ಎಂಪಿ ಆದ್ಯಾತ್ಮಿಕ ಅಂಗಳ – ಸತ್ಯನಾರಾಯಣ ವ್ರತ..!*

adyatmika
ಮೈಸೂರು ಪತ್ರಿಕೆ
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ಸತ್ಯನಾರಾಯಣ ವ್ರತ..!*

ಸತ್ಯನಾರಾಯಣ ವಿಷ್ಣುವಿನ ಒಂದು ರೂಪ. ಸತ್ಯನರಯಣನು ನವಗ್ರಹಗಳಿಗೆ ಅಧಿಪತಿ, ನವಗ್ರಹಗಳನ್ನು ನಿಯಂತ್ರಿಸುತ್ತಾನೆ.

ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ.

ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ಸತ್ಯನಾರಾಯಣ ವ್ರತವನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ.

ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ ಕೆಲಸ/ವ್ಯಾಪಾರ ಶುರು ಮಾಡುವ ಮುನ್ನ, ವಿದ್ಯಾಭ್ಯಾಸ/ಪರೀಕ್ಷೆಯ ಸಮಯ ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ.

ತಮ್ಮ ಕಾರ್ಯಗಳಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ.
ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ ಮಾಡಬೇಕುಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ ಪೂಜೆಯನ್ನು ಮಾಡಬಹುದು.

ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸಿ . ಒಂದು ಸಣ್ಣ ಚೊಂಬಿಗೆ ನಿಮ್ಮದೇ ವಡವೆ (ಸರ)ಹಾಕಿ, ಒಳಗೆ ಸ್ವಲ್ಪ ನೀರು ಹಾಕಿ, ಚೊಂಬಿನ ಬಾಯಿಗೆ 2 ವೀಳ್ಯದ ಎಲೆ ಇಟ್ಟು, ಮೇಲೆ ಒಂದು ತೆಂಗಿನಕಾಯಿಇಡಬೇಕು. ಒಂದು ಹೊಸ ಶಲ್ಯವನ್ನು ಈ ಕಳಶದ ಪಾತ್ರೆಯ ಸುತ್ತ ಹೊದಿಸಿ.ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರಮೇಲೆ ಈ ಕಲಶ ಸ್ಥಾಪನೆ ಮಾಡಬೇಕು. ಇದರೊಂದಿಗೆ ಇನ್ನೊಂದು ತಟ್ಟೆಯಲ್ಲಿ ನವಗ್ರಹ ಧಾನ್ಯಗಳನ್ನು ಸಣ್ಣ ದೊನ್ನೆಯಲ್ಲಿ ಇಡಬೇಕು. ಪ್ರತಿ ಧಾನ್ಯದ ಮೇಲೆ ಒಂದು ಹಣ್ಣು, ದಕ್ಷಿಣೆ ಇಡಬೇಕು.ಈ ಧಾನ್ಯಗಳನ್ನು ಸರಿಯಾದ ದಿಕ್ಕಿಗೆ ಇಡಬೇಕು.

ಪೂಜಾ ಸಾಮಾಗ್ರಿ
ಮೊದಲು ಗಣಪತಿ ಪೂಜೆ ಮಾಡಬೇಕು . ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ ಸತ್ಯನಾರಾಯಣನ ಪೂಜೆ ಮಾಡಬೇಕು. ಶ್ರೀ ಸತ್ಯನಾರಾಯಣ ಅಷ್ಟೋತ್ತರ ಇಲ್ಲಿದೆ. ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ನೈವೇದ್ಯಕ್ಕೆ ಸಪಾತ ಭಕ್ಷ್ಯ/ಸಪಾದ ಭಕ್ಷ್ಯ(ಕೇಸರಿ ಭಾತ್ /ಸಜ್ಜಿಗೆ)ಮಾಡಿಕೊಳ್ಳಬೇಕು.ಸಪಾದ ಭಕ್ಷ್ಯ ಮಾಡುವ ವಿಧಾನ ಇಲ್ಲಿದೆ. ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು, ಬಾಳೆಹಣ್ಣು ಉಪಯೋಗಿಸಿ ಮಾಡಬೇಕು.

ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ ಪ್ರಾಸದ ಸ್ವೀಕಾರ ಮಾಡಿ. ಪೂಜೆಗೆ ಇಟ್ಟಿರುವ ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು ದಕ್ಷಿಣೆಯನ್ನು ಸ ತ್ಪಾತ್ರರಿಗೆ ದಾನ ಕೊಡಬೇಕು.

ಹರಿಕಥಾ
ಶ್ರೀ ಗುರುಭ್ಯೋ ನಮಃ | ಹರಿಃ ಓಂ ||
ಶ್ರೀ ಗುರುಗಣಾಧಿಪರಿಂಗೆ ವಂದಿಸಿ, ವಾಗ್ದೇವಿಗೆ ಮಣಿದು, ಸಕಲದೇವರ್ಕಳ ಮನದಿ ನೆನೆದು, ಕುಲದೇವರ ಕುಲಗುರುಗಳ ಪರಮಋಷಿವರ್ಯರ ಧ್ಯಾನಿಸಿ, ಹಿರಿಯರಿಂಗೆ ಮನಸಾ ನಮಿಸಿ..
ಸಪರಿವಾರಸಹಿತ ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ
ಶ್ಲೋಕ ಅಷ್ಟು ಸರಳವಾಗಿ ಇದ್ದು.

