ಕಮಲ ಬಿಟ್ಟು ‘ ಕೈ ‘ ಹಿಡಿದ ಜಗದೀಶ್ ಶೆಟ್ಟರ್

Share

ಬಿಜೆಪಿ ಹಿರಿಯ ಮುಖಂಡ, ಅನುಭವಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಡಿ ಕೆ ಶಿವಕುಮಾರ್ ರವರು ಹುಬ್ಬಳ್ಳಿ ಸೆಂಟ್ರಲ್ ನ ಬಿ ಫಾರ್ಮ್ ನೀಡಿದರು. ಜಗದೀಶ್ ಶೆಟ್ಟರ್ ರವರು ತಾವು ಅಧಿಕಾರದ ಆಸೆಯಿಂದ ಪಕ್ಷ ತೊರೆದಿಲ್ಲವೆಂದೂ , ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದದ್ದು ಬೇಸರ ತಂದಿದೆ ಎಂದು ಹೇಳಿದ್ದಾರೆ. ತಾವು ಮೋದಿ ಅಥವ ನಡ್ಡಾ ಬಗ್ಗೆ ಏನೂ ಹೇಳುವುದಿಲ್ಲ. ಅವರಿಗೆ ಸರಿಯಾದ ವಿಷಯವೇ ತಿಳಿದಿಲ್ಲವೆಂದು ಆಪಾದಿಸಿದ್ದಾರೆ. ತಾವು ಬಿಜೆಪಿ ತೊರೆಯುತ್ತಿರುವುದಾಗಿ ಹೇಳಿದಾಗ ಶೆಟ್ಟರ್ ರವರು ಗದ್ಗದಿತರಾಗಿದ್ದರು.


Share