ಎಂಪಿ ಆದ್ಯಾತ್ಮಿಕ ಅಂಗಳ,ಕೃಷ್ಣಾಷ್ಟಮಿ ದಿನದಿಂದ ಅರ್ಘ್ಯ ನೀಡಿದರೆ ಸಮಸ್ತ ಭೂಮಂಡಲ ದಾನ ಮಾಡಿದ ಪುಣ್ಯ ಬರುತ್ತದೆ.*

 

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ಕೃಷ್ಣಾಷ್ಟಮಿ ದಿನದಿಂದ ಅರ್ಘ್ಯ ನೀಡಿದರೆ ಸಮಸ್ತ ಭೂಮಂಡಲ ದಾನ ಮಾಡಿದ ಪುಣ್ಯ ಬರುತ್ತದೆ.*

ಭವಿಷ್ಯತ್ ಪುರಾಣ
ಕೃಷ್ಣಾಷ್ಟಮಿಯಂದು ಮಾಡಿದ ಉಪವಾಸ ಇಪ್ಪತ್ತು ಕೋಟಿ ಏಕಾದಶಿ ಮಾಡಿದ ಪುಣ್ಯಕ್ಕೆ ಸಮ. ಆದರೆ ಕೃಷ್ಣಾಷ್ಟಮಿ ಮಾತ್ರ ಉಪವಾಸ ಮಾಡಿ ಏಕಾದಶಿಯನ್ನು ಬಿಡುವ ಹಾಗಿಲ್ಲ. ಬಿಟ್ಟರೆ ಪಾಪ ಬರುತ್ತೆ.

ಪರಮಾತ್ಮನ ವಿವಿಧ ರೂಪಗಳಲ್ಲಿ , ಅವತಾರಗಳಲ್ಲಿ ಭೇದ ಚಿಂತನೆ ಮಾಡಬಾರದು. ಆದರೂ ಕಾಲರೀತ್ಯ ಕೃಷ್ಣಾವತಾರ ಕಲಿಯುಗಕ್ಕೆ ಹತ್ತಿರವಿರುವುದರಿಂದ , ಅರ್ಘ್ಯ ಸಮರ್ಪಿಸಿ ಉಪವಾಸ ಮಾಡಬೇಕು.

ಕೃಷ್ಣಾಷ್ಟಮಿ ದಿನ ಪೂರ್ತಿ ಉಪವಾಸ ಮಾಡತಕ್ಕದ್ದು. ರಾತ್ರಿ ಅರ್ಘ್ಯ ಕೊಟ್ಟು ಮೇಲೆ ಫಲಾಹಾರ ಮಾಡಬಹುದಾ ? ಇಲ್ಲ. ಅರ್ಘ್ಯ ನಂತರ ತೀರ್ಥ ಸ್ವೀಕರಿಸಿ, ಅಂಗಾರ ಅಕ್ಷತೆಯನ್ನು ಧರಿಸಿ, ಶಯನ ಮಾಡಬಹುದು.

ಕೃಷ್ಣಾರ್ಘವನ್ನು ಚಂದ್ರೋದಯ ನಂತರವೇ ಕೊಡತಕ್ಕದ್ದು.

ನೈವೇದ್ಯ ದೇವರಿಗೆ ಮಾತ್ರ. ರಮಾನೈವೇದ್ಯ, ವೈಶ್ವದೇವ, ಹಸ್ತೋದಕ, ಬ್ರಹ್ಮಯಜ್ಞ ಇವುಗಳನ್ನು ಮಾರನೇ ದಿನವೇ ಮಾಡತಕ್ಕದ್ದು. ಉತ್ತರಾದಿ ಮಠ ಮತ್ತು ರಾಯರ ಮಠದವರು ತಿಥ್ಯಾಂತೇ ರಮಾ ನೈವೇದ್ಯಾದಿಗಳ ಮಾಡಬೇಕು.

ಯೋಗಾಯ ಯೋಗಪತಯೇ ಯೋಗೇಶ್ವರಾಯ
ಯೋಗ ಸಂಭವಾಯ ಶ್ರೀ ಗೋವಿಂದಾಯ ನಮ: |

ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಂ |
ನಂದಗೋಪಂ ಯಶೋದಾಂ ಚ ಸುಭದ್ರಾಂ ತತ್ರ ಪೂಜಯೇತ್ |

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ|
ದೇವಕೀ ಸಹಿತ ಶ್ರೀ ಕೃಷ್ಣಾಯ ನಮ: |
ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ಸಮರ್ಪಯಾಮಿ |
(ಮೂರು ಸಾರಿ ಅರ್ಘ್ಯ ಕೊಡಬೇಕು)

