ಮೈಸೂರು:
ರಾಷ್ಟ್ರದ ಜನತೆ ಈಗಾಗಲೇ ಕೊರೋನಾ ಎಂಬ ಮಹಾಮಾರಿ ಇಂದ ತತ್ತರಿಸಿದ್ದು ದಿನನಿತ್ಯದ ಜೀವನ ನಡೆಸಲು ಕಷ್ಟಕರವಾಗಿದೆ, ಇಂತಹ ಸಂದರ್ಭದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ತೈಲ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೈಸೂರು ಕನ್ನಡ ವೇದಿಕೆಯವರು ಪ್ರತಿಭಟನೆ ನಡೆಸಿದರು .ಸಾಮಾನ್ಯ ಜನರಿಗೆ ಆರ್ಥಿಕ ಹೊರೆಯಾಗಿರುವ ತೈಲ ಬೆಲೆಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿ ತೈಲ ಬೆಲೆಯನ್ನು ಕಡಿಮೆ ಮಾಡುವ ಮೂಲಕ ನಾಗರೀಕರ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು, ಎಂದು ಸರ್ಕಾರಕ್ಕೆ ವೇದಿಕೆಯಿಂದ ಹಿಂ ಮನವಿ ಮಾಡಲಾಗಿದೆ. ವೇದಿಕೆಯ ಅಧ್ಯಕ್ಷ ಎಸ್ ಬಾಲಕೃಷ್ಣ ಅವರು ಇಂದು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು ಸಿದ್ದೇಗೌಡ, ಗುರುಬಸಪ್ಪ ,ಪ್ಯಾಲೇಸ್ ಬಾಬು ,ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.