ಎಂಪಿ ಫೋಕಸ್:ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡ ಶಂಕರೇಗೌಡ.

Share

                         (ವಿಶೇಷ ಲೇಖನ)
ಮೈಸೂರು ;- ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು ಒಟ್ಟು 5 ಎಕರೆ ಜಮೀನನ್ನು ಹೊಂದಿರುತ್ತಾರೆ. ಆದರೆ ಇವರು ಪ್ರಾರಂಭದಲ್ಲಿ ವ್ಯವಸಾಯವನ್ನು ಮಾಡದೆ ತನ್ನ ಬಳಿ ಇದ್ದ ಒಂದು ಟ್ರ್ಯಾಕ್ಟರನಲ್ಲಿ ಸುತ್ತಮುತ್ತಲಿನ ಜಮೀನನಲ್ಲಿ  ಬಾಡಿಗೆಯನ್ನು ಹೊಡೆಯುವ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕ್ರಮೇಣ ವ್ಯವಸಾಯದಿಂದಲೆ ನನ್ನ ಜೀವನ ಮುಂದುವರೆಯಬೇಕು ಎಂಬ ಆಚಲ ಮನಸ್ಸು ಮಾಡಿದ್ದು ಇಂದು ಇವರು ಸಾವಯವ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಕಾರಣವಾಯಿತು.
’’ಆರಂಭ ಆರಾಮಗಿರಬೇಕು’’  ಎಂದು  ವ್ಯವಸಾಯವನ್ನು ಪ್ರಾರಂಭಿಸಲು ಮುಂದಾದಾಗ ನನ್ನ 5 ಎಕೆರೆ ಭೂಮಿಯನ್ನು ಹಂತಹಂತವಾಗಿ ಹದಮಾಡಿ ಮೊದಲ ಬಾರಿಗೆ ಬಾಳೆಹಣ್ಣು ಬೆಳೆಯಲು ಮುಂದಾದೆ. ಆದರೆ ಇದರಿಂದ  ತುಂಬಾ ನಷ್ಟವಾಯಿತು. ನನಗೆ ಸಾವಯವ ಕೃಷಿ ಅಂದರೇ ನನಗೆ ಎಲ್ಲಿಲದ ಪ್ರೀತಿ, ಆಸಕ್ತಿ. ಆದರೇ ಇದರ ಬಗ್ಗೆ ನನಗೆ ಅಷ್ಟೋಂದು ತಿಳಿದಿರಲಿಲ್ಲ  ನಂತರದ ದಿನಗಳಲ್ಲಿ ಸುತ್ತೂರಿನ ಜೆ.ಎಸ್.ಎಸ್. ಕೃಷಿ ವಿಜ್ಞಾನ ಕೇಂದ್ರದ ತರಬೇತಿಗೆ ತೆರಳಿ ಅಲ್ಲಿರುವ ತಜ್ಞರ ಮಾಹಿತಿಯ ಮೇರೆಗೆ ಸಾವಯವ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಲು ಸಾಧ್ಯವಾಯಿತು ಎಂದು ಕೃಷಿಕ ಶಂಕರೇಗೌಡ ಅವರು ಹೇಳುತ್ತಾರೆ.