ಪ್ರಥಮೋಧ್ಯಾಯಃ |
ಶ್ರೀ ಗುರುಭ್ಯೋ ನಮಃ |
ಶ್ರೀ ಗಣೇಶಾಯ ನಮಃ |
ಶ್ರೀ ಸರಸ್ವತೈ ನಮಃ | ಅವಿಘ್ನಮಸ್ತು ||
ಓಂ ಗಣಾನಾಂ ತ್ವಾ ಗಣಪತಿಗ್^ಮ್ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಂ | ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಸ್ಸೀದ ಸಾದನಂ || ಓಂ ಶ್ರೀ ಮಹಾಗಣಾಧಿಪತಯೇ ನಮಃ ||
ಶ್ರೀ ಸತ್ಯನಾರಾಯಣವ್ರತಕಥಾ ಸಾರಾಮೃತಂ ॥
ಮಮ ಉಪಾತ್ತ ದುರಿತಕ್ಷಯದ್ವಾರ ಶ್ರೀ ರಮಾಸಹಿತಸತ್ಯನಾರಾಯಣಸ್ವಾಮಿದೇವತಾಮುದ್ದಿಶ್ಯ ಶ್ರೀರಮಾಸಹಿತಸತ್ಯನಾರಾಯಣಸ್ವಾಮಿದೇವತಾಪ್ರೀತ್ಯರ್ಥಂ ಅಸ್ಮಿನ್ ಶುಭದಿನೇ ಶೋಭನೇ ಮುಹೂರ್ತೇ ಶುಭವಾಸರೇ ಶುಭನಕ್ಷತ್ರೇ ಶುಭಯೋಗೇ ಶುಭಕರಣೇ ಏವಂಗುಣವಿಶೇಷಣವಿಶಿಷ್ಟಾಯಾಂ ಶುಭತಿಥೌ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯಧೈರ್ಯವಿಜಯಆಯುರಾರೋಗ್ಯಐಶ್ವರ್ಯಾಭಿವೃದ್ಧ್ಯರ್ಥಂ ಧರ್ಮಾರ್ಥಕಾಮಮೋಕ್ಷಚತುರ್ವಿಧಫಲಪುರುಷಾರ್ಥ ಸಿದ್ಧ್ಯರ್ಥಂ ಇಷ್ಟಕಾಮ್ಯಾರ್ಥಸಿದ್ಧ್ಯರ್ಥಂ ಮನೋವಾಂಛಾಫಲಸಿದ್ಧ್ಯರ್ಥಂ ಸಮಸ್ತದುರಿತೋಪದ್ರವಶಾಂತ್ಯರ್ಥಂ ಸಮಸ್ತಮಂಗಲಾವಾಪ್ಯರ್ಥಂ ಶ್ರೀ ರಮಾಸಹಿತಸತ್ಯನಾರಾಯಣವ್ರತಕಥಾಸಾರಾಮೃತಪಾರಾಯಣಂ ಕರಿಷ್ಯೇ ॥
ಅತಃ ಶ್ರೀ ಸ್ಕಂದಪುರಾಣೇ ರೇವಾಖಂಡೇ ಸತ್ಯನಾರಾಯಣವ್ರತಕಥಾಯಾಂ ಪ್ರಥಮೋಧ್ಯಾಯಃ ॥
ಏಕದಾ ನೈಮಿಷಾರಣ್ಯೇ ಋಷಯಃ ಶೌನಕಾದಾಯಃ ।
ಪ್ರಪ್ರಚ್ಛುರ್ಮುನಯಃ ಸರ್ವೇ ಸೂತಂ ಪೌರಾಣಿಕಂ ಖಲು ।।೧॥
ಋಷಯಃ ಊಚುಃ ।।
ವ್ರತೇನ ತಪಸಾ ಕಿಂ ವಾ ಪ್ರಾಪ್ಯತೇ ವಾಂಛಿತಂ ಫಲಂ ।
ತತ್ಸರ್ವಂಶ್ರೋತುಮಿಚ್ಛಾಮಃ ಕಥಯಸ್ವ ಮಹಾಮುನೇ ॥೨॥
ಸೂತ ಉವಾಚ ॥
ನಾರದೇನೈವ ಸಂಪೃಷ್ಟೋ ಭಗವಾನ್ ಕಮಲಾಪತಿಃ ।
ಸುರರ್ಷಯೇ ಯಥೈವಾಹ ತಚ್ಛೃಣುದ್ಧ್ವಂ ಸಮಾಹಿತಾಃ ॥೩॥
ಏಕದಾ ನಾರದೋ ಯೋಗೀ ಪರಾನುಗ್ರಹಕಾಂಕ್ಷಯಾ ।
ಪರ್ಯಟನ್ ವಿವಿಧಾನ್ ಲೋಕಾನ್ ಮರ್ತ್ಯಲೋಕಮುಪಾಗತಃ ।।೪॥
ತತೋ ದೃಷ್ಟ್ವಾ ಜನಾನ್ ಸರ್ವಾನ್ ನಾನಾಕ್ಲೇಶಸಮನ್ವಿತಾನ್ ।
ನಾನಾಯೋನಿಸಮುತ್ಪನ್ನಾನ್ ಕ್ಲಿಶ್ಯಮಾನಾನ್ ಸ್ವಕರ್ಮಭಿಃ ॥೫॥
ಕೇನೋಪಾಯೇನ ಚೈತೇಷಾಂ ದುಃಖನಾಶೋ ಭವೇದ್ಧ್ರುವಂ ।
ಇತಿ ಸಂಚಿಂತ್ಯ ಮನಸಾ ವಿಷ್ಣುಲೋಕಂ ಗತಸ್ತದಾ ॥೬॥
ತತ್ರ ನಾರಾಯಣಂ ದೇವಂ ಶುಕ್ಲವರ್ಣಂ ಚತುರ್ಭುಜಂ ।
ಶಂಖಚಕ್ರಗದಾಪದ್ಮವನಮಾಲಾವಿಭೂಷಿತಂ ॥೭॥
ದೃಷ್ಟ್ವಾ ತಂ ದೇವದೇವೇಶಂ ಸ್ತೋತುಂ ಸಮುಪಚಕ್ರಮೇ ॥
ನಾರದ ಉವಾಚ ॥
ನಮೋ ವಾಙ್ಮನಸಾತೀತರೂಪಾಯಾನಂತಶಕ್ತಯೇ ॥೮॥
ಆದಿಮಧ್ಯಾಂತಹೀನಾಯ ನಿರ್ಗುಣಾಯ ಗುಣಾತ್ಮನೇ ॥
ಸರ್ವೇಷಾಮಾದಿಭೂತಾಯ ಭಕ್ತಾನಾಮಾರ್ತಿನಾಶಿನೇ ।।೯॥
