ಕೃಪೆ ಆದ್ಯಾತ್ಮಿಕ ವಿಚಾರ ಬಳಗ
*ನೆಮ್ಮದಿಯೆಂಬ ನಿಧಿ..!*
ಕೆಲವರ ಬಳಿ ಕೊಳೆತು ಹೋಗುವಷ್ಟು ಹಣವಿರುತ್ತದೆ. ಆದರೂ ಅವರು ಬಡವರಾಗಿಯೇ ಇರುತ್ತಾರೆ!! ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು, ಆದರೂ ಇದು ನಿಜ! ಜೇಬಿನಲ್ಲಿ, Bankನಲ್ಲೇನೋ ಬೇಕಾದಷ್ಟು ಹಣವಿರುತ್ತದೆ, ಆದರೆ ಮನಸ್ಸಿನ ಅಂತರಂಗದಲ್ಲಿ ನೆಮ್ಮದಿಯೆಂಬ ಧನವಿರುವುದಿಲ್ಲ!! ಇಂತವರು ಲಕ್ಷಾಂತರ ಹಣವನ್ನು ವ್ಯಯಿಸಿ ಪ್ರಪಂಚದ ಸುಂದರ ಸ್ಥಳಗಳಿಗೆ ಹೋಗುವ ಟಿಕೆಟನ್ನು ಖರೀದಿಸಬಲ್ಲರು. ಆದರೆ ಅಲ್ಲಿಗೆ ತಲುಪಿದ ನಂತರವೂ ಸಂತೋಷವನ್ನು ಖರಿದಿಸಲು ಆಗುವುದಿಲ್ಲ!! ತುಂಬಾ ಹಣ ವ್ಯಯಿಸಿ ಔಷಧಿಗಳನ್ನು ಖರೀದಿಸಬಲ್ಲರು. ಆದರೆ ಆರೋಗ್ಯವನ್ನು ಖರೀದಿಸಲಾಗದು!! ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಉನ್ನತ ಗುಣಮಟ್ಟದ ಹಾಸಿಗೆಯನ್ನು ಖರೀದಿಸಬಹುದು. ಆದರೆ ಸಹಜ ನಿದ್ರೆಯನ್ನು ಖರಿದಿಸಲಾಗುವುದಿಲ್ಲ!! ಹಾಗಾದರೆ ಹಣವಿದ್ದ ತಕ್ಷಣ ದು:ಖ ದೂರ ಹೋಗಲಿಲ್ಲವಲ್ಲ!! ನೆಮ್ಮದಿ ನಮ್ಮತ್ತ ಧಾವಿಸಿ ಬರಲಿಲ್ಲವಲ್ಲ!!
ನೆಮ್ಮದಿಯ ಮೊದಲ ಶತ್ರು Expectation!!
ಜೀವನದಲ್ಲಿ ಹಣ, ಅಧಿಕಾರ, ಸ್ಥಾನಮಾನಗಳು ಮುಖ್ಯವಲ್ಲ ಎಂದು ಹೇಳುತ್ತಿಲ್ಲ. ಆದರೆ ಅದೇ ಜೀವನವಲ್ಲ! ಅಷ್ಟು ಮಾತ್ರವೇ ಜೀವನವಲ್ಲ!! ಅವಶ್ಯವಾಗಿ ಎಲ್ಲರೂ ನ್ಯಾಯಯುತವಾಗಿ ಹಣ ಅಧಿಕಾರ ಮತ್ತು ಸ್ಥಾನಮಾನಗಳನ್ನು ಗಳಿಸಿಕೊಳ್ಳಲು ಪ್ರಯತ್ನ ಪಡಲೇಬೇಕು. ನಮಗೆ ವಿಹಿತವಾದ ಕರ್ಮಗಳನ್ನು ನಮ್ಮ ಗರಿಷ್ಠ ಮಿತಿಯಲ್ಲಿ ನಾವು ಆಚರಿಸಲೇಬೇಕು. ಆದರೆ Result ಗಳ ಬಗ್ಗೆ ಮಾತ್ರ ವಿಪರೀತ ವ್ಯಾಮೋಹ ಇಟ್ಟುಕೊಳ್ಳಬಾರದು! “ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಶು ಕದಾಚನ”
ಫಲದ ಮೇಲಿನ ವಿಪರೀತ ಹಪಹಪಿ ನಮ್ಮ ನೆಮ್ಮದಿಯನ್ನು ಕೆಡಿಸಿಬಿಡುತ್ತದೆ! ಪರಿಪೂರ್ಣ Effort ಅನ್ನು ಹಾಕಿ ಕೆಲಸ ಮಾಡಿಬಿಡಬೇಕು. ಆದರೆ Expectation ಅನ್ನು ಬಿಟ್ಟು ಬದುಕಬೇಕು! Expectation ನ ಮೇಲೆ Emotion Develop ಆದಾಗ ನೆಮ್ಮದಿ ಕೆಡುತ್ತದೆ!
ಎಲ್ಲಾ ಕ್ರಿಯೆಗಳಿಗೂ ಹೇಗೆ ಒಂದು ಪ್ರತಿಕ್ರಿಯೆ ಇದ್ದೇ ಇರುತ್ತದೋ, ಹಾಗೆಯೇ ಮಾಡಿದ ಎಲ್ಲಾ ಕೆಲಸಗಳಿಗೂ ಅದಕ್ಕೆ ತಕ್ಕುದಾದಂತಹ ಪ್ರತಿಫಲ ಇದ್ದೇ ಇರುತ್ತದೆ. ನಮ್ಮ ಯೋಗ್ಯತೆಗೆ ಸರಿಯಾದ ಪ್ರತಿಫಲವನ್ನು ಭಗವಂತ ನೀಡಿಯೇ ನೀಡುತ್ತಾನೆ!
ಪ್ರತಿಫಲದ ಮೇಲೆ ಕಡಿಮೆ ಅವಲಂಬನೆ, ಭಗವಂತನ ಮೇಲೆ ಅತ್ಯಧಿಕ ಅವಲಂಬನೆ ಮಾಡಿ ನಿಷ್ಠೆ ಇಟ್ಟು ಮಾಡಿದ ಕೆಲಸ ಎಂದಿಗೂ ನಿಷ್ಫಲವಾಗುವುದಿಲ್ಲ! ಇದುವೇ ನೆಮ್ಮದಿಯ ಜೀವನಕ್ಕೆ ಮೊದಲ ಸೋಫಾನ!!
*!! ಶ್ರೀಕೃಷ್ಣಾರ್ಪಣಮಸ್ತು !!*