ಎಂಪಿ ಫೋಕಸ್: ಬಡವರ ಪರ, .ಟಿ.ಟಿ.ಸಿ: ಉಜ್ವಲ ಭವಿಷ್ಯದೆಡೆಗೆ.

Share

.ಟಿ.ಟಿ.ಸಿ: ಉಜ್ವಲ ಭವಿಷ್ಯದೆಡೆಗೆ
ವ್ಯವಸ್ಥಿತ ಹಾಗೂ ಅತ್ಯಾಧುನಿಕ ಸೌಲಭ್ಯ ಹಾಗೂ ನುರಿತ ಭೋಧಕ ವರ್ಗವನ್ನು ಹೊಂದಿರುವ ಮೈಸೂರು ಜಿ.ಟಿ.ಟಿಸಿ.(ಸರ್ಕಾರಿ ಉಪಕರಣ ಮತ್ತುತರಬೇತಿಕೇಂದ್ರ) ರಾಜ್ಯದಲ್ಲೇಹೆಸರುಗಳಿಸಿದ್ದು ವಿದ್ಯಾರ್ಥಿಗಳ ಪಾಲಿನ ನೆಚ್ಚಿನಕೇಂದ್ರವಾಗಿರುವ ಮೈಸೂರು ಜಿ.ಟಿ.ಟಿ.ಸಿ. ನಿರೀಕ್ಷೆಯಂತೆ ಅವರ ಭವಿóಷ್ಯವನ್ನು ಉಜ್ವಲಗೊಳಿಸುತ್ತಿದೆ.
ಮೈಸೂರಿನ ಈ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಕೇಂದ್ರವು ಸ್ವಾಯತ್ತ ಸಮಾಜ ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವೈಜ್ಞಾನಿಕ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಅತ್ಯಾಧುನಿಕ ಉಪಕರಣಗಳ ಮೂಲಕ ಉದ್ಯಮಕ್ಷೇತ್ರದ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದೆ.
ಅತ್ಯಾಧುನಿಕತಂತ್ರಜ್ಞಾನದ ಬಗ್ಗೆ ತರಬೇತಿಕೊಡುವ ಮೂಲಕ ಲಕ್ಷಾಂತರ ಯುವಕರಿಗೆ ವೃತ್ತಿ ಕೌಶಲ್ಯ ಜೊತೆಗೆ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸಿ, ಉಜ್ವಲ ಭವಿಷ್ಯಕ್ಕೆದಾರಿ ದೀಪವಾಗಿದೆ. ಅಲ್ಲದೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಅಭಿವೃದ್ಧಿಗೆ ಸಹಕರಿಸುತ್ತದೆ.
ಜಿಟಿಟಿಸಿ ಸಂಸ್ಥೆಯು ದ್ವಿಪಕ್ಷೀಯ ಅಭಿವೃದ್ಧಿ ಸಹಕಾರ ಒಪ್ಪಂದದಡಿಯಲ್ಲಿ ಡೆನ್ಮಾರ್ಕ್ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 1972ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಕರ್ನಾಟಕ ಸರ್ಕಾರವು ಮೈಸೂರು ಸೇರಿದಂತೆ ರಾಜ್ಯಾದ್ಯಂತ 24 ಕೇಂದ್ರಗಳನ್ನು ಸ್ಥಾಪಿಸಿ ಉದಯೋನ್ಮುಖ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸುತ್ತಿದೆ.
ನುರಿತ ಮಾನವಶಕ್ತಿಯ ಪೂರೈಕೆಯೊಂದಿಗೆ ಕೈಗಾರಿಕೆಗಳ ಅಭಿವೃದ್ಧಿಗೆ ತಂತ್ರಜ್ಞಾನದ ಪ್ರಸರಣವು ಜಾಗತಿಕ ಅಗತ್ಯತೆಗಳನ್ನು ಪೂರೈಸುವಲ್ಲಿ ಪ್ರಮುಖವಾಗಿದೆ.ಇದರೊಂದಿಗೆ ಕರ್ನಾಟಕ ಸರ್ಕಾರವು ಜಿಟಿಟಿಸಿಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಉಪಕರಣಗಳ ತಯಾರಿಕೆಯಲ್ಲಿ ತರಬೇತಿ ನೀಡಲು ಇನ್ನೂ 10 ಉಪ ಕೇಂದ್ರಗಳನ್ನು ಪ್ರಾರಂಭಿಸಲು ಮುಂದಾಗಿರುವುದು ಈ ಸಂಸ್ಥೆಯ ಹಿರಿಮೆಯನ್ನು ಇನ್ನಷ್ಟು ಹಿಗ್ಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಜಿಟಿಟಿಸಿಯು ಅಚ್ಚು ಮತ್ತು ಡೈತಯಾರಿಕೆ ತಂತ್ರಜ್ಞಾನದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದೆ ಹಾಗೂ ಅತ್ಯಾಧುನಿಕ ಅಚ್ಚುಗಳು, ಡೈಗಳು ಮತ್ತು ಪರಿಕರಗಳ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ನಿಖರತೆ ಮತ್ತು ಗುಣಮಟ್ಟದ ಹೆಗ್ಗುರುತಾಗಿ ಅರಳಿದೆ.