ಶೃತ್ವಾ ಸ್ತೋತ್ರಂ ತತೋ ವಿಷ್ಣುಃ ನಾರದಂ ಪ್ರತ್ಯಭಾಷತ ॥
ಶ್ರೀ ಭಗವಾನುವಾಚ ॥
ಕಿಮರ್ಥಮಾಗತೋsಸಿತ್ವಂ ಕಿಂ ತೇ ಮನಸಿ ವರ್ತತೇ ।
ಕಥಯಸ್ವ ಮಹಾಭಾಗ ತತ್ಸರ್ವಂ ಕಥಯಾಮಿ ತೇ ॥೧೦॥
ನಾರದ ಉವಾಚ ॥
ಮರ್ತ್ಯಲೋಕೇ ಜನಾಃ ಸರ್ವೇ ನಾನಾಕ್ಲೇಶಸಮನ್ವಿತಾಃ ।
ನಾನಾಯೋನಿಸಮುತ್ಪನ್ನಾಃ ಪಚ್ಯಂತೇ ಪಾಪಕರ್ಮಭಿಃ ।।೧೧॥
ತತ್ಕಥಂ ಶಮಯೇನ್ನಾಥ ಲಘೂಪಾಯೇನ ತದ್ವದ ।
ಶ್ರೋತುಮಿಚ್ಛಾಮಿ ತತ್ಸರ್ವಂ ಕೃಪಾಸ್ತಿ ಯದಿ ತೇ ಮಯಿ ॥೧೨।।
ಶ್ರೀಭಗವಾನುವಾಚ ॥
ಸಾಧು ಪೃಷ್ಟಂ ತ್ವಯಾ ವತ್ಸ ಲೋಕಾನುಗ್ರಹಕಾಂಕ್ಷಯಾ ।
ಯತ್ಕೃತ್ವಾ ಮುಚ್ಯತೇ ಮೋಹಾತ್ ತಚ್ಛೃಣುಷ್ವ ವದಾಮಿ ತೇ ॥೧೩॥
ವ್ರತಮಸ್ತಿ ಮಹತ್ಪುಣ್ಯಂ ಸ್ವರ್ಗೇ ಲೋಕೇ ಚ ದುರ್ಲಭಂ ।
ತವ ಸ್ನೇಹಾನ್ಮಯಾ ವತ್ಸ ಪ್ರಕಾಶಃ ಕ್ರಿಯತೇಧುನಾ ॥೧೪॥
ಸತ್ಯನಾರಾಯಣಸ್ಯೈವಂ ವ್ರತಂ ಸಮ್ಯಗ್ವಿಧಾನತಃ ।
ಕೃತ್ವಾ ಸದ್ಯಃ ಸುಖಂ ಭುಂಕ್ತ್ವಾ ಪರತ್ರ ಮೋಕ್ಷಮಾಪ್ನುಯಾತ್ ॥೧೫॥
ತಚ್ಛೃತ್ವಾ ಭಗವದ್ವಾಕ್ಯಂ ನಾರದೋ ಮುನಿರಬ್ರವೀತ್ ॥
ನಾರದ ಉವಾಚ ॥
ಕಿಂ ಫಲಂ ಕಿಂ ವಿಧಾನಂ ಚ ಕೃತಂ ಕೇನೈವ ತದ್ವ್ರತಂ ॥೧೬॥
ತತ್ಸರ್ವಂ ವಿಸ್ತರಾದ್ಬ್ರೂಹಿ ಕದಾ ಕಾರ್ಯಂ ಹಿ ತದ್ವ್ರತಂ ॥
ಶ್ರೀಭಗವಾನುವಾಚ ॥
ದುಃಖಶೋಕಾದಿಶಮನಂ ಧನಧಾನ್ಯಪ್ರವರ್ಧನಂ |
ಸೌಭಾಗ್ಯಸಂತತಿಕರಂ ಸರ್ವತ್ರ ವಿಜಯಪ್ರದಂ ॥೧೭॥
ಮಾಘೇವಾ ಮಾಧವೇ ಮಾಸಿ ಕಾರ್ತಿಕೇವಾ ಶುಭೇದಿನೇ |
ಸಂಗ್ರಾಮಾರಂಭ ವೇಳಾಯಾಂ ಯದಾಕ್ಲೇಶಸ್ಯ ಸಂಭವಃ ||೧೯||
ದಾರಿದ್ರ್ಯಾಶಮನಾರ್ಥಂಚ ವ್ರತಂ ಕಾರ್ಯಂ ವರೇಪ್ಸುಭಿಃ |
ಮಾಸೇ ಮಾಸೇವ ಕರ್ತವ್ಯಂ ವರ್ಷೇವರ್ಷೇ ಭವಾತ್ಪುನಃ ||೨೦||
ಕರ್ತವ್ಯತಾಸ್ತಿ ಹೇ ವಿಪ್ರ ಯಥಾ ವಿಭವಸಾರತಃ |
ಏಕಾದಶ್ಯಾಂ ಪೂರ್ಣಿಮಾಯಾಂ ರವಿ ಸಂಕ್ರಮಣೇಪಿವಾ ||೨೧||
ವ್ರತಂ ಕಾರ್ಯಂ ಮುನಿಶ್ರೇಷ್ಠ ಸತ್ಯನಾರಾಯಣಸ್ಯ ಹಿ |
ಪ್ರಾತಃರುತ್ಥಾಯ ನಿಯತೋ ದಂತಧಾವನ ಪೂರ್ವಕಂ ||೨೨||
ನಿತ್ಯಕರ್ಮ ವಿಧಾಯಾದೌ ಏವಂ ಸಂಕಲ್ಪಯೇನ್ನರಃ |
ಭಗವನ್ದೇವದೇವೇಶ ಸತ್ಯನಾರಾಯಣ ವ್ರತಂ ||೨೩||
ತ್ವತ್ಪ್ರಿಯಾರ್ಥಂ ಕರಿಷ್ಯಾಮಿ ಪ್ರಸೀದ ಕಮಲಾಪತೇ |
ಏವಂ ಸಂಕಲ್ಪ್ಯ ಮಧ್ಯಾಹ್ನೇ ಕೃತ್ವಾ ಮಾಧ್ಯಾಹ್ನಿಕೀ ಕ್ರಿಯಾಃ ||೨೪||
ಸಾಯಂಕಾಲೇ ಪುನಃಸ್ನಾತ್ವಾ ಯಜೇದ್ದೇವಂ ನಿಶಾಮುಖೇ ||
ಪೂಜಾಗೃಹಂ ಸಮಾಸಾದ್ಯ ನಾನಾಲಂಕಾರ ಶೋಭಿತಂ ||೨೫||
ಪೂಜಾಸ್ಥಾನ ವಿಶುದ್ಧ್ಯರ್ಥಂ ಗೋಮಯೇನ ವಿಲೇಪಯೇತ್ |
ತತಃ ಪಂಚವಿಧೈ ಚೂರ್ಣೈಃ ರಂಗವಲ್ಲಿಂ ಪ್ರಕಲ್ಪಯೇತ್ ||೨೬||
ತಸ್ಯೋಪರಿಂ ಯಶೇದ್ವಸ್ತ್ರಂ ಸದಶಂ ನೂತನಂ ದೃಢಂ |
ತಂಡುಲಂ ತತ್ಪ್ರವ್ಯಶ್ಚ ತನ್ಮಧ್ಯೇ ಕಲಶಂ ಯಶೇತ್ ||೨೭||
