ಎಂಪಿ ಆದ್ಯಾತ್ಮಿಕ ಅಂಗಳ-ಯುವಕ ಯುವತಿಯರು ನಮ್ಮ ಸಂಸ್ಕೃತಿ ನಮ್ಮ ಸಂಗೀತ ನಮ್ಮ ಸನಾತನ ಧರ್ಮದ ವಿಶೇಷತೆ ..!

adyatmika
ಮೈಸೂರು ಪತ್ರಿಕೆ
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

ಯುವಕ ಯುವತಿಯರು ನಮ್ಮ ಸಂಸ್ಕೃತಿ ನಮ್ಮ ಸಂಗೀತ ನಮ್ಮ ಸನಾತನ ಧರ್ಮದ ವಿಶೇಷತೆ ಗಳನ್ನು ತಿಳಿದುಕೊಳ್ಳಬೇಕು..!*

ಶಾರಿರಿಕ ಮಾನಸಿಕ ಉತ್ತಮ ಆರೋಗ್ಯಕ್ಕೆ ಇಂಪಾದ ನಮ್ಮ ಭಾರತೀಯ ಸಂಗೀತ ಕೇಳುವದು ಬಹಳ ಉತ್ತಮ.

ನಮ್ಮ ಯುವಕ ಯುವತಿಯರು ಇಂತಹ ಇಂಪಾದ ಭಾರತೀಯ ಶಾಸ್ತ್ರೀಯ ಸಂಗೀತ ಪ್ರತಿನಿತ್ಯ ಸ್ವಲ್ಪ ಕೇಳಿ ತಮ್ಮ ಶಾಂತ ಸ್ವಭಾವ ಬೆಳೆಸಿಕೊಳ್ಳುವುದು, ಮಾನಸಿಕ ಶಾರಿರಿಕ ಸುಧಾರಣೆ ಗಳನ್ನು ಮಾಡಿಕೊಳ್ಳಬಹುದು.

ನಮ್ಮ ಭಾರತೀಯ ಸಂಗೀತ ಕೇವಲ ಮನೋರಂಜನೆ ಅಲ್ಲ ಇದು ಶಾರಿರಿಕ ಮಾನಸಿಕ ಸುಧಾರಣೆಯಲ್ಲಿ ಉತ್ತಮ ಕೆಲಸ ಮಾಡುತ್ತದೆ.

ನಾವು ಪಾಶ್ಚತ್ಯ ಸಂಗೀತ ಕರ್ಕಶ ಡಿಸ್ಕೋ ಪಾಪ್ ಗಳಿಂದ ಹೊರಬಂದು ನಮ್ಮ ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳುವ, ಭಾರತೀಯ ಸಂಗೀತವನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಪ್ರಪಂಚದ ಯಾವ ಸಂಗೀತದಲ್ಲಿ ಇರದ ವಿಶಿಷ್ಟತೆ ನಮ್ಮ ಭಾರತೀಯ ಸಂಗೀತದಲ್ಲಿ ಇದೆ, ನಮ್ಮ ಸಂಗೀತದಲ್ಲಿ
ರಾಗ, ತಾಳ, ಪಲ್ಲವಿ, ಆಲಪನ, ಸ್ವರ, ಕಲ್ಪನಾ, ವರುಣಾ, ಕೃತಿ, ಕೀರ್ತನ, ಅಷ್ಟಪದಿ ಹೀಗೆ ಶಾಸ್ತ್ರಿಯ ಸಂಗೀತ, ಹಿಂದುಸ್ತಾನಿ ಸಂಗೀತ,ಕರ್ನಾಟಕ ಸಂಗೀತ ಹೀಗೆ ವಿವಿಧತೆಯ ಮಹತ್ವ ಹೊಂದಿದೆ ,ದೇಶದ ವಿವಿಧ ಕಡೆ ಸಂಗೀತ ಪ್ರಿಯರು ಕೇಳುವವರು ಬಹಳ ಜನ ಇದ್ದಾರೆ, ತ್ಯಾಗರಾಜು, ಮೀರಾ, ಅನ್ನಮಯ್ಯ, ಅನೇಕ ದಾಸ ಶ್ರೇಷ್ಠರು ಸಂಗೀತವನ್ನೇ ತಮ್ಮ ಜೀವನದ ಗುರಿಯಾಗಿಟ್ಟುಕೊಂಡು ಪ್ರಪಂಚದ ಜನರಿಗೆ ಭಕ್ತಿ ಮಾರ್ಗದಿಂದ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದೆಂದು ತೋರಿಸಿದ್ದಾರೆ.