ಪ್ರಪಂಚದಾದ್ಯಂತ ತಂತ್ರಜ್ಞಾನದತ್ವರಿತ ಪ್ರಗತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ಜಿಟಿಟಿಸಿ ನಿಯತಕಾಲಿಕವಾಗಿ ಅಸ್ತಿತ್ವದಲ್ಲಿರುವ ಸಿಎಡಿ, ಸಿ.ಎ.ಎಂ, ಉಪಕರಣಕ್ಕಾಗಿ ಸಿ.ಎನ್.ಸಿ ಯಂತ್ರಗಳು, ನಿಖರ ಘಟಕಗಳು, ಕೈಗಾರಿಕೆಗಳಿಗೆ ಲೇಸರ್, ಕ್ಷಿಪ್ರ ಮೂಲಮಾದರಿ, ನಿರ್ವಾತ ಎರಕಹೊಯ್ದ ಸುಧಾರಿತ ಸಾಧನಗಳಿಗೆ ಹೊಸ ತಂತ್ರಜ್ಞಾನಗಳನ್ನು ಆಳವಡಿಸುತ್ತದೆ.
ಜಿಟಿಟಿಸಿ ಅಂತರರಾಷ್ಟ್ರೀಯ ಗುಣಮಟ್ಟದ ಪರಿಕರಗಳು, ತರಬೇತಿ ಪಡೆದ ಸಿಬ್ಬಂದಿ ಮತ್ತು ಉಪಕರಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಲಹೆಯನ್ನು ಒದಗಿಸುವ ಮೂಲಕ ಕೈಗಾರಿಕೆಗಳ ಸಂಬಂಧಿತ ವಿಭಾಗಗಳ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸುತ್ತಿದೆ. ಭವಿಷ್ಯದಲ್ಲಿ, ಟೂಲಿಂಗ್, ಏರೋಸ್ಪೇಸ್ ಘಟಕಗಳು ಮತ್ತು ಅವುಗಳ ಅಸೆಂಬ್ಲಿಗಳಲ್ಲಿನ ಟನ್ರ್ಕೀ ಯೋಜನೆಗಳತ್ತ ಹೆಚ್ಚು ಗಮನ ಹರಿಸಲಿಸಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಅಭಿವೃದ್ಧಿಗೆ ಸಹಕರಿಸುತ್ತದೆ.
ಮೈಸೂರಿನ ಜಿ.ಟಿ.ಟಿ.ಸಿಯಲ್ಲಿ ಲಭ್ಯವಿರುವ ಸುಸಜ್ಜಿತ ಸೌಲಭ್ಯಗಳು:- ಸುಸಜ್ಜಿತ ಮೂಲ ಸೌಕರ್ಯಗಳು, ಹೈಟೆಕ್ ಯಂತ್ರೋಪಕರಣಗಳು, ಪ್ರ್ಯಾಕ್ಟಿಕಲ್ ತರಬೇತಿ, ಅನುಭವಿ ತರಬೇತುದಾರರು, ಪ್ಲೇಸ್‍ಮೆಂಟ್ ಸಹಯೋಗ ಲಭ್ಯವಿದೆ.

