ಓಂಕಾರದ ಮಹಾ ಪರಿಪೂರ್ಣತೆ..!

23
adyatmika
ಮೈಸೂರು ಪತ್ರಿಕೆ
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*ಓಂಕಾರದ ಮಹಾ ಪರಿಪೂರ್ಣತೆ..!*

ಸೃಷ್ಟಿಯ ಆದಿ ಮೂಲವೂ ಓಂಕಾರವೇ ಎಂದು
ಸೃಷ್ಟಿಯ ಜ್ಞಾನಶಕ್ತಿಯು ಓಂಕಾರವೇ ಎಂದು ಸೃಷ್ಟಿಯ
ಮೂಲ ರಹಸ್ಯವು ಅಡಗಿರುವುದು ಓಂಕಾರದಲ್ಲೇ ಎಂದು ನಮಗೆ ವೇದ ವೇದಾಂತಗಳ ಸಾರವು ನೀಡುವಂತಹ ಜ್ಞಾನ ಶಕ್ತಿಯು ಉದಯಿಸಿರುವುದು ಓಂಕಾರದ ಶಕ್ತಿಯಿಂದಲೇ ಎಂದು ಆಧ್ಯಾತ್ಮದ ಹಾದಿಯಲ್ಲಿ ಸಾಗುವಂತಹ ಎಲ್ಲರಿಗೂ ಗೋಚರಿಸುತ್ತದೆ.

ನಾವು ಓಂಕಾರದ ಶಕ್ತಿಯನ್ನು ಜಲ ಶಕ್ತಿಯಲ್ಲಿ ನೋಡಿದಾಗ ಪಾತಾಳದ ಗಂಗೆಯಿಂದ ಹಿಡಿದು ಆಕಾಶದ ಗಂಗೆಯವರಿಗೆ ಮನುಷ್ಯನ ಏಳಿಗೆಗೆ ಅನುಕೂಲಿಸುವಂತಹ ತತ್ವವೇ ಇದೆ.

ನಾವು ಓಂಕಾರದ ಶಕ್ತಿಯನ್ನು ಅಗ್ನಿಶಕ್ತಿಯಲ್ಲಿ ಪರಿಚಯಿಸಿಕೊಂಡಾಗ ನಮ್ಮ ದೇಹದ ಜಠರಾಗ್ನಿಯಿಂದ ಹಿಡಿದು ನಮಗೆ ಉಣ ಬಡಿಸುವ ಅನ್ನ ಸ್ಥಿತಿಯವರೆಗೂ, ನಮ್ಮ ದೈವಿಕ ಆತ್ಮಜ್ಯೋತಿಗಳವರೆಗೂ ನಮ್ಮ ಪ್ರಯಾಣದ ಅನಂತದವರೆಗೂ ಅಗ್ನಿಯ ಸ್ಪರ್ಶವೇ ನಮಗೆ ಮಹಾ ಪರಿಪೂರ್ಣತ್ವವನ್ನು ನೀಡುತ್ತದೆ.

ನಾವು ಓಂಕಾರದ ಶಕ್ತಿಯನ್ನು ವಾಯು ಶಕ್ತಿಯಲ್ಲಿ ಪರಿಚಯಿಸಿಕೊಂಡಾಗ ನಮ್ಮ ಪ್ರಾಣಶಕ್ತಿಯನ್ನು ಬೆಳಗಿಸುವುದು ಸಕಲ ಜೀವರಾಶಿಯ ಆಧಾರವು
ವಾಯುವೇ ಆಗಿದೆ. ಅಂದರೆ ಆತ್ಮವೂ ಸೂಕ್ಷ್ಮ ವಾಯು ರೂಪದಲ್ಲಿ ಶರೀರದಲ್ಲಿ ಯೋಗ ಸಂಚಾರವನ್ನು ನಡೆಸುತ್ತಲೇ ಇರುತ್ತದೆ.

ನಾವು ಓಂಕಾರದ ಶಕ್ತಿಯನ್ನು ಭೂ ಶಕ್ತಿಯಲ್ಲಿ ಪರಿಚಯಿಸಿಕೊಂಡಾಗ ಶರೀರದ ಆಕೃತಿಯಿಂದ
ಎಲ್ಲವನ್ನು ಅನುಭವಕ್ಕೆ ಪಡೆಯುವಂತಹ ಸ್ಪರ್ಶವನ್ನು ನೀಡುವುದು ಭೂ ಚೈತನ್ಯದ ಶರೀರಾತ್ಮದಿಂದಲೇ.

