ತನ್ನದೇ ಆದಂತಹ ದೊಡ್ಡ ಆಕ್ರಮಣವನ್ನು ಮಾಡಿದ್ದು, ಇದೇ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಮೈಸೂರು ಬಂದು, ಅತಿ ಹೆಚ್ಚು ಜನ ಕರೋನಾ ಸೋಂಕಿತರು ಮೈಸೂರಿನಲ್ಲಿದ್ದಾರೆ ಎಂಬ ಭಯದ ವಾತಾವರಣ ನಿರ್ಮಾಣ ಮಾಡಿತ್ತು. ವಿಶೇಷವಾಗಿ ಎಲ್ಲರೂ ಮನೆಯಲ್ಲಿರಬೇಕು ಎಂಬ ಸಂದೇಶವನ್ನು ಪಾಲನೆ ಮಾಡುತ್ತಿರುವ ಸಂದರ್ಭದಲ್ಲಿ ಸಹಸ್ರಾರು ಜನರು ಕ್ವಾರಂಟೈನ್ ನಲ್ಲಿದ್ದು ಇವರನ್ನು ವೈದ್ಯರು, ಅರೆ ವೈದ್ಯರು, ಆಶಾ ಕಾರ್ಯಕರ್ತರು, ನಗರಪಾಲಿಕೆ ಅಧಿಕಾರಿಗಳು, ರೋಗ ಹರಡದಂತೆ ನೊಡಿಕೊಂಡಿದ್ದರೆ ಬಾರ್ಡರ್ ನಲ್ಲಿ ಯೋಧರು ಶತ್ರು ಸೈನ್ಯವನ್ನು ನಿರ್ಣಾಮ ಮಾಡುವ ರೀತಿಯಲ್ಲಿ ಮೈಸೂರಿನಲ್ಲಿ ಕರೋನ ವೈರಸ್ ಹರಡದಂತೆ ನಿರ್ಣಾಮ ಮಾಡುವಲ್ಲಿ ನಿರಂತರ ಹೋರಾಡಿದ ಪೊಲೀಸ್ ಸಿಬ್ಬಂದಿಗ ಹೊರಗಡೆ ಸಾರ್ವಜನಿಕರು ಭೀತಿಯಿಲ್ಲದೇ ಓಡಾಡಲು ಕಟ್ಟುನಿಟ್ಟಿನ ಕ್ರಮ ವಹಿಸಿ ನಿರಂತರ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿ ವರ್ಗದವರು 43 ದಿವಸಗಳ ಕಾಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ
ಮೈಸೂರಿನ ಸೇಫ್ ವ್ಹೀಲ್ಸ್ ಸಂಸ್ಥೆಯು ಮೈಸೂರು ನಗರದಲ್ಲಿ ಕರೋನ ವೈರಸ್ ಎನ್ನು ನಿಗ್ರಹಕ್ಕೆ ತರಲು ಹೋರಾಡಿದ ವೈದ್ಯರು, ಅರೆ ವೈದ್ಯರು, ಆಶಾ ಕಾರ್ಯಕರ್ತರು, ನಗರಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ವರ್ಗದವರುಗಳಿಗೆ COVID -19 ವಾರಿಯರ್ಸ್ ಎಂದು ಗುರುತಿಸಿ ಇವರಿಗೆ ಉಚಿತ ಕ್ಯಾಬ್ ವ್ಯವಸ್ಥೆಯನ್ನು ಮಾಡಿಕೊಡಲು ನಿರ್ಧಿಸಿರುತ್ತಾರೆ. ಈ ಸೇವೆಯನ್ನುಕೃಷ್ಣರಾಜ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ಚಾಲನೆಗೊಳಿಸಿದರು.