ಶಂಕರೇಗೌಡರು ಮೊದಲು ಬಾಳೆಯ ವಿವಿಧ ತಳಿಗಳಾದ ಕಾಡುಬಾಳೆ, ನೇಂದ್ರನ್, ನಂಜನಗೂಡು ರಸಬಾಳೆ, ಪಚ್ಚಬಾಳೆ, ಏಲಕ್ಕಿ ಬಾಳೆಗಳ ಸುಮಾರು 400 ಗಿಡಗಳನ್ನು ಟ್ರೆಂಚ್ ಪದ್ದತಿಯಲ್ಲಿ ಬೆಳೆದರು. ಶಂಕರೇಗೌಡರಿಗೆ ಮೊದಲಿನಿಂದಲೂ ಸಾವಯವ ಕೃಷಿಯಲ್ಲಿ ಬಹಳ ಆಸಕ್ತಿ ಇರುವುದರಿಂದ ತಮ್ಮ ಭೂಮಿಯನ್ನು ಹಂತ ಹಂತವಾಗಿ ಸಂಪೂರ್ಣ ಸಾವಯವ ಭೂಮಿಯಾಗಿ ಪರಿವರ್ತಿಸಿದರು. ಮುಂದುವರೆದು 8 ಗುಂಟೆ ಪ್ರದೇಶದಲ್ಲಿ ಅರಿಶಿಣ ಹಾಗೂ ಪರಂಗಿ 50 ಗಿಡ, ಹುಣಸೆ ಮರ 2, ತೆಂಗು-130, ನೇರಳೆ-2, ಹಲಸು-6, ಸೀಬೆ-40, ಮಾವು-6. ಮೊಸಂಬಿ-2, ಚಕ್ಕೊತಾ-1, ನೆಲ್ಲಿಕಾಯಿ-1, ನುಗ್ಗೆ-15, ಸೀತಾಫಲ-2, ಇರಳೆಕಾಯಿ-20, ಗಜನಿಂಬೆ-25, ನಿಂಬೆ-12, ಕರಿಬೇವು-15, ಸೊಪ್ಪುಗಳಾದ ಕೊತ್ತಂಬರಿ, ಸಬ್ಬಸಿಗೆ, ಹೊನಗೊನೆ, ಕೀರೆ, ಪುದೀನಾ, ಮೆಂತ್ಯಾ, ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.
ಜಮೀನಿನ ಸುತ್ತಾ ಬದುಗಳಲ್ಲಿ ಸಿಲ್ವರ್ ಓಕ್-200, ಟೀಕ್-100, ಹೆಬ್ಬೇವು-20, ಕಹಿಬೇವು-6, ಜೇನು ಪೆಟ್ಟಿಗೆ-2, ಹಾಗೂ ಕುರಿಗಳು-15, ಕೋಳಿ-15, ಹೆಚ್.ಎಫ್ ಹಸು-2, ಮೆಣಸು-4, ಅಡಿಕೆ-2, ಮರಗೆಣಸು-5, ಶುಂಠಿ-1 ಗುಂಟೆ, ಹಾಗೂ 4 ಎರೆಹುಳು ಗೊಬ್ಬರ ಘಟಕಗಳನ್ನು ಹೊಂದಿದ್ದಾರೆ ಹಾಗೂ ಒಂದು ಬೋರ್‍ವೆಲ್ ಮತ್ತು ಕೃಷಿ ಇಲಾಖೆ ವತಿಯಿಂದ  ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡವನ್ನು ಹೊಂದಿದ್ದು, ಇವುಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಾರೆ.
 ದಿನನಿತ್ಯ ಉಪಯೋಗಿಸುವಂತಹ ಪದಾರ್ಥಗಳು, ಸಾಂಬಾರ ಪದಾರ್ಥಗಳು, ಸೊಪ್ಪು, ಹಾಗೂ ತರಕಾರಿಗಳನ್ನು ಮಾತ್ರ ಬೆಳೆಯುತ್ತಿದ್ದರು, ಇವುಗಳಿಗೆ  ಮಾರುಕಟ್ಟೆಯಲ್ಲಿ ಸದಾಕಾಲ ಬೇಡಿಕೆ ಇದ್ದೇ ಇರುತ್ತಿತ್ತು. ಇದನ್ನರಿತ ಶಂಕರೇಗೌಡರು ಕೃಷಿ ತಜ್ಞರ ಸಲಹೆಯ ಮೇರೆಗೆ ವಿವಿಧ ಹಂತಗಳಲ್ಲಿ ಕಟಾವಿಗೆ ಬರುವಂತೆ ಉಪಚರಿಸಿ, ಯತೇಚ್ಚವಾಗಿ ಜೀವಾಮೃತ ಮತ್ತು ಪಂಚಗವ್ಯಗಳನ್ನು ಬಳಸಿ ಬಿತ್ತನೆ ಮಾಡುತ್ತಿದ್ದರು. ಇವರು ವಾರಕ್ಕೊಮ್ಮೆ ಭಾನುವಾರದ ದಿನ ತಮ್ಮಲ್ಲಿ ಲಭ್ಯವಿರುವ ಎಲ್ಲಾ ಬೆಳೆಗಳು ಮತ್ತು ಪದಾರ್ಥಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಯಾವುದೇ ಮದ್ಯವರ್ತಿಗಳ ಸಹಾಯವಿಲ್ಲದೆ ಮೈಸೂರಿನ ವಿವೇಕಾನಂದ ಸರ್ಕಲ್‍ನ ಬಳಿ ತಮ್ಮದೇ ಆದ ಒಂದು ಸಂತೆ (ಮಾರುಕಟ್ಟೆ) ಕಲ್ಪಿಸಿಕೊಂಡು ಇದರ ಮೂಲಕ ನಗರ ಪ್ರದೇಶದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಸಾವಯವ ತರಕಾರಿ ಮತ್ತು ಹಣ್ಣುಗಳನ್ನು ಪೂರೈಸುತ್ತಿದ್ದಾರೆ.