ಕೌಶಲ ತರಬೇತಿ:- ಮೈಸೂರು ಜಿ.ಟಿ.ಟಿ.ಸಿ ಕೇಂದ್ರದಲ್ಲಿ ಸರಕಾರಿ ಪ್ರಾಯೋಜಿತ ಕೌಶಲ್ಯ ತರಬೇತಿ ಕಾರ್ಯಕ್ರಮದಡಿ ಎಸ್.ಎಸ್.ಎಲ್.ಸಿ., ಐಟಿಐ, ಡಿಪ್ಲೊಮಾ, ಬಿ.ಇ, ವಿದ್ಯಾರ್ಥಿಗಳಿಗೆ 3 ತಿಂಗಳು ಮತ್ತು 6 ತಿಂಗಳು ಅಥವಾ ಒಂದು ವರ್ಷದವರೆಗೆ ಉಚಿತ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ಡಿಪೆÇ್ಲಮಾ ವ್ಯಾಸಂಗ ಮಾಡಿದವರಿಗೆ ಒಂದು ವರ್ಷದ ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನಿಂಗ್ ಕೋರ್ಸ್, ಬಿ.ಇ ವ್ಯಾಸಂಗ ಮಾಡಿದವರಿಗೆ ಟೂಲ್ ಇಂಜಿನಿಯರಿಂಗ್‍ನಲ್ಲಿ ಎಂ.ಟೆಕ್.ಕೋರ್ಸ್ ಸಹ ಲಭ್ಯವಿರುತ್ತದೆ.

ಸ್ವಯಂ ಉದ್ಯೋಗ:- ಜಿ.ಟಿ.ಟಿ.ಸಿ ಸಂಸ್ಥೆಯಲ್ಲಿ ದೀರ್ಘಾವಧಿ, ಅಲ್ಪಾವಧಿತರಬೇತಿ, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಕಾಪೆರ್Çೀರೇಟ್ ತರಬೇತಿಗಳನ್ನು ನೀಡಲಾಗುತ್ತಿದ್ದು, ತರಬೇತಿಯೊಂದಿಗೆ ತಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗದ ಉಚಿತ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ.
ಡಿಪೆÇ್ಲಮಾ ಕೋರ್ಸ್‍ಗಳಲ್ಲಿ ಟೂಲ್ ಅಂಡ್ ಡೈ ಮೇಕಿಂಡ್, ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, ಮೆಕಟ್ರೋನಿಕ್ಸ್, ಎಲೆಕ್ಟ್ರಾನಿಕ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್ ತರಬೇತಿ ನೀಡಲಾಗುವುದು. ಈ ಸಂಸ್ಥೆಯಲ್ಲಿ 3 ವರ್ಷತರಬೇತಿ ಪಡೆದ ಬಳಿಕ, ವಿದ್ಯಾರ್ಥಿಗಳಿಗನ್ನು ಪಕ್ವಗೊಳಿಸುವ ಉದ್ದೇಶದಿಂದ ಪ್ರಾಯೋಗಿಕ ತರಬೇತಿಗಾಗಿ 1 ವರ್ಷದ ಅವಧಿಗೆ ಸಂಬಂಧಿಸಿದ ಇಂಡಸ್ಟ್ರಿಗಳಿಗೆ ನಿಯೋಜಿಸಲಾಗುವುದು ಈ ಮೂಲಕ ಸ್ವಂತ ಉದ್ಯೋಗ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗುವುದು.
ಕೇಂದ್ರದಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮೈಸೂರು ಸೇರಿದಂತೆ ಬೆಂಗಳೂರು, ಪೂನಾ, ನಾಸಿಕ್ ಮತ್ತು ಕೊಯಮತ್ತೂರಿನಲ್ಲಿ ಉದ್ಯೋಗಾವಕಾಶ ಲಭ್ಯವಿದ್ದು, ಟೊಯೊಟಾ ಕಿರ್ಲೋಸ್ಕರ್, ಎಲ್ ಅಂಡ್ ಟಿ, ಟೈಟಾನ್, ವಿಡಿಯೋಕಾನ್ ಇಂಟೆಲ್, ನೋಕಿಯಾ ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ವೇತನದ ಉದ್ಯೋಗಾವಕಾಶ ಸಿಗುವುದಲ್ಲದೇ, ಬಹುತೇಕ ವಿದ್ಯಾರ್ಥಿಗಳು ಸ್ವಂತ ಕೈಗಾರಿಕೆ ಆರಂಭಿಸಿ ಯಶಸ್ವಿ ಉದ್ಯಮಿಗಳಾಗಿರುವುದು ಕಂಡುಬಂದಿದೆ.