ನಮ್ಮ ಭಾರತೀಯ ಸಂಗೀತದಲ್ಲಿ ತಾರತಮ್ಯ ವಿಶೇಷತೆ ಗಳಿವೆ, ಬೆಳಿಗ್ಗೆ ಬೌಳಿ, ಭೂಪಾಲ ರಾಗಗಳು ಕೇಳಬೇಕಂತೆ, ಮಧ್ಯಾಹ್ನ
ಭೀಮ್ಲಾಪ, ಬೃಂದಾವನ, ಸಾರಂಗಿ ರಾಗ ಗಳನ್ನು ಕೇಳಬೇಕಂತೆ, ಸಾಯಂಕಾಲ ವೇಳೆಯಲ್ಲಿ ಹಮಿರ, ಕಲ್ಯಾಣಿ, ಸಾರಂಗಿ ರಾಗಗಳನ್ನು ಕೇಳಬೇಕಂತೆ, ರಾತ್ರಿ ವೇಳೆಯಲ್ಲಿ ಕುರಂಜಿ, ನೀಲಾಂಬರಿ ರಾಗಗಳನ್ನು ಕೇಳಬೇಕಂತೆ, ನೋಡಿ ಜಗತ್ತಿನ ಯಾವ ಸಂಗೀತದಲ್ಲಿ ಈ ವಿಶೇಷತೆಗಳಿಲ್ಲ.

ಮನುಷ್ಯ ತನ್ನ ದುಃಖ ಕಡಿಮೆ ಮಾಡಿ ಕೊಳ್ಳುವುದಕ್ಕೆ ಶಿವರಂಜಿನಿ, ಶುಭವಂತು, ಪರಾಳಿ, ಮೋಹನ ,ಕಥನ ಕುತೂಹಲ ಎಂಬ ಶಾಸ್ತ್ರೀಯ ಸಂಗೀತರಾಗಗಳನ್ನು ಕೇಳಬೇಕಂತೆ.

ಇಂತಹ ಅನೇಕ ರಾಗಗಳು ನಮ್ಮ ಶಾಸ್ತ್ರೀಯ ಸಂಗೀತದಲ್ಲಿವೆ ಮಾನಸಿಕ ಸ್ಥಿತಿ ಶಾರೀರಿಕ ಆರೋಗ್ಯ ಸುಧಾರಣೆ ಗಾಗಿ ಧನುಶ್ರೀ, ದರ್ಬಾರು, ಅಹಿರು, ಭೈರವಿ, ಮಲ್ಕೋಸ್ ,ತೂಡಿ, ಹಿಂದೂಳಂ ಗಳಂತ ರಾಗಗಳನ್ನು ಕೇಳಬೇಕಂತೆ.

ನಮ್ಮ ಶಾಸ್ತ್ರೀಯ ಸಂಗೀತದ ಮಹತ್ವ ನಮ್ಮ ಸಮಾಜಕ್ಕೆ ತಿಳಿಸಿಕೊಟ್ಟ ಎಲ್ಲ ಭಾಷೆಯ ಅನೇಕ ಚಿತ್ರಗಳಿದ್ದು ಈ ಮಧ್ಯ ತೆಲುಗು ಸಾಗರಸಂಗಮ, ಶಂಕರಾಭರಣ ಬಹಳ ಉತ್ತಮವಾದ ಚಿತ್ರಗಳು. ಶ್ರೀ ಭೀಮಶೇನ್ ಜೋಶಿಯಂತಹ ಅನೇಕ ನಮ್ಮ ಭಾರತೀಯ ಸಂಗೀತಕಾರರು ನಮ್ಮ ಶಾಸ್ತ್ರೀಯ ಸಂಗೀತವನ್ನು ಜಗತ್ತಿಗೆ ಪರಿಚಯ ಮಾಡಿಸಿಕೊಟ್ಟಿದ್ದಾರೆ,
ಪ್ರತಿದಿನ ಸ್ವಲ್ಪ ಸಮಯವಾದರೂ ತತ್ವ ಭರಿತ ಹಿಂದಿ ಹಳೆಯ ‌ಸಿನಿಮಾ ಹಾಡುಗಳನ್ನು ಕೇಳಬೇಕು. ನಾಸ್ತಿಕ ಭಾವನೆಗಳಿಂದ ಕೂಡಿದ ಪಂಡಿತ್ ನೆಹರು ಪ್ರತಿದಿನ ಬೆಳಿಗ್ಗೆ ಎಂ ಎಸ್ ಸುಬ್ಬಲಕ್ಷ್ಮಿ ಅವರು ಇಂಪಾಗಿ ಹಾಡಿದ ಜಗದ್ಗುರು ಶ್ರೀ ಆದಿಶಂಕರಚಾರ್ಯರ ವಿರಚಿತ ಭಜ ಗೋವಿದಂ ತಪ್ಪದೇ ಕೇಳುತ್ತಿದ್ದರಂತೆ.

