ಎಂಪಿ ಆಧ್ಯಾತ್ಮಿಕ ಅಂಗಳ:ಕೃತ ಯುಗ ಅಥವಾ ಸತ್ಯ ಯುಗ..!

12
adyatmika
ಮೈಸೂರು ಪತ್ರಿಕೆ
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ಕೃತ ಯುಗ ಅಥವಾ ಸತ್ಯ ಯುಗ..!*

ಮನುಷ್ಯನ ಆಯುಷ್ಯ=100000
ಮನುಷ್ಯನ ಎತ್ತರ =32 ಅಡಿಗಿಂತಲೂ ಹೆಚ್ಚು.
ಈ ಯುಗದ ತೀರ್ಥ = ಪುಷ್ಕರ್ಣಿ.
ಪುಣ್ಯದ ಪ್ರಮಾಣ 100%
ಪಾಪದ ಪ್ರಮಾಣ =0%
ಯುಗದ ಆಯುಷ್ಯ 17,2800 ವರ್ಷಗಳು.
ಸತ್ಯ ಯುಗ ಅಂತ್ಯದಲ್ಲಿ ಪಾಪಿಷ್ಟರ ಜನ್ಮ.
ದೇವರ ಅವತಾರಗಳು=(ದಶವಾತಾರ )
ಮತ್ಸ್ಯ, ಕೂರ್ಮ,ವರಾಹ,ಮತ್ತು ನರಸಿಂಹ ಅವತಾರಗಳು ಸಂಭವಿಸಿದವು.
*ಯುಗದ ಗುಣಧರ್ಮ*
ಈ ಯುಗದಲ್ಲಿ ಧರ್ಮ ನಾಲ್ಕು ಪಾದದ ಮೇಲೆ ನಿಂತಿತ್ತು.
ಈ ಯುಗದಲ್ಲಿ ಮನುಷ್ಯರು ಸತ್ಯ ವ್ರತರಾಗಿದ್ದರು ಧ್ಯಾನ ಧಿರ್ಘ ತಪ್ಪಸ್ಸನ್ನು ಅನುಷ್ಠಾನ ಮಾಡುತಿದ್ದರು.
ಮತ್ತು ಅಪಾರ ಶಕ್ತಿವಂತರು ಆಗಿದ್ದರು.ಈ ಯುಗದಲ್ಲಿ ದೈವ ಭಕ್ತ ಮನುಷ್ಯರಿಗೂ ಭಗವಂತನಿಗೂ ನೇರವಾಗಿ ಸಂಪರ್ಕ ಇರುತಿತ್ತು.
ಈ ಯುಗವನ್ನು ಸುವರ್ಣ ಯುಗವೆಂತಲು ಕರೆಯುತ್ತಾರೆ.
ಈ ಯುಗದಲ್ಲಿ ಪ್ರಜೆಗಳು ವೈವಾಹಿಕ ಜೀವನಕ್ಕೆ ಹೆಚ್ಚಾಗಿ ಮಹತ್ವ ಕೊಡುತ್ತಿರಲಿಲ್ಲ.
ಬ್ರಹ್ಮಚರ್ಯ ವ್ರತಕ್ಕೆ ಮಹತ್ವ ಕೊಡುತಿದ್ದರು.
ವಿವಾಹಿತರು ಏಕ ಪತ್ನಿ ವೃತಸ್ತ ರಾಗಿರುತಿದ್ದರು.
ಜ್ಞಾನ,ಧ್ಯಾನ ಮತ್ತು ಶಾಂತಿ ಸತ್ಯಯುಗದ ಪ್ರಧಾನ ಮುಖಗಳಾಗಿದ್ದವು.
ಮಾನವನು ಎಲ್ಲಾ ಭ್ರಮೆಗಳಿಂದ ಮುಕ್ತನಾಗಿದ್ದನು.
ಶಿವ ಮತ್ತು ಸತಿ ದೇವಿಯ ವಿವಾಹವು ಸತ್ಯಯುಗದಲ್ಲಿ ನಡೆದಿತ್ತು.
ಸತ್ಯಯುಗದಲ್ಲಿ ಭಗವಂತ ಬಿಳಿ ಮತ್ತು ನಾಲ್ಕು ತೋಳುಗಳನ್ನು ಹೊಂದಿದ್ದನು,
ಸತ್ಯಯುಗದಲ್ಲಿ ಭಗವಂತನು ಹಂಸ, ಸುಪರ್ಣ,ವೈಕುಂಠ, ಧರ್ಮ,ಯೋಗೇಶ್ವರ, ಅಮಲ,ಈಶ್ವರ,ಪುರುಷ, ಅವ್ಯಕ್ತ ಮತ್ತು ಪರಮಾತ್ಮ ಎಂಬ ಹೆಸರುಗಳಿಂದ ವೈಭವೀಕರಿಸಲ್ಪಟ್ಟಿದ್ದಾನೆ.
ಕಾಲ ಕ್ರಮೇಣ ಮನುಷ್ಯನ ಸ್ವಭಾವದಲ್ಲಿ ಬದಲಾವಣೆಗಳು ಹುಟ್ಟಿ ಮನುಷ್ಯರಲ್ಲಿ ವರ್ಣಾಶ್ರಮಗಳು ಹುಟ್ಟಿಕೊಡವು ವರ್ಗಗಳು ಹುಟ್ಟಿಕೊಂಡು.
ಇದೇ ತ್ರೇತಾ ಯುಗಕ್ಕೆ ನಾಂದಿ ಹಾಡಿತು.
ಬರಹ ಮುಂದಿನ ಯುಗಕ್ಕೆ ಮುಂದುವರೆಯುತ್ತದೆ…..
ಜೈ ಶ್ರೀ ರಾಮ್


Share