ಉಪ್ಪಾರ ರಿಗೆ ಎಂಎಲ್ಸಿ ಸ್ಥಾನ ನೀಡಲು ಆಗ್ರಹ

Share

ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜವು 35ರಿಂದ 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಮೊದಲಿನಿಂದಲೂ ಈ ಸಮಾಜವು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಮೈಸೂರು ಜಿಲ್ಲಾ ಸಂಚಾಲಕ ಮಹಾದೇವ ಕಾಟನಾಲು ಅವರು ತಿಳಿಸಿದರು
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಭಾರತೀಯ ಜನತಾಪಕ್ಷದವರು ನಮ್ಮ ಶೋಷಿತ ಸಮಾಜಕ್ಕೆ ಈಗಲಾದರೂ ಉಪ್ಪಾರ ಸಮಾಜದ ಮುಖ್ಯವಾಹಿನಿಗೆ ಬರಲು ವಿಧಾನಪರಿಷತ್ ಮತ್ತು ಉಪ್ಪಾರ ನಿಗಮ ಮಂಡಳಿ ಅಲ್ಲದೆ ಇನ್ನಿತರ ನಿಗಮಗಳಿಗೆ ಭಾರತೀಯ ಜನತಾ ಪಕ್ಷಕ್ಕೆ ದುಡಿದ ಉಪ್ಪಾರ ಸಮಾಜದ ಮುಖಂಡರನ್ನು ಗುರುತಿಸಿ ನೀಡುವುದರ ಮೂಲಕ ಸಮಾಜವನ್ನು ರಾಜಕೀಯವಾಗಿ ಗುರುತಿಸಲು ಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.


Share