ನೀನು ಸಾಧನೆಯಲ್ಲಿ ಯೋಗಿಯಾದಾಗ ಇಡೀ ವಿಶ್ವ ಚೈತನ್ಯವೇ ನಿನ್ನಲ್ಲಿ ಬೆಳಗಿದಾಗ, ನೀನು ನಿನ್ನಲ್ಲೇ ಎಲ್ಲ ಸೃಷ್ಟಿ ರಹಸ್ಯದ ಅನುಭವವನ್ನು ಬ್ರಹ್ಮ ತತ್ವದಲ್ಲಿ ಪಡೆಯುತ್ತಾ ಸಾಗುತ್ತೀಯಾ, ಇದನ್ನೇ ಬ್ರಹ್ಮ ಜ್ಞಾನ ಎಂದು ಹೇಳುತ್ತಾರೆ. ಆಧ್ಯಾತ್ಮ ಎಂದರೆ ಆತ್ಮವೂ ಅನುಭವಿಸುವಂತಹ ಆದಿ ಮೂಲ ಬ್ರಹ್ಮ ಶಕ್ತಿ.
ಅಂತಹ ಸೃಷ್ಟಿಯ ರಹಸ್ಯದ ಆಕಾಶ ಜ್ಞಾನವನ್ನು ಪಡೆಯುವುದೇ, ಪಡೆದು ಸಕಲ ಜೀವರಾಶಿಗಳಿಗೂ
ಮನುಷ್ಯ ಜನ್ಮದ ಪರಿಪೂರ್ಣತೆಯನ್ನು ಅಮೃತ ಶಕ್ತಿಯಲ್ಲಿ ಬೆಳಗಿಸುವುದೇ ಆಧ್ಯಾತ್ಮದ ಮೂಲ ತತ್ವವಾಗಿರುತ್ತದೆ.

ಪಂಚಭೂತಗಳಿಂದಲೂ ಸೃಷ್ಟಿ ಆದಂತಹ ನಿನ್ನ ಶರೀರದ ಪೂರ್ಣತ್ವದಿಂದ, ನಿನ್ನದೇ ಚೈತನ್ಯದಲ್ಲಿ ಸೃಷ್ಟಿ ಆದಂತಹ ಜೀವ ತತ್ವಗಳಿಗೆ ನೀನು ಬೆಳಕಾಗದಿದ್ದರೆ,
ಮನುಜ ಕುಲದ ಆತ್ಮದ ಪ್ರಯಾಣವು ಆಧ್ಯಾತ್ಮದಲ್ಲಿ ವ್ಯರ್ಥವೇ ಆಗಿರುತ್ತದೆ.

ಮನುಷ್ಯ ಜನ್ಮ ಅರ್ಥಪೂರ್ಣವಾದ ಜನ್ಮ. ಇಲ್ಲಿ ಎಲ್ಲವೂ ಕೈಗೆಟಕುವ ರೀತಿಯಲ್ಲಿ ಕಾಣ ಸಿಗುತ್ತವೆ.
ಆಯ್ಕೆ ಒಳಿತು ಆಗಿದ್ದರೆ ನಮಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ.

ಅದಕ್ಕಾಗಿಯೇ ಹಿಂದಿನಿಂದಲೂ ಹೇಳಿರುವುದು, ಆತ್ಮ ಜ್ಞಾನಿಯಾಗಲು ಹೊರಟವನು ದೈವ ಜ್ಞಾನವನ್ನು ಪಡೆಯುತ್ತಾನೆ. ಸಾಧನ ಯೋಗಿಯಾಗಲು ಹೊರಟವನು ಜಗತ್ತಿನ ಜ್ಞಾನಶಕ್ತಿಯಾಗಿ ಬೆಳಗುತ್ತಾನೆ.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*?
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.*ಆಧ್ಯಾತ್ಮಿಕ ವಿಚಾರ ಅಂತರಾಷ್ಟ್ರೀಯ ಸಂಸ್ಥೆಯ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. https://whatsapp.com/channel/0029VaAelmmId7nTN3R3pn1l
⬆️ಇಲ್ಲಿ ಕ್ಲಿಕ್ ಮಾಡಿ.

 


Share