ಇದೇ ಸಂದರ್ಭದಲ್ಲಿ ಈ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಿದ ಸೇಫ್ ವ್ಹೀಲ್ಸ್ ಸಂಸ್ಥೆಯ ಮಾಲೀಕರಾದ ಬಿ.ಎಸ್.ಪ್ರಶಾಂತ್ ರವರು ಮಾತನಾಡಿ ದಿನಾಂಕ 25.05.2020 ರಿಂದ 31.05.2020 ರ ತನಕ ಮೈಸೂರಿನ COVID -19 ವಾರಿಯರ್ಸ್ ಗಳಿಗೆ ರಾಜ್ಯಧ್ಯಂತ ಯಾವುದೇ ಊರಿಗೆ ಹೋಗಿ ಬರಲು ತಮ್ಮ ಸಂಸ್ಥೆಯ ಕಾರುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದು ಕೇವಲ ಇಂಧನವನ್ನು ಮಾತ್ರ ಭರಿಸಬೇಕಾಗಿರುತ್ತದೆ. COVID -19 ವಾರಿಯರ್ಸ್ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದರು. ಕಾರಿನ ಜೊತೆ ನಮ್ಮ ವಾಹನ ಚಾಲಕರೆ ಬರಲಿದ್ದು ಈ ಯೋಜನೆ 31.05.2020 ರ ತನಕ ಮಾತ್ರ ಜಾರಿಯಲ್ಲಿ ಇರುತ್ತದೆ. ಹಗಲಿರುಳು ತಮ್ಮ ಜೀವ ಲೆಕ್ಕಿಸದೇ ಕರೋನ ವಿರುದ್ದ ಹೋರಾಡಿದ COVID -19 ವಾರಿಯರ್ಸ್ ಗಳಿಗೆ ಎನೇ ಸೇವೆ ಮಾಡಿದರು ಅದು ಕಡಿಮೆಯೇ ಆಗುತ್ತದೆ ಆದರು ನಮ್ಮ ಸಂಸ್ಥೆ COVID -19 ವಾರಿಯರ್ಸ್ ಗಳಿಗೆ ಸೇವೆ ಮಾಡಲು ಈ ಯೋಜನೆ ಒಂದು ಸಣ್ಣ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಶಾಸಕರಾದ ಎಸ್.ಎ.ರಾಮದಾಸ್ ರವರು ಮಾತನಾಡಿ ಸದಾ ಸಮಾಜದ ಏಳಿಗೆಗಾಗಿ ಒಂದಲ್ಲಾ ಒಂದು ರೀತಿಯಲ್ಲಿ ವಿಬಿನ್ನವಾಗಿ ಚಿಂತನೆ ನಡೆಸುವ ಸಹೋದರ ಪ್ರಶಾಂತ್ ರವರು ಹೊಸ ಯೋಜನೆ ರೂಪಿಸಿದ್ದು ಈ ಯೋಜನೆಯನ್ನು COVID -19 ವಾರಿಯರ್ಸ್ ಗಳು ಸದುಪಯೋಗ ಪಡೆದುಕೊಳ್ಳಬೇಕು.
*#ಸರಸ್ವತಿ ಪುರಂ ನಲ್ಲಿ ಇರುವ ಸೇಫ್ ವ್ಹೀಲ್ಸ್ ಕಛೇರಿಯಲ್ಲಿ 1 ವಾರಗಳ ಕಾಲ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಬಿಡಡುಗಡೆಗೊಳಿಸಿರುವ ಕ್ಯಾಬ್ ವಾಹನ ಚಾಲಕರಿಗೆ ಮತ್ತು ಆಟೋ ಚಾಲಕರಿಗೆ ಸೇವ ಸಿಂಧು ವೆಬ್ ಸೈಟ್ ಮೂಲಕ ಸೂಕ್ತ ದಾಖಲೆಗಳೋಂದಿಗೆ (ಅಂದರೆ ವಾಹನ ಪರನಾಗಿ, ಆರ್ ಸಿ ಕಾಪಿ, ಆದಾರ್ ಕಾರ್ಡ್, ಬ್ಯಾಡ್ಜ್ ನಂಬರ್) ಅರ್ಜಿ ಸಲ್ಲಿಸಬಹುದಾಗಿದ್ದು ಚಾಲಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು


Share