ಕ್ಷೀರೋದಾರ್ಣವ ಸಂಬೂತ ಅತ್ರಿನೇತ್ರ ಸಮುದ್ಭವ |
ಗೃಹಾಣಾರ್ಘ್ಯಂ ಮಯಾ ದತ್ತ ರೋಹಿಣೀ ಸಹಿತಾಯ ಶಶಿನೇ ನಮ: |
ರೋಹಿಣೀಸಹಿತಾಯ ಚಂದ್ರಮಸೇ ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ |

ಶ್ರೀ ಕೃಷ್ಣ ಪರಮಾತ್ಮನ ದುಷ್ಟ ನಿಗ್ರಹ

ಪೂತನಾಜೀವಿತಹರ : ದುರ್ಗೆಯಿಂದ ಕೃಷ್ಣನು ಬೇರೊಂದು ಕಡೆ ಬೆಳೆಯುತ್ತಿರುವ ವಿಷಯವರಿತ ಕಂಸ ತನ್ನ ಭೃತ್ಯಳಾದ ಪೂತನೆಯನ್ನು ಕೃಷ್ಣ ಸಂಹಾರಾರ್ಥ ನಿಯೋಜಿಸಿದ. ಕಂಸನ ದಾಸಿ ಪೂತನಿ ಮಾಯೆಯಿಂದ ಸ್ಫುರದ್ರೂಪಿಯಾಗಿ ವಿಷದ ಸ್ತನ್ಯಪಾನ ಮಾಡಿಸುತ್ತಾ ಮಕ್ಕಳನ್ನು ಕೊಲ್ಲುತ್ತಾ ಬಂದಳು. ಕೃಷ್ಣನನ್ನು ಎತ್ತಿಕೊಂಡಳು. ಕೃಷ್ಣನಿಗೆ ಸ್ತನ್ಯಪಾನ ಮಾಡಿಸುವ ನೆಪದಲ್ಲಿ ವಿಷವನುಣಿಸಿದಳು. ಕೃಷ್ಣನಾದರೋ ಹಾಲು ಹೀರುತ್ತಾ ಆಕೆಯ ಪ್ರಾಣವನ್ನೂ ಹೀರಿದನು. ಪೂತನೆಯು “ಹೋ” ಎಂದು ಅರಚುತ್ತಾ ನಿಜರೂಪದಲ್ಲಿ ಬಿದ್ದಾಗ, ಅವಳ ದೇಹ ಒಂದು ಯೋಜನೆವರೆಗೂ ಹರಡಿ ಬಿದ್ದು ಮರಗಿಡಗಳೆಲ್ಲ ಬಿದ್ದುಹೋಯಿತು. ಅವಳ ದೇಹದ ಮೇಲೆ ಕುಳಿತು ಕೃಷ್ಣ ಆಟವಾಡುತ್ತಿದ್ದನು. ಈ ಪೂತನಿಯಲ್ಲಿ ಜೀವದ್ವಯಾವೇಷವಿದ್ದು ರಾಕ್ಷಸಿ ಪೂತನಿ ನರಕಕ್ಕೆ ಹೋದರೆ, ಊರ್ವಶಿಯು ಸ್ವರ್ಗ ಸೇರಿದಳು.

ದ್ಯೂತದ ಕಾಲದಲ್ಲಿ ಕೃಷ್ಣ ಎಲ್ಲಿದ್ದ?

ಸಾಳ್ವ ಮಹಾರಾಜ ದ್ವಾರಕೆಯನ್ನು ಮುತ್ತಿಗೆ ಹಾಕಿದ್ದರಿಂದ ಅಲ್ಲಿಗೆ ತೆರಳಿ ಅವನೊಂದಿಗೆ ಯುದ್ಧನಿರತನಾಗಿದ್ದರಿಂದ ಕೃಷ್ಣ ದ್ಯೂತಕಾಲ ದಲ್ಲಿ ಅಲ್ಲಿರಲಿಲ್ಲ. ಕೃಷ್ಣ ಸರ್ವಶಕ್ತ, ಸರ್ವನಿಯಾಮಕ ಆದರೂ ಲೋಕರೀತ್ಯ ತಾನು ದೂರ ಇದ್ದುದರಿಂದ ದ್ಯೂತದ ವಿಷಯ ತಿಳಿಯಲಿಲ್ಲ ಎಂದು ವಿಡಂಬನೆ ಮಾಡಿದ. ಕೃಷ್ಣನಿಗೆ ನಿಜಕ್ಕೂ ಅದು ಅಜ್ಞಾತವಿರಲಿಲ್ಲ ಎಂಬುದಕ್ಕೆ ತಾನಾಗಿಯೇ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು ನಿದರ್ಶನ.

