ಎಲೆಕ್ಟ್ರಿಕ್ ಚಿತಾಗಾರ ಪ್ರಾರಂಭಿಸಲು ಆಗ್ರಹ

ವಿದ್ಯುತ್ ಚಿತಾಗಾರ ಆರಂಭಿಸಿ ಹಾಗೂ ಮೃತದೇಹಗಳಿಗೆ ಗೌರವ ಸಲ್ಲಲಿ
ಮಹಾಮಾರಿ ಕೂರೂನಾ ಸೋಂಕು ಹೆಚ್ಚಾಗುತ್ತಿದ್ದು ಮೃತಪಡುವವರ ಸಂಖ್ಯೆ ಕೂಡ ದೇಶದಲ್ಲಿ ಏರಿಕೆಯಾಗುತ್ತಿದೆ,ಹೀಗಾಗಿ ಅಂತ್ಯಸಂಸ್ಕಾರದ ವೇಳೆ ತೊಂದರೆ ಆಗುತ್ತಿದ್ದು ,ಎಲೆಕ್ಟ್ರಿಕಲ್ ಶವ ಸಂಸ್ಕಾರ ದೇಶಾದ್ಯಂತ ಪ್ರಾರಂಭಿಸಬೇಕು ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಸರ್ಕಾರಕ್ಕೆ ಮನವಿ ಮಾಡುತ್ತೇವೆ
ಕೂರೂನಾ ಸೋಂಕಿತರು ಮೃತಪಟ್ಟಾಗ ಅವರ ಶವವನ್ನು ಮಣ್ಣು ಮಾಡಲು ಅವಕಾಶ ನೀಡುವುದಿಲ್ಲ ಎಂದು ಆ ಪ್ರದೇಶದ ಸಾರ್ವಜನಿಕರು ಪ್ರತಿಭಟಿಸುತ್ತಿದ್ದಾರೆ ,ಈ ಸಮಸ್ಯೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಆಗುತ್ತಿದು. ಇದಕ್ಕೆ ಸೂಕ್ತ ಪರಿಹಾರವೆಂದರೆ ಎಲೆಕ್ಟ್ರಿಕಲ್ ಶವ ಸಂಸ್ಕಾರ ಮಾಡುವುದು ಸೂಕ್ತ,
ಮಣ್ಣಿನಲ್ಲಿ ಹೂಳುವುದರಿಂದ ಅಥವಾ ಕಟ್ಟಿಕೆಯಿಂದ ಸುಡುವುದರಿಂದ ಸೋಂಕು ಹರಡಬಹುದು ಎನ್ನುವ ಆತಂಕ ಜನರಿಗಿದೆ.ಹೀಗಾಗಿ ಹಲವಾರು ಕಡೆಗಳಲ್ಲಿ ಈ ರೀತಿ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಲೆಕ್ಟ್ರಿಕಲ್ ಶವ ಸಂಸ್ಕಾರ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಉದ್ಭವ ಆಗುವುದಿಲ್ಲ ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಆಯ್ದ ಸ್ಥಳಗಳಲ್ಲಿ ಎಲೆಕ್ಟ್ರಿಕಲ್ ಶವ ಸಂಸ್ಕಾರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು. ಕೂರೂನಾ ಸೋಂಕು ಮಾನವೀಯತೆ ತಿಂದು ಹಾಕಿದೆ.ಪ್ರಾಣಿ ಸತ್ತರೂ ಮರುಕಪಡುವ ಇಂದಿನ ಸ್ಥಿತಿಯಲ್ಲಿ ಮನುಷ್ಯ ಸತ್ತರೂ ಮನುಷ್ಯನೇ ನೋಡುತ್ತಿಲ್ಲ.ಸಂಬಂಧಗಳು ಗಣನೆಗೆ ಬರುತ್ತಿಲ್ಲ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮಾನವೀಯತೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಮಹಾಮಾರಿ ಕೂರೂನಾಸೋಂಕಿನಿಂದ ಮೃತಪಟ್ಟ ಅವರನ್ನು ಜೆಸಿಬಿ ಯಂತ್ರದ ಮೂಲಕ ಹೂಳುವುದು ಕಟ್ಟಿಗೆ ಕಟ್ಟಿ ಕರೆದೊಯ್ಯುವುದು ನಡೆಯಲಾರಂಭಿಸಿದರು ಆಘಾತಕಾರಿ ಸಂಗತಿಯಾಗಿದೆ ರಾಜ್ಯದ ಮುಖ್ಯಮಂತ್ರಿಗಳೇ ಇಂಥ ಅಮಾನೀಯ ದೃಶ್ಯ ಕಂಡು ಆಶ್ಚರ್ಯ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ಇದಕ್ಕೆ ಸಂಬಂಧಿಸಿದ ಸಿಬ್ಬಂದಿಗಳನ್ನು ಅಮಾನತು ಮಾಡಿರುವುದು ಇದೊಂದು ಸಿಎಂ ಯಡಿಯೂರಪ್ಪನವರ ಉತ್ತಮ ಸ್ಪಂದನೆ ಯಾಗಿದೆ ನಮ್ಮ ದೇಶದ ಮೃತದೇಹಗಳನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ ಹೀಗಿರುವಾಗ ಕೋವಿಡಾ -19 ರಿಂದ ಮೃತಪಟ್ಟವರನ್ನು ಅವರ ವಾರಸುದಾರರಿಗೆ ವಹಿಸುವುದು ಲೇಸು ,ಅವರ ಮಕ್ಕಳಿಗೂ ಅಥವಾ ಸಂಬಂಧಿಕರಿಗೆ ವಹಿಸುವುದರಿಂದ ಅವರಿಗೆ ಸಮಾಧಾನ ವಾಗಬಹುದು ಬೇಕಾದರೆ ಅವರ ವಾರಸುದಾರರಿಗೆ ಉತ್ತಮ ದರ್ಜೆಯ ಕಿಟ್ ಗಳನ್ನು (ಒಬ್ಬರಿಗೆ ಮಾತ್ರ )ನಿಲುವಂಗಿಗಳನ್ನು ಒದಗಿಸಿ ಅವರ ಉಸ್ತುವಾರಿಯಲ್ಲಿ,ಸರ್ಕಾರಿ ಅಧಿಕಾರಿಗಳ ಸಮಕ್ಷಮದಲ್ಲಿ ಶವ ಸಂಸ್ಕಾರ ನಡೆಯಬೇಕು ಆನಂತರ ಚಿತಗಾರ ಮಾಡಬೇಕು ,ಇದು ಮನುಷ್ಯನಿಗೂ ಅವನ ಮರಣದ ನಂತರ ಆ
ಮೃತ ದೇಹಕ್ಕೊ ಸಲ್ಲಿಸುವ ಮಾನವೀಯ ಉಪಕಾರವಾಗುತ್ತದೆ ಭಾರತೀಯ ಪದ್ಧತಿಯಲ್ಲಿ ಮೃತದೇಹಗಳ ಅಗೌರವ ಸಲ್ಲಿಸುವುದು ಸೂಕ್ತವೆನಿಸದು.

ಇಂತಿ
ವಿಕ್ರಂ ಅಯ್ಯಂಗಾರ್
ಅಧ್ಯಕ್ಷರು
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮೈಸೂರು