ಕನ್ನಡ ವಿಕಾಸರತ್ನ ಎಂಬ ಪ್ರಶಸ್ತಿ ಪ್ರಧಾನ

12
Share

 

ಮೈಸೂರು-ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕನ್ನಡ ಹಬ್ಬ ಹಾಗೂ ಕನಕದಾಸ ಜಯಂತಿಯ ಪ್ರಯುಕ್ತ ಮೈಸೂರಿನ ಸಂತ ಜೋಸೆಫರ ಕೇಂದ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗಾಯಕರು, ರಂಗಭೂಮಿ ಕಲಾವಿದರು, ಹವ್ಯಾಸಿ ಬರಹಗಾರರು ಹಾಗೂ ಆತ್ಮೀಯರಾದ ಶ್ರೀ ಬಾಗಳಿ ಮಹೇಶ್ ರವರಿಗೆ ಈ ದಿನ ಕಲಾಮಂದಿರದ ಪಕ್ಕದಲ್ಲಿರುವ ಕಿರು ರಂಗ ಮಂದಿರದಲ್ಲಿ ಕನ್ನಡ ವಿಕಾಸರತ್ನ ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು ಅದರ ಅಂಗವಾಗಿ ಅವರ ನಿವಾಸಕ್ಕೆ ತೆರಳಿ ಗೌರವಿಸಿ ಶುಭ ಹಾರೈಸಲಾಯಿತು.

ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ರಂಗಭೂಮಿ ಕಲಾವಿದರಾದ ಕೆರೆಹಳ್ಳಿ ಬಿ ದೊರೆಸ್ವಾಮಿ ರವರು ಹಾಗೂ ದೊಡ್ಡ ಹುಂಡಿ ಬಸವಣ್ಣನವರು, ಬಿಜೆಪಿ ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷರಾದ ಹೂಟಗಳ್ಳಿ ಎಂ.ಪಿ ನಾಗರಾಜು, ಹಾಗೂ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ಹಾಗೂ ಸಮಾಜಸೇವಕರಾದ ಮನೋಹರ್ ಹಾಗು ಮುಂತಾದವರು ಉಪಸಿತರಿದ್ದರು.


Share