ಎಂಪಿ ಆದ್ಯಾತ್ಮಿಕ ಅಂಗಳ-ಪರಮಾತ್ಮನ ಸ್ವರೂಪವೇ ಸಂಕೀರ್ತನ ..!

17
adyatmika
ಮೈಸೂರು ಪತ್ರಿಕೆ
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ಪರಮಾತ್ಮನ ಸ್ವರೂಪವೇ ಸಂಕೀರ್ತನ ..!*

ಪರಮಾತ್ಮನ ಸ್ವರೂಪವೇ ಸಂಕೀರ್ತನ ಧ್ವನಿಯು ಸಂಕೀರ್ತನ, ವೇದಗಳ ಸಾರವು ಸಂಕೀರ್ತನ ನಾಲ್ಕು ವೇದಗಳು ಬಂದುದು ಶಬ್ದದಿಂದ. ಶಬ್ದಗಳು ನಾಲ್ಕು ವಿಧ: ವೈಖರೀ ಮಧ್ಯಮಾ, ಪಶ್ಯಂತೀ, ಪರಾ ಎಂದು ಹುಟ್ಟುವದು ಕ್ರಮವಾಗಿ ಬಾಯಿ, ಕಂಠ, ಹೃದಯ ನಾಭಿ ಸ್ಥಾನದಲ್ಲೇ ಶಬ್ದ, ವೇದಗಳು, ಸಂಕೀರ್ತನ ಉಂಟಾಗುವದು. ನಾಭಿಯ ಮೂಲದಲ್ಲೇ ಸಂಕೀರ್ತನವೆಂದರೆ ಭಕ್ತರು ಒಂದು ಕಡೆ ಕುಳಿತು ಭಗವಂತನ ದಿವ್ಯನಾಮಗಳನ್ನು ತಾಳ, ರಾಗ, ಭಾವ ಶುದ್ಧಿ ಶೃತಿ ಶುದ್ಧವಾಗಿ ಭಕ್ತಿಯಿಂದ ಹಾಡುವುದು. ಸಂ + ಕೀರ್ತನ ಒಂದು ಶುದ್ಧ ವಿಜ್ಞಾನ, ಮನಸ್ಸನ್ನು ಉತ್ತಮಗೊಳಿಸಿ, ಭಾವಗಳನ್ನು ತೀವ್ರಗೊಳಿಸಿ, ಪರಮಾತ್ಮ ಪದದಲ್ಲಿ ನಿಲ್ಲಿಸಿ ಪರಮಾನಂದವನ್ನುಂಟು ಮಾಡುವುದು.

ಭಗವಂತನೂ ಅವನ ನಾಮವೂ ಪ್ರತ್ಯೇಕವಲ್ಲ. ನಾಮವು ನಾಮಿಗಿಂತಲೂ ಶ್ರೇಷ್ಠವು, ಮನುಷ್ಯನು ಮರಣ ಹೊಂದಿದರೂ ಅವನ ಹೆಸರು ಭೂಮಿಯಲ್ಲಿ ಅನೇಕ ವರ್ಷಗಳಿರುವುವು. ಕಾಳಿದಾಸ, ವಾಲ್ಮೀಕಿ, ತುಲಸೀ ದಾಸರನ್ನು ಇಂದಿಗೂ ಸ್ಮರಿಸುವುದಕ್ಕೆ ನಾಮ ಚೈತನ್ಯವೇ ಕಾರಣ. ಸಂಕೀರ್ತನ ಕಾಲದಲ್ಲಿ ಒಂದೇ ಸ್ವರ, ಒಂದೇ ತಾಳ, ಒಂದೇ ಭಾವ ಕೀರ್ತನಕಾರರುಗಳಲ್ಲಿರಬೇಕು. ಆಗ ಅಲ್ಲಿ ನೆರೆದಿರುವವರಿಗೆ ಆತ್ಮಾನಂದ, ಭಜನ ಮಂಡಲಿಗಳವರು, ಸಂಕೀರ್ತನ ಸಭೆಗಳು ಈ ನಿಯಮವನ್ನು ತಪ್ಪದೆ ಪಾಲಿಸಬೇಕು.

ಸಂಕೀರ್ತನ ಸಾಧನದಲ್ಲಿ ಆಸಕ್ತಿವುಳ್ಳವರು (1) ಎರಡು

ಮಾಲೆಗಳಷ್ಟು ಮಂತ್ರ ಜಪ (2) ಏಕಾದಶಿಯಂದು ಉಪವಾಸ (3) ದಿನವೂ ಎರಡು ಗಂಟೆ ಮೌನ (4) ಸಾತ್ವಿಕಾಹಾರ ಸೇವನೆ (5) ಗೀತಾಪಠಣ (6) ಇಂದ್ರಿಯ ಜಯ (7) ಬ್ರಾಹ್ಮ ಮುಹೂರ್ತದಲ್ಲಿ ಧ್ಯಾನ (8) ಆದಾಯದ ‘¾o ಭಾಗ ದಾನ (9) ಮಾದಕ ವಸ್ತುಗಳ ವರ್ಜ (10) ಸತ್ಯವನ್ನು ನುಡಿಯುವುದು (11) ಅಹಿಂಸೆಯನ್ನು ಪಾಲಿಸುವುದು (12) ಯಾರನ್ನೂ ನಿಂದಿಸದಿರುವುದು ಎಂಬ ನಿಯಮಗಳನ್ನು ಪಾಲಿಸುವುದರಿಂದ ಚಿತ್ತ ಶುದ್ಧಿಯಾಗುವುದು. ಮಥುರಾ, ಮೀರತ್, ಹರದ್ವಾರಗಳಲ್ಲಿ ಸಂಕೀರ್ತನ ಸಪ್ತಾಹಗಳು ಶುದ್ಧವಾಗಿ ನಡೆಯುವಂತೆ ಮನೆಗಳಲ್ಲಿ ಎಲ್ಲರೂ ಸಂಕೀರ್ತನ ಮಾಡಬಹುದು.
*!! ಶ್ರೀಕೃಷ್ಣಾರ್ಪಣಮಸ್ತು !!*


Share