ಊಹಾಪೋಹಕ್ಕೆ ತೆರೆ ಎಳೆದ ಸಂಸದೆ ಸುಮಲತ

Share

 ಮಂಡ್ಯ ಸಂಸದೆ ಸುಮಲತಾ ಅವರು ತಾವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ  ತಮ್ಮ ಸ್ಪಷ್ಟ ನಿರ್ಧಾರ  ತಿಳಿಸಿದ್ದಾರೆ. ತಮ್ಮ ಎಲ್ಲಾ ನಿರ್ಧಾರದ ಹಿಂದೆ ತಮ್ಮ ಕ್ಷೇತ್ರದ  ಜನರ ಹಿತ ಅಡಗಿದೆ ಎಂದು ತಿಳಿಸಿದ್ದಾರೆ. ಕಾಳಿಕಾಂಬ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ತಮ್ಮ ನಿರ್ಧಾರ ಘೋಷಿಸಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತಾವು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗ ಕೆಲವು ದಿನಗಳಿಂದ ಸುಮಲತಾ ರಾಜಕೀಯ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿತ್ತು. ಎಲ್ಲರ ಕುತೂಹಲಕ್ಕೂ ಇಂದು ಪತ್ರಿಕಾ ಗೋಷ್ಠಿ ಕರೆದು ತಮ್ಮ ನಿರ್ಧಾರ ತಿಳಿಸಿ ತೆರೆ ಎಳೆದಿದ್ದಾರೆ.
ಮಂಡ್ಯ ಚಾಮುಂಡೀ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ತಾವು ರಾಜಕೀಯಕ್ಕೆ ಪ್ರವೇಶಿಸಿ 3 ವರ್ಷ 8 ತಿಂಗಳು ಆಗಿದೆ. ಜನರ ಒತ್ತಾಯ ಹಾಗೂ ಅಂಬರೀಶ್ ಅಭಿಮಾನಿ ಮತದಾರರ ಗೌರವ ದಿಂದ ನಾನು ರಾಜಕೀಯ ಪ್ರವೇಶಿಸಿದೆ ಎಂದು ತಿಳಿಸಿದ್ದಾರೆ .

 

 


Share