ಸರ್ಕಾರಿ ಪ್ರ್ರಾಯೋಜಿತ ತರಬೇತಿ ಕಾರ್ಯಕ್ರಮಗಳಡಿಯಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕಯೋಜನೆ(CMKYY)) ಮತ್ತು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು.
ಆರ್ಥಿಕವಾಗಿ ಹಿಂದುಳಿದ ಯುವಕರನ್ನು ಉತ್ತೇಜಿಸಲು ಹಾಗೂ ಆರ್ಥಿಕವಾಗಿ ಬಲವರ್ಧನೆಗೊಳಿಸುವ ಉದ್ದೇಶದಿಂದ ಜಿ.ಟಿ.ಟಿ.ಸಿಯು ಸರ್ಕಾರಿ ಪ್ರಾಯೋಜಿತತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಮೂಲಕ ಬಡ ವಿದ್ಯಾರ್ಥಿಗಳಿಗೆ ಪ್ರಸ್ತುತ ಕಾಲಕ್ಕೆ ಹೊಂದುವಂತೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.

ಜಿ.ಟಿ.ಟಿ.ಸಿ.ವಿಶೇಷತೆಗಳು: ಇದು ಹೈಟೆಕ್ ಯಂತ್ರೋಪಕರಣಗಳನ್ನು ಹೊಂದಿದ್ದು ಅನುಭವಿ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ಬೋಧನೆ ನೀಡುತ್ತದೆ. ಹಾಗೂ ಜಿಟಿಟಿಸಿಯಲ್ಲಿ ಹ್ಯಾಂಡ್ಸ್-ಆನ್-ತರಬೇತಿ ಪರಿಕಲ್ಪನೆಯನ್ನು ಜಾರಿಗೆತರಲಾಗಿದ್ದು, ಇದು ರಾಷ್ಟ್ರಕ್ಕೆ ಆದರ್ಶವಾಗಿದೆ. ಜಿಟಿಟಿಸಿ ತರಬೇತಿ ಪಡೆದ ಅಭ್ಯರ್ಥಿಗಳು ಕೈಗಾರಿಕೆಗಳಿಂದ ಹೆಚ್ಚು ಮೌಲ್ಯವನ್ನು ಹೊಂದಿದ್ದಾರೆ ಜಿ.ಟಿ.ಟಿ.ಸಿ ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಭಾರತ ಮತ್ತು ಇತರೆ ದೇಶಗಳಲ್ಲಿ ಉದ್ಯಮಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಟಿಟಿಸಿಯ ಆರ್&ಡಿ ಪ್ರಯತ್ನಗಳು ಇಸ್ರೋದ ಚಂದ್ರಯಾನ ಯೋಜನೆ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಇತರ ಪ್ರತಿಷ್ಠಿತ ಯೋಜನೆಗಳಿಗೆ ಘಟಕಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ.
ಗ್ರಾಮೀಣ ಯುವಕರಿಗೆ ತರಬೇತಿ ನೀಡಲು ದೂರದ ಪ್ರದೇಶವನ್ನು ತಲುಪಲು ಅಗತ್ಯವಿರುವ ಎಲ್ಲಾ ಸೌಕಾರ್ಯ ಮತ್ತು ಸಾಮಥ್ರ್ಯಗಳನ್ನು ಹೊಂದಿದೆ.
ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್: ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯು ಇಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಬಿ.ಇ., – ಮೆಕ್ಯಾನಿಕಲ್/ ಇಂಡಸ್ಟ್ರೀಯಲ್ ಪೆÇ್ರೀಡಕ್ಷನ್/ ಆಟೋ ಮೊಬೈಲ್/ಮೇರಿನ್/ಆಟೋಮೇಷನ್ ಮತ್ತುರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳÀಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಬಹುದು. ಈಕೋರ್ಸ್‍ನಲ್ಲಿ ಪ್ರೆಸ್‍ಟೂಲ್ಸ್, ಪ್ಲಾಸ್ಟಿಕ್ ಮೌಲ್ಡ್ಸ್, ಪ್ರೇಷರ್ ಡೈ ಕ್ಯಾಸ್ಟಿಂಗ್ಸ್ ಡೈಸ್, ಜಿಗ್ಸ್ ಮತ್ತು ಫಿಕ್ಷರ್ ಮತ್ತು ಸಾಲಿಡ್ ವಕ್ರ್ಸ/ ಯು.ಜಿ/ಪೆÇ್ರೀ-ಇ/ಕ್ಯಾಟಿಯ/ಡಿಸೈನ್ ಸಾಫ್ಟ್‍ವೇರ್ ಮುಂತಾದ ವಿಷಯಗಳನ್ನೊಳಗೊಂಡಿರುತ್ತದೆ.
ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ದೇಶ, ವಿದೇಶದವಿವಿಧ ಕೈಗಾರಿಕೆಗಳಲ್ಲಿ ಬಹಳ ಬೇಡಿಕೆ ಇದೆ. ಪೂರ್ಣಗೊಳಿಸಿದ ಅಭ್ಯರ್ಥಿಗಳು ಇನ್ಫೋಸಿಸ್, ಟಿ.ಸಿ.ಎಸ್, ಬೋμï, ಟೋಯೊಟಾ ಮುಂತಾದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನುಆಯೋಜಿಸಲಾಗುವುದು

ಪೆÇೀಸ್ಟ್ ಡಿಪೆÇ್ಲೀಮಾ ಇನ್ ಟೂಲ್ ಡಿಸೈನ್ ಕೋರ್ಸ್: ಪ್ರೆಸ್‍ಟೂಲ್ಸ್, ಪ್ಲಾಸ್ಟಿಕ್ ಮೌಲ್ಡ್ಸ್, ಪ್ರೇಷರ್‍ಡೈ ಕ್ಯಾಸ್ಟಿಂಗ್ಸ್ ಡೈಸ್, ಜಿಗ್ಸ್ ಮತ್ತು ಫಿಕ್ಷರ್ ಮುಂತಾದ ವಿಷಯಗಳನ್ನೊಳಗೊಂಡ ಒಂದು ವರ್ಷದ ಅವಧಿಯ ಪೆÇೀಸ್ಟ್ ಡಿಪೆÇ್ಲೀಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಡಿಪೆÇ್ಲೀಮಾ ಇನ್ ಮೇಕ್ಯಾನಿಕಲ್, ಇಂಡಸ್ಟ್ರೀಯಲ್ ಪೆÇ್ರೀಡಕ್ಷನ್, ಆಟೋ ಮೊಬೈಲ್, ಟೂಲ್ ಅಂಡ್ ಡೈ ಮೇಕಿಂಗ್, ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್, ಮೆಕೆಟ್ರಾನಿಕ್ಸ್ ವಿಷಯಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಬಹುದು. ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಟೋಯೊಟಾ, ಟಫೇ, ಟಾಟಾ ಮೋಟಾರ್ಸ್ ಮುಂತಾದದೇಶ, ವಿದೇಶದ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜಿ.ಟಿ.ಟಿ.ಸಿ ಗೆ ಪ್ರವೇಶಾತಿ ಹೇಗೆ..? ಎಸ್.ಎಸ್.ಎಲ್.ಸಿ. ಯಲ್ಲಿ ಪಾಸಾದ ವಿದ್ಯಾರ್ಥಿಗಳು ಕೋರ್ಸ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು, ಜಿ.ಟಿ.ಟಿ.ಸಿ ಸಂಸ್ಥೆಯಲ್ಲಿ ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಪ್ರವೇಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರ, 10ನೇ ತರಗತಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ, ಇ ಮೇಲ್ ಐ.ಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಶೇ.30 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗಾಗಿ ಮೀಸಲಿರಿಸಲಾಗಿದೆ. ಅಲ್ಲದೇ ಐ.ಟಿ.ಐ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕೂಡ ನೇರವಾಗಿ 2ನೇ ವರ್ಷದ ಡಿಪ್ಲೊಮಾ ತರಗತಿಗೆ ನೇರ ಪ್ರವೇಶ ಪಡೆಯಬಹುದಾಗಿದೆ.
ಒಟ್ಟಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ತಮ್ಮ ಪ್ರತಿ ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗೇರಿಸುವ ನಿಟ್ಟಿನಲ್ಲ್ಲಿ ಪ್ರಸ್ತುತತೆಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದ್ದು, ಉದಯೋನ್ಮುಖ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9141629594, 9141629599, 0821-2582750 ಅನ್ನು ಸಂಪರ್ಕಿಸಬಹುದಾಗಿದೆ.

                             ಸಂಜಯ್ ಬಿ.ಸಿ ಮತ್ತು ಕಾವ್ಯ.ಕೆ

Share