ರಾಜತಂ ವಾಧವಾ ತಾಮ್ರ ಮಾರಕೂಟೇನ ನಿರ್ಮಿತಂ |
ದ್ರವ್ಯಾಭಾವೇ ಮಾರ್ಚಿಕಂವಾ ವಿತ್ತಶಾಠ್ಯಂ ನ ಕಾರಯೇತ್ ||೨೮||
ತಸ್ಯೋಪರಿನ್ಯಸೀದ್ವಸ್ತ್ರಂ ಸದಶಂ ನೂತನಂ ದೃಢಂ |
ತಸ್ಯೋಪರಿನ್ಯಸೇದ್ದೇವಂ ಸತ್ಯನಾರಾಯಣಂ ಪ್ರಭುಂ ||೨೯||
ಕರ್ಷಮಾತ್ರ ಸುವರ್ಣೇನ ತದದಾರ್ಥೇನ ವಾಪುನಃ |
ಪ್ರತಿಮಾಂ ಕಾರಯೇದ್ವಿಪ್ರ ಸತ್ಯದೇವಸ್ಯ ಸತ್ಪತೇಃ ||೩೦||
ಪಂಚಾಮೃತೇನ ಸುಸ್ನಾತಂ ಮಂಟಪೋ ಪರಿವಿನ್ಯಶೇತ್ |
ವಿಘ್ನೇಶಃ ಪದ್ಮಜಾ ವಿಷ್ಣುಃ ಮಹಾದೇವಶ್ಚ ಪಾರ್ವತೀ ||೩೧||
ಆದಿತ್ಯಾದಿ ಗ್ರಹಾಃ ಸರ್ವೇ ಶಕ್ರಾದ್ಯಷ್ಟ ದಿಗೀಶ್ವರಾಃ |
ಅತ್ರಾಂಗದೇವತಾಃ ಪ್ರೋಕ್ತಾತಸ್ಮಾದಗ್ರೇ ಪ್ರಪೂಜಯೇತ್ ||೩೨||
ಅಗ್ರತಃ ಕಲಶೇ ದೇವಂ ವರುಣಂ ಪೃಥಕರ್ಚಯೇತ್ |
ಗಣೇಶಪ್ರಭೃತೀಂ ಪಂಚ ಕಲಶಸ್ಯೋತ್ತರೇ ನ್ಯಶೇತ್ ||೩೩||
ತತ್ತನ್ಮಂತ್ರೈಃ ಪುರಾಕ್ಸಮಾಪ್ಯಾಂ ಪೂಜನೀಯಾಃ ಪ್ರಯತ್ನತಃ |
ಕಲಶಶ್ಚತುಪಶ್ಚಾದ್ವೈ ಗ್ರಹಾಃ ಸೂರ್ಯಪುರಸ್ಸರಾಃ ||೩೪||
ಬುಧಕ್ಸಮಾಪ್ಯ ಸಂಸ್ಥಾಪ್ಯ ಪೂಜನೀಯಾಃ ಪ್ರಯತ್ನತಃ |
ಪೂರ್ವಾದಿದಿಕ್ಷಿತೇಂದ್ರಾದೀನ್ ಪೂಜಯೇತ್ ಶುದ್ಧಮಾನಸಃ ||೩೫||
ತತೋ ನಾರಾಯಣಂ ದೇವಂ ಕಲಶೇ ಪುಜಯೇತ್ಪುಧೀಃ |
ಚಾತುರ್ವರ್ಣೈಃ ವ್ರತಂ ಕಾರ್ಯಂ ಸ್ತ್ರೀಭಿರ್ವಾಪಿ ಮುನೀಶ್ವರ ||೩೬||
ಪೌರಾಣಿಕೈರ್ವೈದಿಕೈಶ್ಚ ಮಂತ್ರೈರ್ರ್ಬ್ರಾಹ್ಮಣ ಸತ್ತಮಃ |
ಕಲ್ಪೋಕ್ತವಿಧಿನಾ ಕುರ್ಯಾತ್ ಸತ್ಯದೇವಸ್ಯ ಪೂಜನಂ ||೩೭||
ಪೌರಾಣಿಕೈರೇವ ಮಂತ್ರೈಃ ಪೂಜಾ ಪೂಜಾಂ ದ್ವಿಜೇತರಃ |
ಯಸ್ಮಿನ್ ಕಸ್ಮಿನ್ ದಿನೇ ಮರ್ತ್ಯೋ ಭಕ್ತಿಶ್ರದ್ಧಾಸಮನ್ವಿತಃ ||೩೮||
ಸತ್ಯನಾರಾಯಣಂ ದೇವಂ ಯಜೇಚ್ಚೈವ ನಿಶಾಮುಖೇ |
ಬ್ರಾಹ್ಮಣೈರ್ಭಾಂಧವೈಶ್ಚೈವ ಸಹಿತೋ ಧರ್ಮತತ್ಪರಃ ||೩೯||
ನೈವೇದ್ಯಂ ಭಕ್ತಿತೋ ದದ್ಯಾತ್ ಸಪಾದಂ ಭಕ್ಷ್ಯಮುತ್ತಮಂ |
ರಂಭಾಫಲಂ ಘೃತಂ ಕ್ಷೀರಂ ಗೋಧೂಮಸ್ಯ ಚ ಚೂರ್ಣಕಂ |||೪೦||
ಅಭಾವೇ ಶಾಲೀಚೂರ್ಣಂ ವಾ ಶರ್ಕರಾಂ ವಾ ಗುಡಂ ತಥಾ |
ಸಪಾದಂ ಸರ್ವಭಕ್ಷ್ಯಾಣಿ ಚೈಕೀಕೃತ್ಯ ನಿವೇದಯೇತ್ ||೪೧||
ವಿಪ್ರಾಯ ದಕ್ಷಿಣಾಂ ದದ್ಯಾತ್ಕಥಾಂ ಶ್ರುತ್ವಾ ಜನೈಃ ಸಹ |
ತತಶ್ಚ ಬಂಧುಭಿಃ ಸಾರ್ಧಂ ವಿಪ್ರಾಂಶ್ಚ ಪ್ರತಿಭೋಜಯೇತ್ ||೪೨||
ಸಪಾದಂ ಭಕ್ಷಯೇದ್ಭಕ್ತ್ಯಾ ನೃತ್ಯಗೀತಾದಿಕಂ ಚರೇತ್ |
ತತಶ್ಚ ಸ್ವಗೃಹಂ ಗಚ್ಛೇತ್ ಸತ್ಯನಾರಾಯಣಂ ಸ್ಮರನ್ ||೪೩||
ಏವಂ ಕೃತೇ ಮನುಷ್ಯಾಣಾಂ ವಾಂಛಾಸಿದ್ಧಿರ್ಭವೇದ್ಧ್ವ್ರುವಂ।
ವಿಶೇಷತಃ ಕಲಿಯುಗೇ ಲಘೂಪಾಯೋಸ್ತಿ ಭೂತಲೇ ॥ ೪೪ ॥
।। ಇತಿ ಶ್ರೀ ಸ್ಕಂದಪುರಾಣೇ ರೇವಾಖಂಡೇ ಸತ್ಯನಾರಾಯಣವ್ರತ ಕಥಾಯಾಂ ಪ್ರಥಮೋಧ್ಯಾಯಃ ।।

