ಎನ್ಕೌಂಟರ್ನನಲ್ಲಿ ದುಬೆ ಹತ್ಯೆ

459
Share

ಎನ್ಕೌಂಟರ್ ದುಬೆ ಹತ್ಯೆ ಕುಖ್ಯಾತ ರೌಡಿ ವಿಕಾಸ್ ದುಬೆ ಯನ್ನು ಇಂದು ಮುಂಜಾನೆ ಕಾನ್ಪುರದಲ್ಲಿ ನಡೆದ ಪೊಲೀಸ್ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ .ಕಳೆದ ವಾರ ಉತ್ತರ ಪ್ರದೇಶದಲ್ಲಿ ಎಂಟು ಜನ ಪೊಲೀಸರನ್ನು ಈ ದುಬೆ ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.ಮಧ್ಯಪ್ರದೇಶದ ಉಜ್ಜೈನಿ ದೇವಸ್ಥಾನವೊಂದರಲ್ಲಿ ತಲೆಮರೆಸಿಕೊಂಡು ತಪ್ಪಿಸಿಕೊಂಡಿದ್ದ ಈತನನ್ನು ಪೊಲೀಸರು ನಿನ್ನೆ ಸಂಜೆ ಬಂಧಿಸಿ, ವಾಪಸ್ಸು ಕರೆದುಕೊಂಡು ಬರುತ್ತಿದ್ದಾಗ ಕಾನ್ಪುರದ ಬಳಿ ಹಠಾತ್ ಎನ್ ಕೌಂಟರ್ ನಲ್ಲಿ ಮಟಾಶ್ ಆಗಿದ್ದಾನೆ .ಇಂದು ನಸುಕಿನಲ್ಲಿ ಜೀಪ್ ನಲ್ಲಿ ಬರುತ್ತಿದ್ದಾಗ ಜೀಪು ಉರುಳಿ ಬಿದ್ದ ಸಮಯದಲ್ಲಿ ಪೊಲೀಸರಿಂದ ರಿವಾಲ್ವಾರ್ ಕಸಿದು ಪರಾರಿಯಾಗಲು ಯತ್ನಿಸಿದಾಗ ಗುಂಡಿನ ಚಕಮಕಿ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಗುಂಡಿನೇಟು ತಗುಲಿದ್ದ ದುಬೆ ಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ನೆಂದು ಹೇಳಲಾಗಿದೆ.ಅನೇಕ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಸಖ್ಯ ಹೊಂದಿದ್ದ ಇವನು ಅರವತ್ತಕ್ಕೂ ಹೆಚ್ಚು ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ .ತನಗೆ ಇರುವ ಇವರೆಲ್ಲರ ಶ್ರೀರಕ್ಷೆಯಿಂದ ಈ ಹಂತಕ ರಾಜಾರೋಷ ತಿರುಗಾಡುತ್ತಲೇ ಇದ್ದ .ಪ್ರಕರಣವೊಂದರಲ್ಲಿ ಇವನನ್ನು ಉತ್ತರ ಪ್ರದೇಶದ ಮನೆಯಲ್ಲಿ ಬಂಧಿಸಲು ಹೋದಾಗ,ಕೆಲವು ಪೊಲೀಸರಿಂದಲೇ ಮಾಹಿತಿ ಪಡೆದು ತನ್ನ ಸಹಚರರಿಂದ ಎಂಟು ಜನ ಪೊಲೀಸರನ್ನು ಹತ್ಯೆ ಮಾಡಿದ್ದ .


Share