ಕಂಟೇನ್ಮೆಂಟ್ ಝೋನ್‍ಗಳಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‍ಗಳ ನೇಮಕ

822
Share

ಕಂಟೇನ್ಮೆಂಟ್ ಝೋನ್‍ಗಳಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‍ಗಳ ನೇಮಕ

ಕಲಬುರಗಿ ,ಮೇ14 ಕೊರೋನಾ ವೈರಸ್ ಹರಡದಂತೆ ತೀವ್ರ ತರಹದ ಕ್ರಮಗಳನ್ನು ಅನುಷ್ಠಾನಗೊಳಿಸಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಕಲಬುರಗಿ ನಗರದ ಖೂಬಾ ಪ್ಲಾಟ್ (ಕಂಟೇನ್ಮೆಂಟ್ ಝೋನ್)ಗೆ ಕಲಬುರಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಸಂಪ್ಪಂಡಿ ಅವರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್/ಘಟನಾ ನಿಯಂತ್ರಕ (ಇನ್ಸಿಡೆಂಟ್ ಕಮಾಂಡರ್) ರನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ಶರತ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಅದೇ ರೀತಿ ಅಫಜಲಪುರದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರದ ವಾರ್ಡ್ ಸಂಖ್ಯೆ 8ಕ್ಕೆ (ಕಂಟೇನ್ಮೆಂಟ್ ಝೋನ್)ಗೆ ಅಫಜಲಪುರ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್. ಜಾಧವ ಅವರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್/ಘಟನಾ ನಿಯಂತ್ರಕ (ಇನ್ಸಿಡೆಂಟ್ ಕಮಾಂಡರ್) ರನ್ನಾಗಿ ನೇಮಕ ಮಾಡಿ ಕಲಬುರಗಿ ಜಿಲ್ಲಾಧಿಕಾರಿಗಳು ಬುಧವಾರ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.


Share