ಭಾವಾರ್ಥ :
‘ಏಕದಾ ನೈಮಿಷಾರಣ್ಯೇ ಋಷಯಃ ಶೌನಕಾದಾಯಃ’ – ಒಂದು ದಿನ ನೈಮಿಷಾರಣ್ಯಲ್ಲಿ ಶೌನಕನೇ ಮೊದಲಾದ ಋಷಿಗೊ ಸೂತಪೌರಾಣಿಕನ ಪ್ರಶ್ನಿಸುತ್ತವು.
‘ಎಲೈ ಮಹಾಮುನಿಯೇ, ಈ ಪ್ರಪಂಚಲ್ಲಿ ಮನುಷ್ಯರು ತಮ್ಮ ಮನಸ್ಸಿನ ಇಷ್ಟಾರ್ಥಂಗಳ ಪಡವಲೆ ಭಗವದ್ಕ್ರುಪೆಗೆ ಪಾತ್ರನಪ್ಪಲೆ ಯಾವ ವ್ರತವ ಮಾಡೇಕು, ಎಂತಹ ತಪಸ್ಸು ಆಚರುಸೇಕು ಇತ್ಯಾದಿ ವಿಷಯಂಗಳ ತಿಳಿಯೇಕು ಹೇಳಿ ಕುತೂಹಲ ಉಂಟಾಯ್ದು. ಅವೆಲ್ಲವ ನಿಂಗೊ ವಿಸ್ತಾರವಾಗಿ ತಿಳಿಯಪಡುಸೆಕು’ ಹೇಳಿ ಪ್ರಾರ್ಥಿಸಿಗೊಂಡವು.
ಅದಕ್ಕೆ ಸೂತಪೌರಾಣಿಕ ಹೇಳುತ್ತ° – ಋಷಿಗಳೇ, ಲೋಕದ ಜನಂಗೊಕ್ಕೆ ಉಪಕಾರ ಆಯೇಕು ಹೇಳ್ವ ಉದಾರಬುದ್ಧಿಯಿಂದ ನಿಂಗೊ ಕೇಳಿದ ಈ ಪ್ರಶ್ನೆ ಬಹಳ ಯೋಗ್ಯವಾದ್ದು.
ಮದಲಿಂಗೆ, ಇದೇ ಪ್ರಶ್ನೆಯ ಯೋಗಿವರ್ಯನಾದ ನಾರದಮಹರ್ಷಿ ಭಗವಾನ್ ಶ್ರೀಮನ್ನಾರಾಯಣನತ್ರೆ ಕೇಳಿತ್ತಿದ್ದ°.
ಅಂಬಗ ಭಗವಂತ° ನಾರದಂಗೆ ಎಂತ ಉತ್ತರ ಕೊಟ್ಟಿದನೋ ಅದನ್ನೇ ನಿಂಗೊಂಗೀಗ ಹೇಳುತ್ತೆ. ‘ಏಕದಾ ನಾರದೋ ಯೋಗೀ ಪರಾನುಗ್ರಹಕಾಂಕ್ಷಯಾ’ – ‘ಹಿಂದೆ ಒಂದು ಸರ್ತಿ, ನಾರದ ಮಹಾಮುನಿ ಲೋಕಾನುಗ್ರಹಕ್ಕಾಗಿ ಲೋಕಲೋಕಾಂತರಲ್ಲಿ ಸುತ್ತಾಡುತ್ತಾ ನಮ್ಮ ಈ ಮರ್ತ್ಯ ಲೋಕಕ್ಕೆ ಬಂದ°. ಇಲ್ಲಿ ಮನುಷ್ಯರು ಅವು ಮಾಡಿದ ದುಷ್ಕರ್ಮಂದಾಗಿ ಅನೇಕ ರೀತಿಯ ಕಷ್ಟಕಾರ್ಪಣ್ಯಂಗೊಕ್ಕೆ ಬಲಿಯಾಗಿ ನಾನಾ ರೀತಿಯ ಸಂಕಷ್ಟಂಗಳ ಅನುಭವಿಸಿ ನರಳಿಗೊಂಡಿತ್ತಿದ್ದರ ಕಂಡು ಮನನೊಂದು ಒಳ್ಳೆತ ಬೇಜಾರು ಮಾಡಿಗೊಂಡನಡ. ಯಾವ ಉಪಾಯಂದ ಮನುಷ್ಯರ ಈ ರೀತ್ಯ ತೊಂದರೆಗಳ ದೂರ ಮಾಡಿ ಅವರ ಕಷ್ಟಂಗಳ ಪರಿಹರಿಸಲಕ್ಕು ಹೇಳಿ ಚಿಂತಿಸಿಗೊಂಡು ಸೀದಾ ಮಹಾವಿಷ್ಣುವಿನ ವಾಸಸ್ಥಾನವಾದ ವೈಕುಂಠಕ್ಕೆ ನಾರದ ಹೋದ°.
‘ತತ್ರ ನಾರಾಯಣಂ ದೇವಂ ಶುಕ್ಲವರ್ಣಂ ಚತುರ್ಭುಜಂ । ಶಂಖಚಕ್ರಗದಾಪದ್ಮವನಮಾಲಾವಿಭೂಷಿತಂ’ – ಅಲ್ಲಿ ಶಂಖಚಕ್ರಗದಾಪದ್ಮಂಗಳ ಧರಿಸಿದ, ನಾಲ್ಕು ಕೈಗಳಿಂದಲೂ, ವನಮಾಲೆಯಿಂದಲೂ ಶೋಭಿಸುತ್ತಿಪ್ಪ ಶ್ವೇತಾಂಗನಾದ ಶ್ರೀಮನ್ನಾರಾಯಣನ ಕಂಡು ಈ ರೀತಿ ಸ್ತೋತ್ರಮಾಡಿದ° – ‘ನಮೋ ವಾಙ್ಮನಸಾತೀತರೂಪಾಯಾನಂತಶಕ್ತಯೇ……..’ – “ಮಾತಿಂಗೂ ಮನಸ್ಸಿಂಗೂ ಗೋಚರವಾಗದ ರೂಪವುಳ್ಳ, ಅನಂತಶಕ್ತಿಸಂಪನ್ನನೂ, ಆದಿ ಮಧ್ಯ ಅಂತ್ಯ ಇಲ್ಲದವನೂ, ನಿರ್ಗುಣನೂ, ಈ ಪ್ರಪಂಚಕ್ಕೆಲ್ಲ ಆದಿಕಾರಣನೂ, ಭಕ್ತರ ದುಃಖಂಗಳ ಪರಿಹರಿಸುವವನೂ ಆದ ಓ ಆದಿನಾರಾಯಣನೇ, ನಿನನಗೆ ಅನಂತ ಪ್ರಣಾಮಂಗಳ ಮಾಡುತ್ತೆ”. ನಾರದಮುನಿಗಳ ಸ್ತೋತ್ರವ ಕೇಳಿ ಸಂತುಷ್ಟನಾದ ಭಗವಂತ ಹೇಳಿದ°- “ಓ ನಾರದ ಮುನಿಯೇ, ನೀನು ಇಲ್ಲಿಗೆ ಎಂತಕೆ ಬಂದೆ?, ನಿನ್ನ ಮನಸ್ಸಿಲ್ಲಿಪ್ಪ ಅಭಿಲಾಷೆ ಎಂತರ. ಅವೆಲ್ಲವ ಯಾವ ಸಂಕೋಚ ಇಲ್ಲದ್ದೆ ಹೇಳು. ಆನು ಪೂರಯಿಸಿ ಕೊಡುತ್ತೆ”.