ಇವರ ಈ ರಾಸಾಯನಿಕ ಮುಕ್ತವಾದ ಸಾವಯವ ಪದಾರ್ಥಗಳೆಂದರೇ ಗ್ರಾಹಕರಿಗೆ ಎಲ್ಲಿಲ್ಲದ ಬೇಡಿಕೆ. ಒಂದು ವಾರಕ್ಕಾಗುವಷ್ಟು  ದಿನಬಳಕೆ ಪದಾರ್ಥಗಳನ್ನು ಭಾನುವಾರದ ದಿನ ಶಂಕರೇಗೌಡರಿಂದ ಖರೀದಿಸುತ್ತಾರೆ. ಹಾಗೂ ಮತ್ತೇನಾದರೂ ಅವಶ್ಯಕತೆವಿರುವ ತರಕಾರಿ ಬೇಕಾದಲ್ಲಿ ಗ್ರಾಹಕರು ಶಂಕರೇಗೌಡರಿಗೆ ದೂರವಾಣಿಯ ಮೂಲಕ ಕರೆ ಮಾಡುವರು. ತಾವು ಬೆಳೆದ ಅರಿಶಿಣವನ್ನು ತಾವೇ ಸ್ವತಃ ಸಂಸ್ಕರಿಸಿ ಚನ್ನಾಗಿ ಒಣಗಿಸಿ ಪುಡಿಗೊಳಿಸಿ ಅದನ್ನು ಪ್ಯಾಕ್ ಮಾಡಿ, ಮಾರಾಟ ಮಾಡುತ್ತಾರೆ.  ಇವರ ಅರಿಶಿಣ ಪಾರ್ಸಲ್ ಮೂಲಕ ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತಲುಪುತ್ತದೆ. ಏಕೆಂದರೇ ಇವರ ಗ್ರಾಹಕರು ಅಲ್ಲಿಯವರೆಗೂ ಸಹ ವ್ಯಾಪಿಸಿದ್ದಾರೆ ಎನ್ನುವುದು ಬಹಳ ಹೆಮ್ಮೆಯ ವಿಷಯ ಹಾಗೂ ಪೆÇಸ್ಟಲ್ ಮೂಲಕವೇ ಮನಿ ಆರ್ಡರ್ ಮಾಡಿ ಅಂಚೆ ಮೂಲಕವೇ ತಮಗೆ ಬೇಕಾದ ಪದಾರ್ಥವನ್ನು ಪಡೆಯುತ್ತಾರೆ.
