ಕೃಪೆ ಆದ್ಯಾತ್ಮಿಕ ವಿಚಾರ ಬಳಗ
*ಯಾವುದೇ ಒಂದು ಮಂತ್ರವನ್ನು ಆರಂಭಿಸುವ ಮುನ್ನ ‘ॐ ‘ ಕಾರ ಯಾಕೆ?*
ಸನಾತನ ಧರ್ಮದ ಅನುಸಾರ ಪ್ರಣವ ಮಂತ್ರ ‘ॐ ‘ ಗೆ ತನ್ನದೇ ಆದ ಮಹತ್ವ ಇದೆ. ‘ॐ ‘ ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಶುರುವಾಗುವುದೂ ಇಲ್ಲ ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ ‘ॐ ‘ ಉಚ್ಛಾರ ಮಾಡದೇ ಶುರುವಾಗದ ಮಂತ್ರ ಹೇಗೆ ಪೂರ್ಣಗೊಳ್ಳುವುದು..?
‘ॐ ‘ ಕಾರ ಉಚ್ಛರಿಸುತ್ತಲೇ ಶ್ರೀಗಣೇಶನ ಆವಾಹನೆ ಮತ್ತು ಸಂಸ್ಥಾಪನೆ..
ವಾತಾವರಣ ಎಲ್ಲವೂ ಮಂಗಳ, ಮಂಗಳ, ಮಂಗಳ …
ಪ್ರಣವ (‘ॐ ‘ ಕಾರ) ಸ್ವರೂಪ ವಕ್ರತುಂಡಮ್
ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಆದಿದೇವತೆಯಾಗಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಆಧೀಶ್ವರ, ಮೋದಕ-ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶ.
ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀಗಣೇಶನ ಆವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲಕ್ಕೂ ಬಹು ಹಿಂದೆಯೇ ಗಣೇಶ ಪೂಜೆ ಅಥವಾ ಗಣೇಶ ಚತುರ್ಥಿ ವ್ರತ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣನೇ ಗಣೇಶನ ವ್ರತ ಆಚರಿಸಿದ್ದ ಎಂದೂ ಶಾಸ್ತ್ರ-ಪುರಾಣಗಳು ಹೇಳುತ್ತವೆ. ಅಷ್ಟೇ ಅಲ್ಲದೇ ಗಣೇಶನು ಮಂಗಳಕಾರಕವೂ ವಿಘ್ನ ನಿವಾರಕನೂ ಆಗಿದ್ದಾನೆ ಮತ್ತು ವಿದ್ಯಾ-ಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ.
“ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಆದರೆ ‘ॐ ‘ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.?
‘ॐ ‘ ಮತ್ತು ಥೈರಾಯ್ಡ್: ‘ಓಂ’ ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.
‘ॐ ‘ ಮತ್ತು ಭಯ :ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು ‘ಓಂ’ ಎಂದು ಉಚ್ಛರಿಸಿ.
‘ॐ ‘ ಮತ್ತು ಒತ್ತಡ : ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.
‘ॐ ‘ ಮತ್ತು ರಕ್ತ ಸಂಚಾರ : ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ‘ಓಂ’ ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.
‘ॐ ‘ ಮತ್ತು ಪಚನ ಕ್ರಿಯೆ :ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.
‘ॐ ‘ ಮತ್ತು ಸ್ಫೂರ್ತಿ :ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.
‘ॐ ‘ ಮತ್ತು ಸುಸ್ತು :ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ‘ಓಂ’ ಉಚ್ಛಾರ ಮಾಡುವುದು.
‘ॐ ‘ ಮತ್ತು ನಿದ್ರೆ :ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.
‘ॐ ‘ ಮತ್ತು ಶ್ವಾಸಕೋಶ : ‘ಓಂ’ ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.
‘ॐ ‘ ಮತ್ತು ಬೆನ್ನೆಲುಬು : ‘ಓಂ’ ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..
ಪ್ರಣವ ಸ್ವರೂಪ ವಕ್ರತುಂಡಂ !
ಕೃಷ್ಣಾರ್ಪಣಮಸ್ತು
*!! ಶ್ರೀಕೃಷ್ಣಾರ್ಪಣಮಸ್ತು !!*