ನಮ್ಮ ಶಾಸ್ತ್ರಗಳಲ್ಲಿ ಸಂಗೀತವು ಒಂದು ಭಾಗ ಸಾಮವೇದ ಸಂಗೀತ ರಾಗ ದಿಂದ ಕೂಡಿದೆ,
ಶಿವ ಪರಮಾತ್ಮ ನಟರಾಜ ನಾಟ್ಯದಲ್ಲಿ ಡಮರು ಹಿಡಿದು ನಮಗೆ ಕಾಣುತ್ತಾನೆ, ಸರಸ್ವತಿ ಮಾತಾ, ನಾರದರ ಕೈಯಲ್ಲಿ ನಾವು ತಂಬೂರಿ ವೀಣಾ ನೋಡುತ್ತೇವೆ,
ಶ್ರೀ ಕೃಷ್ಣ ಪರಮಾತ್ಮ ಕೊಳಲು ಉದುತ್ತಾ ಎಲ್ಲ ರನ್ನು ಆನಂದ ಪಡಿಸಿದ್ದು ನಾವು ಪುರಾಣಗಳಲ್ಲಿ ಕೇಳಿದ್ದೇವೆ, ನಮ್ಮ ಎಲ್ಲ ದೇವತಾ ಕಾರ್ಯದ ಸಮಾಪ್ತಿ ಸಮಯದಲ್ಲಿ ದೇವರಿಗೆ ಇಷ್ಟವಾದ ಎಲ್ಲ ಸೇವೆಗಳನ್ನು ಮಾಡುತ್ತಾ, ಸಂಗೀತಪ್ರಿಯ ಸಂಗೀತ ಸೇವಾ ಮಮಧಾರೆಯಾತ ಎಂದು ಸಂಗೀತ ಹೇಳುತ್ತೇವೆ,

ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಮನೋವಿಜ್ಞಾನಿಗಳು ಒಂದು ಸಂಶೋಧನೆ ಮಾಡಿ 25 ಜನರ ಗುಂಪನ್ನು ಪ್ರತಿನಿತ್ಯ ನ್ಯೂಸ್, ಭಯಾನಕ ಸಿನಿಮಾ, ಕರ್ಕಶ ಸಂಗೀತ ಹಾಗೂ ಟಿವಿಯಲ್ಲಿ ಬರುವ ಹರರ ಸಿನಿಮಾ ಅನಾವಶ್ಯಕ ಕೆಲ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಗಂಟೆಗಟ್ಟಲೆ ತಪ್ಪದೇ ನೋಡಲು ಹೇಳಿ,
ಇನ್ನೊಂದು 25 ಜನರ ಗುಂಪಿಗೆ ಇಂಪಾದ ಸಂಗೀತ, ಹಾಸ್ಯ ಮನೋರಂಜನೆ, ಸೃಷ್ಟಿಯ ಸುಂದರ ಚಿತ್ರಗಳನ್ನು ಪ್ರತಿನಿತ್ಯ ಗಂಟೆಗಟ್ಟಲೆ ನೋಡಲು ಹೇಳುತ್ತಾರೆ.
ಈ ರೀತಿ ಕೆಲ ತಿಂಗಳಗಳು ಎರಡು ಗುಂಪುಗಳ ನೂಡಿದ ಮೇಲೆ, ಎರಡು ಗುಂಪಿನ ಜನರ ರಕ್ತ ಪರೀಕ್ಷೆ ಮಾಡಿ ನೋಡಿದಾಗ ಶಾರೀರಿಕ, ಮಾನಸಿಕ ಸ್ಥಿತಿಯಲ್ಲಿ ಎರಡು ಗುಂಪುಗಳಲ್ಲಿ ಮನೋವಿಜ್ಞಾನಿಗಳಿಗೆ ವಿಚಿತ್ರ ಬದಲಾವಣೆ ಕಂಡುಕೊಳ್ಳುತ್ತಾರೆ,
ಮೊದಲನೇ ಗುಂಪಿನಲ್ಲಿ ಭಯಾನಕ ಸಿನಿಮಾ ಮುಂತಾದ ವನ್ನು ನೋಡಿದವರಲ್ಲಿ ಬಿಪಿಯ ಇನ್ನೂ ಅನೇಕ ಮೆದುಳಿನ ಮಾನಸಿಕ ಸ್ಥಿತಿ ಬದಲಾವಣೆ ಕೋಪದ ಲಕ್ಷಣಗಳು ಕಂಡುಬರುತ್ತವೆ,
ಎರಡನೇ ಇಂಪಾದ ಸಂಗೀತ ಕೇಳಿದ ಗುಂಪಿನ ಜನರ ರಕ್ತಪರಿಕ್ಷೆ ಮಾಡಿದಲ್ಲಿ ಇವರ ಮೆದುಳಿನಲ್ಲಿ ಎಂಡ ಫ್ರೀನ್ ಎಂಬ ಜ್ಯೂಸ್ ರಾಸಾಯನ ಉತ್ಪತ್ತಿಯಾಗಿ ಇವರ ಶರೀರಿಕ ಮಾನಸಿಕ ಸ್ಥಿತಿ ಬಹಳ ಉತ್ತಮ ಗೊಂಡಿರುತ್ತದೆ, ಇವರಲ್ಲಿ ಕೋಪ ಉದ್ವೇಗ ಕಡಿಮೆಯಾಗಿರುತ್ತದೆ,
ನೋಡಿ ಒಳ್ಳೆ ಸಂಗೀತಕ್ಕೆ ಇದ್ದ ಮಹತ್ವ.

ನಮ್ಮ ಚಿಕ್ಕ ಮಕ್ಕಳಿಗೂ ಟಿವಿಯಲ್ಲಿ ರಾಮಾಯಣ ಮಹಾಭಾರತ ಮಕ್ಕಳಿಗೆ ಇಷ್ಟವಾಗುವ ಇನ್ನೂ ಧಾರ್ಮಿಕ ಕಥೆಗಳು ಮನೋರಂಜನೆಯ ಹೊಸ ಹೊಸ ಕಾರ್ಯಕ್ರಮಗಳು ಬಂದಿವೆ. ಅವನ್ನೇ ನೋಡಲು ಹೇಳಬೇಕು, ಮಕ್ಕಳು ಹರರ್ ಸಿನಿಮಾ ಇಂಗ್ಲಿಷ್ ವಿಚಿತ್ರ ಮೂವಿಗಳನ್ನು ನೋಡುತ್ತಿದ್ದಾರೆ ಇದು ಅವರ ಮಾನಸಿಕ ಸ್ಥಿತಿ ಮೇಲೆ ಪ್ರಭಾವ ಮಾಡುತ್ತದೆ ತಂದೆ ತಾಯಿ ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು.

ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ ಇವರ ಹತ್ತಿರ ಒಬ್ಬ ಮಹಿಳೆಯನ್ನು ಕರೆತರುತ್ತಾರೆ ಅವರು ಸ್ವಾಮೀಜಿಯವರಿಗೆ ಕೇಳುತ್ತಾರೆ ಸ್ವಾಮೀಜಿ ಈ ಹೆಣ್ಣು ಮಗಳಿಗೆ ತಮ್ಮಿಂದ ಒಂದು ಸಹಾಯ ಆಗಬೇಕು ಅದೇನೆಂದರೆ ಈಕೆಗೆ ಇದ್ದ ಒಬ್ಬನೇ ಮಗ ಕೆಲವೇ ದಿನಗಳ ಹಿಂದೆ ಎಕ್ಸಿಡೆಂಟ್ ನಲ್ಲಿ ತೀರಿಕೊಂಡ, ಅಂದಿನಿಂದ ಈಕೆ ಯಾರ ಜೊತೆ ಮಾತಾಡದೆ ಒಬ್ಬಾಕೆ ಸುಮ್ಮನೆ ಕೂತಿರುತ್ತಾಳೆ ಬಹಳ ದುಃಖದಲ್ಲಿದ್ದಾಳೆ, ಈ ದುಃಖ ಹೋಗಲು ಈಕೆಗೆ ಏನಾದರೂ ಜಪ ಮಂತ್ರ ಪ್ರಾರ್ಥನೆ ಗಳು ಮಾಡಬೇಕಿದ್ದರೆ ಅದನ್ನು ದಯಮಾಡಿ ಹೇಳಿ ಎಂದು ಕೇಳುತ್ತಾರೆ,
ಆಗ ವಿವೇಕಾನಂದರು
ಕೇಳುತ್ತಾರೆ ಈಕೆ ಏನು ಕೆಲಸ ಮಾಡುತ್ತಿದ್ದಳು ಎಂದು, ಸ್ವಾಮೀಜಿ ಈಕೆ ಒಂದು ಹೋಟೆಲ್ನಲ್ಲಿ ಕ್ಲಬ್ ಡ್ಯಾನ್ಸ್ ರ ಕೆಲಸ ಮಾಡುತ್ತಿದ್ದಳು ಎಂದು ಹೇಳುತ್ತಾರೆ, ಆಗ ಸ್ವಾಮೀಜಿ ಬಹಳ ಉತ್ತಮ ದುಃಖ ಮರೆಯಲು ಯಾವುದೇ ಮಂತ್ರ ಜಪ ಬೇಕಾಗಿಲ್ಲ ತಾಯಿ ನೀನು ಮತ್ತೆ ನಿನ್ನ ಆ ಕ್ಯಾಬ್ರೆ ಡ್ಯಾನ್ಸ್ ಮಾಡುವ ವೃತ್ತಿಯಲ್ಲಿ ಸೇರಿಕೋ ದುಃಖ ಮರೆಯಲು ಮನುಷ್ಯನಿಗೆ ಸಂಗೀತ ಮತ್ತು ಪ್ರತಿನಿತ್ಯದ ತನ್ನ ಕೆಲಸ ಮಾಡುತ್ತಿರುವುದು ಬಹಳ ಉತ್ತಮ ಎಂದು ಹೇಳುತ್ತಾರೆ, ಆಕೆ ಪುನಹ ತನ್ನ ವೃತ್ತಿಯಲ್ಲಿ ಸೇರಿಕೊಳ್ಳುತ್ತಾಳೆ ಮಾಮೂಲಿಯಾಗಿ ಕೆಲದಿನಗಳಲ್ಲಿ ಸರಿ ಹೋಗುತ್ತಾಳೆ ಎಂದು ಹೇಳಲಾಗುತ್ತದೆ, ನೋಡಿ ಸಂಗೀತಕ್ಕಿರುವ ಶಕ್ತಿ.

