ಕಟ್ಟಡ ಕುಸಿತ 14 ಮಂದಿ ರಕ್ಷಣೆ

789
Share

ಮುಂಬೈನ ಕಂಡಿವಲಿಯಲ್ಲಿ ಕಟ್ಟಡ ಕುಸಿದಿದ್ದು, 14 ಜನರನ್ನು ರಕ್ಷಿಸಲಾಗಿದೆ, ಯಾವುದೇ ಸಾವು ನೋವು ಸಂಭವಿಸಿಲ್ಲ.

ಮುಂಬೈನ ಕಂಡಿವಲಿ ಪಶ್ಚಿಮ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಕಟ್ಟಡ ಕುಸಿದಿದೆ. ಮೊದಲ ಮಹಡಿಯ ಎಲ್ಲ 12 ಮಂದಿ ಮತ್ತು ನೆಲ ಮಹಡಿಯ ಇಬ್ಬರು ಸೇರಿದಂತೆ ಹದಿನಾಲ್ಕು ಜನರನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡ ರಕ್ಷಿಸಿದೆ.

ಬೆಳಿಗ್ಗೆ 6: 00 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬೆಳಿಗ್ಗೆ 06:10 ರ ಸುಮಾರಿಗೆ ಎಂಸಿಜಿಎಂ ವಿಪತ್ತು ನಿಯಂತ್ರಣ ಕೊಠಡಿಗೆ ಸಬ್ರಿಯಾ ಮಸೀದಿ, ದಾಲ್ಜಿ ಪಾದ, ಕಂಡಿವಲಿ (ಪಶ್ಚಿಮ) ದ ಹಿಂದೆ ಜಿ +1 ಮನೆಯ ಗೋಡೆ ಕುಸಿದಿದೆ ಎಂಬ ಮಾಹಿತಿ ಸಿಕ್ಕಿತು. ಸಿಕ್ಕಿಬಿದ್ದ ಮೂವರನ್ನು ಸ್ಥಳೀಯ ಏಜೆನ್ಸಿಗಳು ರಕ್ಷಿಸಿವೆ. ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.


Share