      ಕಳೆದ 7 ವರ್ಷಗಳಿಂದಲೂ ಸಹ ಯಾವುದೇ ರಾಸಾಯನಿಕಗಳನ್ನು ಭೂಮಿಗೆ ಸೋಕಿಸದೇ ಇರುವ ಶಂಕರೇಗೌಡರು ಕುರಿ ಮತ್ತು ಕೋಳಿ ಸಾಕಣೆಯನ್ನೂ ಸಹ ವಿಶಿಷ್ಟ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. 15 ಕುರಿಗಳು ಮತ್ತು 15 ಕೋಳಿಗಳನ್ನು ಸ್ಟಾಲ್ ಫೀಡಿಂಗ್ ಪದ್ದತಿಯಲ್ಲಿ ಸಾಕುತ್ತಿದ್ದು, ಇವುಗಳಿಂದ ಬಂದಂತಹ ಗೊಬ್ಬರಗಳನ್ನು ಚೆನ್ನಾಗಿ ಕಲಸಿ, ಅದನ್ನು ತಮ್ಮ ಭೂಮಿಗೆ ಸಿಂಪಡಿಸಿ, ಇದರ ಜೊತೆಗೆ 4 ಎರೆಹುಳು ಘಟಕಗಳನ್ನು ಕೃಷಿ ಇಲಾಖೆ ಸಹಾಯಧನದಲ್ಲಿ ನಿರ್ಮಿಸಿಕೊಂಡು  ಇದರಿಂದ  ಉತ್ಪಾದನೆಯಾಗುವ ಗೊಬ್ಬರವನ್ನೂ ಸಹ ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಾರೆ.
ಹೆಚ್ಚು ಎರೆಹುಳು ಗೊಬ್ಬರ ಉತ್ಪಾದನೆ ಮಾಡುವ ಶಂಕರೇಗೌಡರು ಅದನ್ನು ಬೇರೇ ರೈತರಿಗೆ ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಾರೆ. ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಪಡೆದಿರುವ ಬಹುಪಯೋಗಿ ರೋಟರಿ ಟಿಲ್ಲರ್ ಯಂತ್ರವನ್ನು ಬಹಳ ಪರಿಣಾಮಕಾರಿಯಾಗಿ ಉಳುಮೆ ಮಾಡಲು, ಭೂಮಿ ಹದಾ ಮಾಡಲು, ಸಾಲು ತೆಗೆಯಲು, ಕಳೆ ತೆಗೆಯಲು, ಅಂತರಬೇಸಾಯ, ಹೀಗೇ ಹಲವಾರು ಚಟುವಟಿಕೆಗಳಿಗೆ ಬಳಸುತ್ತಾರೆ.
ಇμÉ್ಟಲ್ಲಾ ವೈವಿಧ್ಯತೆ ಸಾಧಿಸಿರುವ ಇವರು ಮಾಸಿಕ ಅಂದಾಜು 35 ರಿಂದ 40 ಸಾವಿರ ರೂಗಳ ಆದಾಯ ಗಳಿಸುತ್ತಿದ್ದಾರೆ. ಕೆಲ ಆಸಕ್ತ ರೈತರು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ರೈತರುಗಳಿಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಅವರಲ್ಲಿ ಸ್ಪೂರ್ತಿ ತುಂಬುವ ಕೆಲಸದಲ್ಲೂ ಸಹ ಆಸಕ್ತಿ ವಹಿಸುತ್ತಾರೆ. ಅವರೆಲ್ಲರಿಗೂ ಸಹ ಏಕಬೆಳೆ ಪದ್ದತಿ ತ್ಯಜಿಸಿ ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯನ್ನು ಹಾಗೂ ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳುವ ರೈತನು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ಹಿಡಿಯುವುದಿಲ್ಲ. ಬದಲಾಗಿ ನಾಲ್ಕು ಜನರಿಗೆ ಕೆಲಸ ನೀಡುವ ಸಾಹುಕಾರನಾಗಿ ಬೆಳೆಯುತ್ತಾನೆ, ಇದಕ್ಕೆ ಸ್ವತಃ ನಾನೇ ನೈಜ ಉದಾಹರಣೆ ಎನ್ನುತ್ತಾರೆ ಪ್ರಗತಿಪರ ರೈತ ಶಂಕರೇಗೌಡ ಅವರು.                                                                


Share