ಗೌರಿ ಎಂಬ ಬಿಳಿ ಹುಲಿಯು ಪಂಜಾಬಿನ ಛತ್ ಬೀರ್ ಮೃಗಾಲಯದ ಮಹೇಂದ್ರ ಚೌಧರಿ ಝೂಲಾಜಿಕಲ್ ಪಾರ್ಕ್‌ನಲ್ಲಿ ರಾಯಲ್ ಬೆಂಗಾಲ್ ಟೈಗರ್ ಅರ್ಜುನ್ ಜೊತೆ ತನ್ನ ಜೋಡಿಯಿಂದ ಎರಡು ಮರಿಗಳಿಗೆ ಜನ್ಮ ನೀಡಿದೆ.
ಈ ಬೆಳವಣಿಗೆಯು ಮೃಗಾಲಯದ ಪ್ರಾಣಿ ನಿರ್ವಹಣಾ ತಂಡಕ್ಕೆ ಅತೀವ ಸಂತೋಷವನ್ನುಂಟು ಮಾಡಿದೆ. ಈ ವರ್ಷದ ಏಪ್ರಿಲ್‌ನಿಂದ ಇದಕ್ಕೆ ಪ್ರಯತ್ನ ಮಾಡುತ್ತಿದೆ. ಆಗಸ್ಟ್ 2 ರಂದು ಮುಂಜಾನೆ ಮರಿಗಳು ಜನ್ಮ ತಾಳಿದೆ.
ನಿರ್ದಿಷ್ಟ ಪ್ರದೇಶದಲ್ಲಿ ಮೃಗಾಲಯ ಪಾಲಕರು ಸೇರಿದಂತೆ ಯಾರಿಗೂ ಪ್ರವೇಶ ನಿರ್ಭಂದವಿರುವ ವಿಶೇಷ ಆವರಣದಲ್ಲಿ ತಾಯಿ ಮತ್ತು ಮರಿಗಳನ್ನು ಇರಿಸಲಾಗಿದೆ. ಸಿಸಿಟಿವಿ ಕಣ್ಗಾವಲು ಮೂಲಕ ತಾಯಿ ಮತ್ತು ಮರಿಗಳ ಮೇಲೆ ನಿಗಾ ಇಡಲಾಗಿದ್ದು, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
* ಚಿತ್ರ ಕೃಪೆ : ಎಕ್ಸ್‌ಪ್ರೆಸ್