ನಾರದ ಹೇಳುತ್ತ° – “ ಭಗವಂತ, ಆನು ಲೋಕಸಂಚಾರ ಮಾಡಿಗೊಂಡು ಮರ್ತ್ಯಲೋಕಕ್ಕೆ ಹೋಗಿತ್ತಿದ್ದೆ. ಅಲ್ಲಿ ಅಜ್ಞಾನಿಗಳಾದ ಮನುಜರು ಅವ್ವವ್ವು ಮಾಡಿದ ಯಾವುದೋ ದುಷ್ಕರ್ಮಂದಾಗಿ ಅನೇಕ ರೀತಿಯ ಕಷ್ಟಕಾರ್ಪಣ್ಯಂಗಳ ಅನುಭವಿಸಿಗೊಂಡು ನೊಂದು ಬೇಂದು ಸೋತು ತೊಳಲಾಡುತ್ತಾ ಇದ್ದವು. ಅವರ ಕಷ್ಟಂಗಳ ಪರಿಹರುಸೆಕ್ಕಾದರೆ ಯಾವುದಾರು ಸುಲಭ ಉಪಾಯ ಇದ್ದ ಹೇಳಿ ತಿಳ್ಕೊಂಬಲೆ ಬೇಕಾಗಿ ನಿನ್ನ ಸನ್ನಿಧಿಗೆ ಬಯಿಂದೆ. ದಯದೋರಿ ಎನಗೆ ಅದರ ತಿಳುಸು” ಹೇಳಿ ಭಕ್ತಿಂದ ಪ್ರಾರ್ಥಿಸಿಗೊಂಡ. ಲೋಕಾನುಗ್ರಹ ಆಯೆಕ್ಕು ಹೇಳ್ವ ಇಚ್ಛೆಂದ ನಾರದ° ಮಾಡಿದ ಪ್ರಾರ್ಥನೆಯ ಕೇಳಿ ಪರಮ ಸಂತುಷ್ಟನಾದ ಶ್ರೀ ಮಹಾವಿಷ್ಣುವು – “ವತ್ಸ, ನಾರದ, ನಿನ್ನ ಈ ಪರೋಪಕಾರಬುದ್ಧಿಯ ನೋಡಿ ತುಂಬಾ ಮೆಚ್ಚುಗೆ ಆತು. ಜನರ ಅಜ್ಞಾನವ ಹೋಗಲಾಡಿಸಿ ಅವರ ಪರಮ ಸುಖಿಗಳಾಗಿ ಮಾಡಲೆಡಿಗಪ್ಪ ಸುಲಭವಾದ ಒಂದು ಉಪಾಯ ಇದ್ದು. ‘ವ್ರತಮಸ್ತಿ ಮಹತ್ಪುಣ್ಯಂ ಸ್ವರ್ಗೇ ಲೋಕೇ ಚ ದುರ್ಲಭಂ..’ -ಸ್ವರ್ಗ ಮರ್ತ್ಯ ಪಾತಾಳ ಲೋಕಂಗಳಲ್ಲಿ ಇಷ್ಟನ್ನಾರ ಆರಿಂಗೂ ಗೊಂತಿಲ್ಲದ್ದ ಪುಣ್ಯಪ್ರದವಾದ ಒಂದು ವ್ರತ ಇದ್ದು. ನಿನ್ನ ಮೇಲೆ ಎನಗೆ ತುಂಬಾ ವಾತ್ಸಲ್ಯ ಇಪ್ಪದರಿಂದ ಆ ವ್ರತ ಯಾವುದು ಹೇಳಿ ನಿನ್ನತ್ರೆ ಹೇಳುತ್ತೆ. ‘ಸತ್ಯನಾರಾಯಣಸ್ಯೈವಂ ವ್ರತಂ ಸಮ್ಯಗ್ವಿಧಾನತಃ..’ – “ಶ್ರೀ ಸತ್ಯನಾರಾಯಣವ್ರತ” ಎಂಬ ಹೆಸರಿನ ಈ ವ್ರತವ ಯಾವಾತ° ವಿಧಿಪ್ರಕಾರವಾಗಿ ಮಾಡುತ್ತನೋ, ಅವ° ಇಹಲೋಕಲ್ಲಿ ಪರಮಸುಖಿಯಾಗಿ ಬದುಕಿ ಮತ್ತೆ ಮೋಕ್ಷವ ಪಡೆತ್ತ°”.
ಶ್ರೀ ಮಹಾವಿಷ್ಣು ಹೇಳಿದ ಮಾತುಗಳ ಕೇಳಿ ನಾರದ – “ ದೇವದೇವ, ಈ ವ್ರತವ ಯಾವಾಗ ಮಾಡೆಕ್ಕಾದ್ದು?, ಇದರ ಆಚರುಸುವ ವಿಧಿವಿಧಾನ ಹೇಂಗೆ? ಇದರ ಫಲ ಎಂತರ? ಈ ಮದಲೆ ಈ ವ್ರತವ ಆರು ಮಾಡಿ ಫಲ ಸಿಕ್ಕಿದ್ದು? ಇತ್ಯಾದಿ ವಿಚಾರಂಗಳನ್ನೂ ತಿಳಿಯೇಕ್ಕು ಹೇಳಿ ಮನಸ್ಸಾಯ್ದು. ದಯೆದೋರಿ ಎಲ್ಲವನ್ನೂ ವಿವರಿಸಿ ಹೇಳುವಿರೋ” ಹೇಳಿ ಭಿನ್ನವಿಸಿಗೊಂಡ°.
ಭಗವಂತ ಹೇಳುತ್ತ° – ‘ದುಃಖಶೋಕಾದಿಶಮನಂ ಧನಧಾನ್ಯಪ್ರವರ್ಧನಂ, ಸೌಭಾಗ್ಯಸಂತತಿಕರಂ ಸರ್ವತ್ರ ವಿಜಯಪ್ರದಂ…’ “ ಎಲೈ ನಾರದನೇ, ಸೌಭಾಗ್ಯ, ಸಂತಾನ, ಸರ್ವಕಾರ್ಯಂಗಳಲ್ಲಿ ಜಯ ಮುಂತಾದವುಗಳ ಕೊಡುವ ಈ ವ್ರತವ ಭಕ್ತಿಶ್ರದ್ಧೆಂದ ಆ ದಿನ ಉಪವಾಸ ಇದ್ದುಗೊಂಡು ಆರುಬೇಕಾರು, ಯಾವ ದಿನಲ್ಲಿ ಬೇಕಾರೂ, ಯಾವ ಹೊತ್ತಿಲ್ಲಿ ಬೇಕಾರೂ, ಸಂಧ್ಯಾಕಾಲಲ್ಲಿ ಕೂಡ ಮಾಡ್ಳಕ್ಕು. ತಿಂಗಳು ತಿಂಗಳು ಮಾಡುತ್ತೆ ಹೇಳಿಯೋ, ವರ್ಷವರ್ಷ ಮಾಡುತ್ತೆ ಹೇಳಿಯೋ, ಏಕಾದಶೀ, ಹುಣ್ಣಮೆ, ಸಂಕ್ರಾಂತಿ ಇತ್ಯಾದಿ ವಿಶೇಷ ದಿನಂಗಳಲ್ಲಿ ಮಾಡುತ್ತೆ ಹೇಳಿಯೋ ಸಂಕಲ್ಪಿಸಿಗೊಂಡು ಪೂಜೆ ಮಾಡ್ಳಕ್ಕು. ಆ ದಿನ ಪ್ರಾತಃಕಾಲಲ್ಲಿ ಎದ್ದು, ನಿತ್ಯಾಹ್ನಿಕ ಪೂರೈಸಿ, ಸರ್ವಾಭೀಷ್ಟಫಲಪ್ರದಾಯಕನಾದ ಶ್ರೀಮನ್ನಾರಾಯಣನ ಮನಸ್ಸಿಲ್ಲಿ ಧ್ಯಾನಿಸಿಗೊಂಡು ಅವನ ಪ್ರೀತ್ಯರ್ಥಕ್ಕಾಗಿ ಪೂಜೆಮಾಡುತ್ತೆ ಹೇಳಿ ಮನಸ್ಸಿಲ್ಲಿ ಸಂಕಲ್ಪಿಸಿಗೊಂಡು (ನಂಬಿಗೊಂಡು) ಕಲಶನೀರು ತೆಗದಿರಿಸಿಗೊಂಬದು. ಮತ್ತು ಪೂಜಾದ್ರವ್ಯ ಮತ್ತು ಸಾಮಾಗ್ರಿಗಳನ್ನೂ ರೆಡಿಮಾಡಿಕೊಂಡು. ವೈದಿಕರನ್ನೂ, ನೆಂಟರಿಷ್ಟರನ್ನೂ ಆಹ್ವಾನಿಸಿ. ಮಾಧ್ಯಾಹ್ನಿಕವನ್ನೂ ಪೂರೈಸಿ ದಿನವಿಡೀ ಉಪವಾಸ ಇದ್ದು ಸಾಯಂಕಾಲ ಪುನಃ ಮಿಂದು ಶುಚಿರ್ಭೂತನಾಗಿ ಸಾಯಂ ಅನುಷ್ಠಾನ ಮಾಡಿ ಪೂಜಾಗೃಹ ಸೇರಿ ಮಂಟಪ ರಚಿಸಿ ಅಲಂಕರಿಸುವುದು,

ಪೂಜಾಸ್ಥಳವ ಗೋಮಯದಿಂದ ತೊಳದು ಶುದ್ಧೀಕರಿಸಿ ಕುಲಗುರುಗಳ ಉಪಸ್ಥಿತಿಲಿ ಪಂಚವರ್ಣ ಹುಡಿಲಿ ರಂಗವಲ್ಲಿ ಹಾಕಿ ಪೂಜಾಮಂಡಲ ಮಾಡುವದು. ತಟ್ಟೇಲಿ ಅಕ್ಕಿಹಾಕಿ ಅದರ ಮೇಗೆ ಶಾಸ್ತ್ರೋಕ್ತ ಕಲಶಸ್ಥಾಪನೆ ಮಾಡುವದು. ಅದರ ಮೇಗೆ ಸತ್ಯನಾರಾಯಣ ಪ್ರತಿಮೆ ಇರಿಸಿ ವೈದಿಕಲ್ಲಿ ಹೇಳಿದ ಪ್ರಕಾರ ಸಪರಿವಾರ ಸಹಿತ ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪಂಚೋಪಚಾರ, ಷೋಡಶೋಪಚಾರ ಪೂಜೆ, ಅಭಿಷೇಕ ಸಹಸ್ರನಾಮ ಅಷ್ಟೋತ್ತರ ಇತ್ಯಾದಿ ಕಲ್ಪೋಕ್ತ ವಿಧಿಲಿ ಪೂಜಿಸುವದು.

