ಕನಗೋನ ಹಳ್ಳಿಯಲ್ಲಿ ರಾಮದಂಡು

23
Share

 

 

ಕನಗೋನಹಳ್ಳಿಯಲ್ಲಿ ರಾಮದಂಡು

ಮೇಲುಕೋಟೆಯಿಂದ ಮೂರು ಕಿಲೋಮೀಟರ್ ದೂರದ ಕನಗೋನ ಹಳ್ಳಿಯಲ್ಲಿ ರಾಮದಂಡು ರಾಮನ ಗದುಗೆ ನೆನ್ನೆ ಸಂಜೆಯಿಂದ ಪ್ರಾರಂಭವಾಯಿತು. ಇದು ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಕಾರಣಾಂತರದಿಂದ ಸುಮಾರು ಏಳು ವರ್ಷಗಳಿಂದ ನಡೆದಿರಲಿಲ್ಲ. ಈ ವರ್ಷ ನೆನ್ನೆ ಅಂದರೆ ಬುಧವಾರದಿಂದ ಪ್ರಾರಂಭವಾಗಿ ಬರುವ ಕಾರ್ತಿಕ ಸೋಮವಾರದವರೆಗೂ ಸುತ್ತಮುತ್ತ ಹಳ್ಳಿಗಳಲ್ಲಿ ರಾಮನ ದೇವಸ್ಥಾನ ಇರುವ ಕಡೆ ಹೋಗಿ ಪೂಜೆ ಮಾಡಿ ರಾಮದಂಡನ್ನು ತೆಗೆದುಕೊಂಡು ಹೋಗಿ ರಾಮನ ದೇವಸ್ಥಾನದಲ್ಲಿ ದರ್ಶನಕ್ಕೆ ಇಡುತ್ತಾರೆ. ಇದು ನೆನ್ನೆ ರಾತ್ರಿ ಸುಮಾರು 10 ಗಂಟೆಗೆ ಮೇಲುಕೋಟೆ ರಾಮ ಮಂಟಪಕ್ಕೆ ಆಗಮನವಾಯಿತು. ಅಲ್ಲಿ ಪೂಜೆ ಆದ ನಂತರ ಪ್ರಸಾದ ವಿನಿಯೋಗವಾಗಿ ಅಲ್ಲೇ ಗರಡಿ ಮನೆಯಲ್ಲಿ ತಂಗಿದ್ದು ಬೆಳಗ್ಗೆ ಹೊರಡುತ್ತಾರೆ. ಇದರ ಒಂದು ಸಣ್ಣ ತುಣುಕು ವಿಡಿಯೋ ವೀಕ್ಷಿಸಿ…


Share