ಸಾಳ್ವ ವಧೆ – ಸಾಳ್ವ ವಿಮಾನದಲ್ಲಿ ಕುಳಿತು ದ್ವಾರಕೆಯ ನನ್ನು ಹಿಂಸಿಸುತ್ತಿದ್ದ. ಕೃಷ್ಣ ಪುತ್ರ ಪ್ರದ್ಯುಮ್ನ ಸಾಳ್ವನೊಂದಿಗೆ ಯುದ್ದ ಮಾಡುತ್ತಿರುತ್ತಾನೆ. ಯುದ್ದಕ್ಕೆ ಬಂದವನು ಕೃಷ್ಣನಲ್ಲ, ಕೃಷ್ಣ ಪುತ್ರ ಪ್ರದ್ಯುಮ್ನ ಎಂದು ತಿಳಿದು, ಸಾಳ್ವ ವಿಮಾನದಿಂದ ಇಳಿದು ರಥವನೇರಿ ಯುದ್ಧ ಆರಂಭಿಸಿದ. ಪ್ರದ್ಯುಮ್ನನಾದರೋ, ಸಾಳ್ವ ನನ್ನು ಕೊಲ್ಲಲು ಕೃಷ್ಣ ನೀಡಿದ್ದ ವಿಶೇಷ ಬಾಣವನ್ನು ಪ್ರಯೋಗಿಸಲು ಉದ್ಯುಕ್ತನಾದ. ಆಗ ಅಶರೀರವಾಣಿ ನುಡಿಯಿತು – “ಸಾಳ್ವ ನನ್ನು ಕೊಲ್ಲಲು ಕೃಷ್ಣನ ಸಂಕಲ್ಪವಿದೆ. ನೀನು ಕೊಲ್ಲಲು ಪ್ರಯತ್ನಿಸಬೇಡ”. ಈ ಮಾತನ್ನು ಕೇಳಿದ ಪ್ರದ್ಯುಮ್ನ ಬಾಣವನ್ನು ಪ್ರಯೋಗಿಸಲಿಲ್ಲ. ಸಾಳ್ವ ವಿಮಾನ ವೇರಿ ತನ್ನ ರಾಜ್ಯಕ್ಕೆ ಹಿಂತಿರುಗಿದ. ದ್ವಾರಕೆಯನ್ನು ಹಾಳು ಮಾಡಿದ್ದು ಸಾಳ್ವನನ್ನು ಬೆನ್ನಟ್ಟಿ ಹೋದ ಕೃಷ್ಣ. ಸಾಳ್ವನಾದೂರು ಕೃಷ್ಣನ ಮೇಲೆ ಶಸ್ತ್ರಗಳ ಮತ್ತು ಮಹಾಸ್ತ್ರಗಳನ್ನು ಮಾಯೆಯಿಂದ ಪ್ರಯೋಗಿಸಿದ. ಆಗ ಸಾಳ್ವ ಪ್ರಯೋಗಿಸಿದ ಮಾಯೆಯಿಂದ ಕೃಷ್ಣ ಕೆಳಗೆ ಬಿದ್ದಂತೆಯೂ, ಆ ದಾನವರು ಆಯುಧಗಳಿಂದ ತಿವಿದು ಕೊಲ್ಲುತ್ತಿದ್ದಂತೆಯೂ ಕಾಣಿಸಿತು. ಆಗ ಕೃಷ್ಣನು ವಿಜ್ಞಾನಾಸ್ತ್ರದಿಂದ ಮಾಯೆಯನ್ನು ನಾವು ಮಾಡಿದ. ಸಾಳ್ವ ಬೆಟ್ಟಗಳ ಮಳೆಗರೆದಾಗ, ಕೃಷ್ಣನು ಸಾಳ್ವನ ಸೌಭ ವಿಮಾನವನ್ನು ಉರುಳಿಸಿ, ಬೀಳಿಸಿದಾಗ, ಅವನು ರಥವನೇರಿ ಯುದ್ದಕ್ಕೆ ಬರಲು, ಅವನ ತೋಳುಗಳನ್ನು, ಶಿರಸ್ಸನ್ನೂ ತುಂಡರಿಸಿ, ಸಾಳ್ವ ನನ್ನು ಸಂಹರಿಸಿದನು.

ಮತ್ತೆ ಕೃಷ್ಣಾರ್ಘ್ಯ ಮಂತ್ರ

ಶ್ರೀ ಕೃಷ್ಣಾರ್ಘ್ಯ ಮಂತ್ರ

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ I
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ II
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ I
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ II
ದೇವಕೀಸಹಿತ-ಶ್ರೀಕೃಷ್ಣಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ

ಚಂದ್ರಾರ್ಘ್ಯ ಮಂತ್ರ:

ಕ್ಷೀರೋದಾರ್ಣವ ಸಂಭೂತ ಅತಿಗೋತ್ರಸಮುದ್ಭವ
ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://chat.whatsapp.com/JkAwlyNYSL0HsvomREsZFz
⬆️ಇಲ್ಲಿ ಕ್ಲಿಕ್ ಮಾಡಿ.