ರಾಜ ಅಕ್ಬರ್ ನ ಹತ್ತಿರ ಅಪ್ರತಿಮ ಸಂಗೀತ ಕಾರ ಶ್ರೀ ತಾನ್ ಸೇನ್ ಎಂಬುವರು ಇದ್ದರು, ಅವರು ದೀಪ ರಾಗ ಸಂಗೀತ ಹಾಡಿದರೆ ದೀಪಗಳು ತಾನಾಗಿ ಹತ್ತಿ ಕೊಳ್ಳುತ್ತಿದ್ದವಂತೆ ,ಅಷ್ಟು ಆ ರಾಗದಲ್ಲಿ ಶಕ್ತಿ ಇತ್ತಂತೆ.
ಒಂದು ದಿನ ಅಕ್ಬರ ತಾನ ಸೇನ ಗೆ ದೊಡ್ಡ ಸನ್ಮಾನ ಮಾಡಲು ನಿರ್ಣಯಿಸುತ್ತಾರೆ, ಈ ವಿಷಯ ತಿಳಿದುಕೊಂಡ ತಾನ ಸೇನ ಅಕ್ಬರ ಗೆ ಹೇಳುತ್ತಾರೆ ನನಗೆ ಸನ್ಮಾನ ಬೇಡ ರಾಜ ನನಗಿಂತಲೂ ಅತಿ ಉತ್ತಮವಾಗಿ ಉತ್ಕೃಷ್ಟವಾಗಿ ಹಾಡುವ ನಮ್ಮ ಗುರುಗಳು ಯಮುನಾ ನದಿ ದಂಡೆಯ ಮೇಲೆ ಒಂದು ಗುಡಿಸಿಲಲ್ಲಿ ವಾಸ ಮಾಡುತಿದ್ದಾರೆ ಅಂತಹ ನಮ್ಮ ಶ್ರೇಷ್ಠ ಗುರುಗಳ ಮುಂದೆ ನಾನು ಬಹಳ ಕನಿಷ್ಠ ನನಗೆ ಸನ್ಮಾನ ಬೇಡ ಎಂದು ತಾನ ಸೇನ ಹೇಳುತ್ತಾರೆ, ಆಗ ರಾಜ ಅಕ್ಬರ್ ಹಾಗಾದರೆ ನಿಮ್ಮ ಗುರುಗಳನ್ನು ಕರೆಸು ಒಮ್ಮೆ ಅವರ ಸಂಗೀತ ಕೇಳೋಣ ಎನ್ನುತ್ತಾನೆ, ಆಗ ತಾನ ಸೆನ ಹೇಳುತ್ತಾರೆ ರಾಜ ನಮ್ಮ ಗುರುಗಳು ಯಾರು ಕರೆದರು ಬರುವುದಿಲ್ಲ, ನಿಮ್ಮಂಥ ಚಕ್ರವರ್ತಿ ರಾಜ ಕರಿದರು ಅವರು ಬರವ ದಿಲ್ಲ ಎನ್ನುತ್ತಾರೆ, ಹಾಗಾದರೆ ನಾವೇ ಹೋಗಿ ಕೇಳೋಣ ನಡಿ ಎಂದು ಅಕ್ಬರ ಹೇಳುತ್ತಾರೆ, ಆಗ ತಾನ್ಸೇನ್ ರಾಜ ನಾವು ಹೋಗಿ ಎದುರು ಕುಳಿತರೆ ಅವರು ಹಾಡುವುದಿಲ್ಲ, ಒಂದು ಉಪಾಯವೆಂದರೆ ಎರಡು ಮೂರು ದಿನ ನಾವೇ ಅವರ ಗುಡಿಸಲ ಹಿಂದೆ ಮರೆಯಾಗಿ ನಿಂತು ಕಾಯಬೇಕು ರಾತ್ರಿ ಅವರಿಗೆ ಎಚ್ಚರಿಕೆಯಾಗಿ ಹಾಡಬೇಕೆನಿಸಿದರೆ ಹಾಡುತ್ತಾರೆ ಆಗ ಮಾತ್ರ ನಾವು ಕೇಳಬಹುದು ಎನ್ನುತ್ತಾನೆ, ಸಂಗೀತಗಾರ ತಾನ್ಸೇನ್ ರಾಜ ಅಕ್ಬರ್ ಎರಡು ಮೂರು ದಿನ ಪ್ರತಿದಿನ ರಾತ್ರಿ ಗುಡಿಸಲು ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ, ಮೂರನೇ ದಿನ ರಾತ್ರಿ ಎರಡು ಗಂಟೆಗೆ ಆ ಗುರುಗಳು ಹೊರಗೆ ಬಂದು ಪೂರ್ಣಚಂದ್ರ ಆಕಾಶದಲ್ಲಿದ್ದಾಗ ಆ ಬಿಂಬ ಯಮುನೆಯಲ್ಲಿ ಕಾಣುತ್ತಿರುವಾಗ ಒಂದು ಬಂಡೆಯ ಮೇಲೆ ಕುಳಿತು ತಾನ್ಸೇನ್ ಗುರುಗಳು ಹಾಡುತ್ತಾರೆ, ಆ ಗುರುಗಳ ಹಾಡು ಕೇಳಿ ವಿಸ್ಮಯವಾಗಿ ಉತ್ಸಾಹದಿಂದ ಸಂಪೂರ್ಣ ಸಂಗೀತ ಭರಿತ ಗುರುಗಳ ಹಾಡು ಕೇಳಿದ ನಂತರ ಅಕ್ಬರ್ ಕಣ್ಣಲ್ಲಿ ಧಾರಾಕಾರ ನೀರು ಬರಲು ಪ್ರಾರಂಭವಾಗುತ್ತದೆ, ಕಂಠ ಗದ್ಗದಿತವಾಗುತ್ತದೆ ಮಾತಾಡಲು ಬರುವುದಿಲ್ಲ ರಥದಲ್ಲಿ ಕುಳಿತು ರಾಜಭವನಕ್ಕೆ ಬರುವವರೆಗೆ ಅಕ್ಬರ್ ಗೆ ಮಾತೇ ಬರುವುದಿಲ್ಲವಂತೆ ನಂತರ ತಾನ್ಸೆನನ್ನು ಅಕ್ಬರ ಕೇಳುತ್ತಾನಂತೆ ಏನಿದು ಆನಂದ ಎಂತಹ ಅದ್ಭುತ ಸಂಗೀತ ನನಗೆ ವರ್ಣನೆ ಮಾಡಲು ಶಬ್ದಗಳು ಬರುತ್ತಿಲ್ಲ ನಿಮ್ಮ ಗುರುಗಳ ಸಂಗೀತದಲ್ಲಿ ಎಂತಹ ಅದ್ಭುತ ಅಪಾರ ದೈವಿ ಶಕ್ತಿ ಇದೆ ಹೀಗೇಕೆ ಎಂದು ತಾನ್ಸೆನಿಗೆ ರಾಜ ಕೇಳುತ್ತಾನೆ ಆಗ ತಾನ್ಸೇನ್ ಹೇಳುತ್ತಾರೆ ರಜಾ ನಾನು ನಿಮ್ಮನ್ನು ಸಂತೋಷಪಡಿಸಲು ಹಾಡುತ್ತೇನೆ, ಆದರೆ ನಮ್ಮ ಗುರುಗಳು ಯಾರಿಗಾಗಿ ಹಾಡುವುದಿಲ್ಲ ಕೇವಲ ಆ ಭಗವಂತನ ಮೆಚ್ಚುಗೆಗೆ ಮಾತ್ರ ಹಾಡುತ್ತಾರೆ. ಇದೇ ಅವರಲ್ಲಿ ನನ್ನಲ್ಲಿ ಇರುವ ವ್ಯತ್ಯಾಸ ಎನ್ನುತ್ತಾರಂತೆ.
ನೋಡಿ ನಮ್ಮ ದೇಶದಲ್ಲಿ ಎಂತೆಂತಹ ಮಹಾನ್ ಸಂಗೀತಕಾರರು ಆಗಿ ಹೋಗಿದ್ದಾರೆ, ಹಿಂದೆ ಪ್ರತಿ ಥಥಥರಾಜರ ಆಸ್ಥಾನದಲ್ಲಿ ತಪ್ಪದೇ ಸಂಗೀತಕಾರರಿದ್ದು ಅನೇಕ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು ಇಂದಿನ ದಿನಗಳಲ್ಲಿ ಅದೆಲ್ಲ ಮಾಯವಾಗಿದೆ, ಮನುಷ್ಯ ಕೇವಲ ಹಣದ ಹಿಂದೆ ಬಿದ್ದು ತಾನಾಯಿತು ತನ್ನ ಹೆಂಡರು ಮಕ್ಕಳಾಯಿತು ಇದೇ ಜೀವನ ಎಂದುಕೊಂಡಿದ್ದಾನೆ, ಇಂತಹ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾನೆ, ನಾವು ಇಂತಹ ಸಂಗೀತಗಳನ್ನು ಕೇಳುವುದು ಮಾಡುತ್ತಾ ಸ್ವಲ್ಪ ಸ್ವಲ್ಪ ನಮ್ಮ ಮಕ್ಕಳಿಗೂ ಅಭ್ಯಾಸ ಹಾಕಬೇಕು,

ನಮ್ಮ ಯುವಕ ಯುವತಿಯರು ನಮ್ಮ ಸಂಸ್ಕೃತಿ ನಮ್ಮ ಸಂಗೀತ ನಮ್ಮ ಸನಾತನ ಧರ್ಮದ ವಿಶೇಷತೆ ಗಳನ್ನು ತಿಳಿದುಕೊಳ್ಳಬೇಕು.!

ಶ್ರೀಕೃಷ್ಣಾರ್ಪಣಮಸ್ತು !!


Share