ಏ.24 ಪರೀಕ್ಷಾ ಶುಲ್ಕ ಪಾವತಿಸಲು ಕಡೆಯ ದಿನ

Share

 

*ಏ.24 ಪರೀಕ್ಷಾ ಶುಲ್ಕ ಪಾವತಿಸಲು ಕಡೆಯ ದಿನ

ಮೈಸೂರು,ಏ.:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19ನೇ ಶೈಕ್ಷಣಿಕ ಸಾಲಿನಿಂದ 2021-22ನೇ ಶೈಕ್ಷಣಿಕ ಸಾಲಿನವರೆಗೆ (ಜುಲೈ/ಜನವಲ ಆವೃತ್ತಿ) ಹಾಗೂ 2022-23ನೇ ಸಾಲಿನಲ್ಲಿ (ಜುಲೈ ಆವೃತ್ತಿಯ) ಪ್ರವೇಶಾತಿ ಪಡೆದಿರುವ ಸ್ನಾತಕ (UG) ಮತ್ತು ಸ್ನಾತಕೋತ್ತರ (PG) ಪದವಿಯ ವಿದ್ಯಾರ್ಥಿಗಳಿಗೆ ಮೇ / ಜೂನ್ -2023 ರ ಮಾಹೆಗಳಲ್ಲಿ ನಡೆಯುವ ಸೆಮಿಸ್ಟರ್ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಅಂತರ್ಜಾಲದ (Online) ಮೂಲಕ ಪಾವತಿಸಲು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು ಪರೀಕ್ಷಾ ಶುಲ್ಕವನ್ನು ಪಾವತಿಸಲು ಏ.24 ಕಡೆಯ ದಿನಾಂಕವಾಗಿದ್ದು, ಏ. 3 ರ ವರೆಗೆ ರೂ.200 ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ವೀಕ್ಷಿಸಬಹಕದು ಹಾಗೂ ಯೂಟ್ಯೂಬ್ ಚಾನಲ್ ಆದ “KSOU DRUSHYAVAHINI” ನಲ್ಲಿಯು ಮಾಹಿತಿ ಲಭ್ಯವಿರುತ್ತದೆ ಮತ್ತು ದೂ.ಸಂ: 8800335638 ನ್ನು ಸಂಪರ್ಕಿಸಬಹುದು ಎಂದು ಪರೀಕ್ಷಾಂಗ ವಿಭಾಗದ ಕುಲ ಸಚಿವರಾದ ಪ್ರೊ. ಪ್ರವೀಣ ಕೆ ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share