‘ರಂಭಾಫಲಂ ಘೃತಂ ಕ್ಷೀರಂ ಗೋಧೂಮಸ್ಯ ಚ ಚೂರ್ಣಕಂ । ಅಭಾವೇ ಶಾಲೀಚೂರ್ಣಂ ವಾ ಶರ್ಕರಾಂ ವಾ ಗುಡಂ ತಥಾ । ಸಪಾದಂ ಸರ್ವಭಕ್ಷ್ಯಾಣಿ ಚೈಕೀಕೃತ್ಯ ನಿವೇದಯತ್..’ ಯಾವುದೇ ಅಳತೆಯ ಪರಿಮಾಣದ ಒಂದೂಕಾಲು ಭಾಗದಷ್ಟು ಬಾಳೆಹಣ್ಣು, ತುಪ್ಪ, ಹಾಲು, ಗೋಧಿಹುಡಿ, ಅಥವಾ ಅಕ್ಕಿಹೊಡಿ ಮತ್ತು ಸಕ್ಕರೆ ಅಥವಾ ಬೆಲ್ಲ ಒಂದುಗೂಡುಸಿ ಬೇಶಿ ಪಾಕಮಾಡಿ “ಸಪಾದ” ಎಂಬ ಭಕ್ಷ್ಯವಿಶೇಷವ ತಯಾರಿಸಿ ದೇವರಿಂಗೆ ನೈವೇದ್ಯ ಮಾಡೇಕ್ಕು. ಪುರೋಹಿತರಿಂಗೆ ಯಥಾಶಕ್ತಿ ದಕ್ಷಿಣೆ ಕೊಟ್ಟು ಸತ್ಕರಿಸಿ ಅವರ ಆಶೀರ್ವಾದ ಪಡದು ಅವರ ಮುಖೇನ ಸತ್ಯನಾರಾಯಣ ಕಥೆಯ ಕೇಳುವುದು ಬಂದವರೆಲ್ಲ ಒಂದುಗೂಡಿಸಿ ಭೂರಿಭೋಜನವ ಇತ್ತು ಸತ್ಕರಿಸಿ. ಬಳಿಕ ಮನೋವಿನೋದಕ್ಕಾಗಿ ಸತ್ಯನಾರಾಯಣ ಕಥಾಭಾಗ ಕೂಡಿದ ನೃತ್ಯಗೀತಾದಿಗಳ ಏರ್ಪಡಿಸಿ. ಆಮೇಲೆ ಶ್ರೀ ಸತ್ಯನಾರಾಯಣ ದೇವರ ಸ್ಮರಿಸಿಗೊಂಡು ಅವರವರ ಮನೆಗೆ ಬಿಳ್ಕೊಡುವುದು

*!! ಶ್ರೀಕೃಷ್ಣಾರ್ಪಣಮಸ್ತು !!*


Share